ಪೂಜೆ ನಂತರ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಸಿ 295 ವಿಮಾನ
ಇದೇ ಮೊದಲ ಬಾರಿಗೆ ಸ್ಪೇನ್ ನಿರ್ಮಿತ ವಿಮಾನವಾದ ಸಿ-295 ವಿಮಾನವನ್ನು ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ವಾಯುಪಡೆಗೆ ಭೀಮಬಲ ಬಂದಂತಾಗಿದೆ.
ಗಾಜಿಯಾಬಾದ್: ಇದೇ ಮೊದಲ ಬಾರಿಗೆ ಸ್ಪೇನ್ ನಿರ್ಮಿತ ವಿಮಾನವಾದ ಸಿ-295 ವಿಮಾನವನ್ನು ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ವಾಯುಪಡೆಗೆ ಭೀಮಬಲ ಬಂದಂತಾಗಿದೆ. ಇದೊಂದು ಸಾಗಣೆ ವಾಹನವಾಗಿದ್ದು, ಸೈನಿಕರನ್ನು ಹಾಗೂ ಯುದ್ಧಸಲಕರಣೆಗಳನ್ನು ಸಾಗಿಸುವ ಅತ್ಯಂತ ಸುಧಾರಿತ ವಿಮಾನವಾಗಿದೆ. ದುರ್ಗಮ ಪ್ರದೇಶಗಳು ಹಾಗೂ ಪ್ರತಿಕೂಲ ವಾತಾವರಣದಲ್ಲೂ ಸಾಗಬಲ್ಲ ಸಾಮರ್ಥ್ಯ ಹೊಂದಿದೆ.
ಹಿಂಡನ್ ಏರ್‌ಫೋರ್ಸ್ ಸ್ಟೇಶನ್‌ನಲ್ಲಿ (Hindon Air Force Station) ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defense Minister Rajnath Singh) ಈ ವಿಮಾನವನ್ನು ಅಧಿಕೃತವಾಗಿ ವಾಯುಪಡೆಗೆ (Indian Air Force) ಸರ್ವಧರ್ಮ ಪೂಜೆ ನಡೆಸಿ ಸೇರ್ಪಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ವಾಯುಪಡೆ ಮುಖ್ಯಸ್ಥ ವಿ.ಆರ್.ಚೌಧರಿ, ವಾಯುಪಡೆಯ ಹಿರಿಯ ಅಧಿಕಾರಿಗಳು ಮತ್ತು ಸ್ಪೇನ್, ಏರ್‌ಬಸ್ ಅಧಿಕಾರಿಗಳು ಭಾಗಿಯಾಗಿದ್ದರು.
ಭಾರತದ ಬಗ್ಗೆ ಹೆಮ್ಮೆ ಇದೆ: ಕೆನಡಾ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತ ಬಾಂಗ್ಲಾದೇಶ
ಈ ವಿಮಾನವನ್ನು ವಡೋದರದಿಂದ ಕಾರ್ಯನಿರ್ವಹಿಸುವ ವಾಯುಪಡೆದ ಅತಿ ಹಳೆಯ ಸ್ಕ್ವಾಡ್ರನ್ ಆದಂತಹ 11ನೇ ಸ್ಕ್ವಾಡ್ರನ್ ‘ರೈನೋಸ್’ಗೆ (11th Squadron 'Rhynos')ಸೇರ್ಪಡೆ ಮಾಡಲಾಗಿದೆ. ಇದನ್ನು ಸ್ಪೇನ್‌ನಲ್ಲಿ ಏರ್‌ಬಸ್ ಸಂಸ್ಥೆ ತಯಾರಿಸುತ್ತಿದ್ದು, ಸೆ.20ರಂದು ಇದನ್ನು ವಾಯಪಡೆಗೆ ಹಸ್ತಾಂತರಿಸಿತ್ತು. 2025ರ ವೇಳೆಗೆ ಒಟ್ಟು 16 ‘ಸಿ-295’ ವಿಮಾನಗಳನ್ನು ವಾಯುಪಡೆ ಪಡೆದುಕೊಳ್ಳಲಿದೆ.
56 ವಿಮಾನದಲ್ಲಿ ಭಾರತದಲ್ಲೇ 40 ಉತ್ಪಾದನೆ
ಈ ವಿಮಾನಗಳಿಗಾಗಿ ಏರ್‌ಬಸ್ ಜತೆ 2021ರಲ್ಲಿ ವಾಯುಪಡೆ (Air Force) 21,935 ಕೋಟಿ ರು. ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ ಒಟ್ಟು 56 ವಿಮಾನಗಳನ್ನು ವಾಯುಪಡೆ ಖರೀದಿಸಲಿದ್ದು, ಇದರಲ್ಲಿ ಮೊದಲ 16 ವಿಮಾನಗಳನ್ನು ಸ್ಪೇನ್‌ನ ಸ್ಯಾನ್ ಪಾಬ್ಲೋದಲ್ಲಿ (San Pablo) ಜೋಡಣೆ ಮಾಡಿ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ. 2ನೇ ವಿಮಾನ ಮುಂದಿನ ವರ್ಷ ಮೇ ವೇಳೆಗೆ ಲಭ್ಯವಾಗಲಿದ್ದು, ಉಳಿದ 14 ವಿಮಾನಗಳು ಹಂತಹಂತವಾಗಿ 2025ರ ವೇಳೆಗೆ ಲಭ್ಯವಾಗಲಿವೆ. ಉಳಿದ 40 ವಿಮಾನಗಳನ್ನು ಏರ್‌ಬಸ್ ಸಂಸ್ಥೆ ಭಾರತದಲ್ಲೇ ಟಾಟಾ ಕಂಪನಿಯ ಸಹಯೋಗದೊಂದಿಗೆ ಆತ್ಮನಿರ್ಭರ ಭಾರತ ಯೋಜನೆಯಡಿ ಉತ್ಪಾದಿಸಲಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ ಲಿ. ಸಂಸ್ಥೆಯಲ್ಲಿ ಅಂತಿಮವಾಗಿ ಇವುಗಳ ಜೋಡಣೆ ಕಾರ್ಯ ನಡೆಯಲಿದೆ.
ಜಗತ್ತು ದ್ವಿಮುಖ ನೀತಿಗಳಿಂದ ತುಂಬಿದೆ: ಜೈಶಂಕರ್ ಕಿಡಿ
ಆವ್ರೋ- 748 ಬದಲು ಈ ವಿಮಾನ
ಈ ಹೊಸ ಸಾಗಣೆ ವಿಮಾನಗಳು 60 ವರ್ಷಗಳ ಹಿಂದೆ ವಾಯುಪಡೆಗೆ ಸೇರ್ಪಡೆಯಾಗಿದ್ದ ‘ಆವ್ರೋ-748’ ('Avro-748')ವಿಮಾನಗಳ ಸ್ಥಾನವನ್ನು ತುಂಬಲಿವೆ.
ಗ್ಲೋಬ್‌ಮಾಸ್ಟರ್ ದೊಡ್ಡದು, ಸಿ-295 ಮಧ್ಯಮ ಗಾತ್ರದ್ದು
ಪ್ರಸ್ತುತ ವಾಯುಪಡೆ ಬಳಸುತ್ತಿರುವ ಗ್ಲೋಬ್ ಮಾಸ್ಟರ್ (Globemaster) ಸರಕು ಸಾಗಣೆ ವಿಮಾನಗಳು ಬೃಹತ್ ಗಾತ್ರದ ವಿಮಾನಗಳಾಗಿದ್ದರೆ, ಸಿ-295 ಮಧ್ಯಮ ಗಾತ್ರದ ವಿಮಾನವಾಗಿದೆ.
ಸಿ-295 ವಿಶೇಷತೆ ಏನು?
ಇವು ಶಕ್ತಿಶಾಲಿ ವಿಮಾನಗಳಾಗಿದ್ದು, ಎಂಥ ಪ್ರತಿಕೂಲ ವಾತಾವರಣದಲ್ಲೂ ಹಾಗೂ ಮಾಮೂಲಿ ವಿಮಾನಗಳಿಗೆ ಪ್ರವೇಶಿಸಲಾಗದ ಸ್ಥಳಗಳಿಗೂ ತೆರಳಿ ಸರಕು ಹಾಗೂ ಸೈನಿಕರ ಸಾಗಣೆ ಮಾಡಬಲ್ಲದಾಗಿದೆ. ಈ ವಿಮಾನ 9 ಟನ್ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಪ್ಯಾರಾಟ್ರೂಪ್‌ಗಳು ಮತ್ತು ಲೋಡ್‌ಗಳನ್ನು ಏರ್‌ಡ್ರಾಪ್ ಮಾಡಬಹುದು, ಅಲ್ಲದೆ, ನೈಸರ್ಗಿಕ ದುರಂತದ ವೇಳೆ, ಅವಘಡಗಳ ವೇಳೆ ರಕ್ಷಣಾ ಕಾರ್ಯಕ್ಕೆ ಬಳಸಬಹುದು. ಹಾಗೂ ವೈದ್ಯಕೀಯ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸೇವೆ ನೀಡಲು ಸಹ ಬಳಕೆ ಮಾಡಲಾಗುತ್ತದೆ.
ನಿಜ್ಜರ್ ಹತ್ಯೆ ಬಗ್ಗೆ ಭಾರತದ ವಿರುದ್ಧ ಕೆನಡಾಕ್ಕೆ ಮಾಹಿತಿ ನೀಡಿದ್ದು ಅಮೆರಿಕ!