ನಿಜ್ಜರ್‌ ಹತ್ಯೆ ಬಗ್ಗೆ ಭಾರತದ ವಿರುದ್ಧ ಕೆನಡಾಕ್ಕೆ ಮಾಹಿತಿ ನೀಡಿದ್ದು ಅಮೆರಿಕ!

ಕೆನಡಾದಲ್ಲಿ ಸಂಭವಿಸಿದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ಭಾರತದ ವಿರುದ್ಧ ಕೆನಡಾಕ್ಕೆ ‘ಗುಪ್ತಚರ ಮಾಹಿತಿ’ ಒದಗಿಸಿದ್ದು ಭಾರತದ ಮಿತ್ರ ದೇಶ ಅಮೆರಿಕ(US). ಅದಾದ ಬಳಿಕ ಕೆನಡಾ ಗುಪ್ತಚರ ಸಂಸ್ಥೆ ಸಿಬ್ಬಂದಿ, ಭಾರತೀಯ ಅಧಿಕಾರಿಗಳ ಸಂಭಾಷಣೆ ಕದ್ದಾಲಿಸಿದ್ದಾರೆ.

America provided intelligence information to Canada against India regarding the killing of Khalistani terrorist Hardeep Singh Nijjar New York Times report akb

ವಾಷಿಂಗ್ಟನ್‌: ‘ಕೆನಡಾದಲ್ಲಿ ಸಂಭವಿಸಿದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ಭಾರತದ ವಿರುದ್ಧ ಕೆನಡಾಕ್ಕೆ ‘ಗುಪ್ತಚರ ಮಾಹಿತಿ’ ಒದಗಿಸಿದ್ದು ಭಾರತದ ಮಿತ್ರ ದೇಶ ಅಮೆರಿಕ(US). ಅದಾದ ಬಳಿಕ ಕೆನಡಾ ಗುಪ್ತಚರ ಸಂಸ್ಥೆ ಸಿಬ್ಬಂದಿ, ಭಾರತೀಯ ಅಧಿಕಾರಿಗಳ ಸಂಭಾಷಣೆ ಕದ್ದಾಲಿಸಿದ್ದಾರೆ. ಈ ಎರಡೂ ಕಾರಣಗಳಿಂದ ಕೆನಡಾಗೆ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಪಾತ್ರದ ಕುರಿತು ಖಚಿತ ಸಾಕ್ಷ್ಯ ಲಭ್ಯವಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ಇದೇ ವೇಳೆ ಕೆನಡಾದಲ್ಲಿನ ಅಮೆರಿಕ ರಾಯಭಾರಿ (US ambassador to Canada) ಕೋಹೆನ್‌ ಕೂಡಾ, ನಿಜ್ಜರ್‌ ಹತ್ಯೆ ಕುರಿತು ‘ಫೈವ್‌ ಐ’ (Five EYe) ಮೈತ್ರಿಕೂಟದ ದೇಶಗಳ ನಡುವೆ ರಹಸ್ಯ ಮಾಹಿತಿ ಹಂಚಿಕೆಯಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ ಮಾಹಿತಿ ವಿನಿಮಯ ಆಗಿದ್ದನ್ನು ಅಮೆರಿಕ ಒಪ್ಪಿಕೊಂಡಿದ್ದು ಇದೇ ಮೊದಲು ಎಂಬುದು ಗಮನಾರ್ಹ. ‘ಫೈವ್‌ ಐ’ ಎಂಬುದು ಕೆನಡಾ, ಅಮೆರಿಕ, ಆಸ್ಟ್ರೇಲಿಯಾ(Australia), ನ್ಯೂಜಿಲೆಂಡ್‌ ಹಾಗೂ ಬ್ರಿಟನ್‌ (Britain) ಒಳಗೊಂಡ ಸಮೂಹವಾಗಿದೆ

.ಖಲಿಸ್ತಾನ್ ಉಗ್ರ ನಿಜ್ಜರ್‌ ಹತ್ಯೆ : ಭಾರತದ ವಿರುದ್ಧ ಸೇಡು ತೀರಿಸಲು ಮುಂದಾದ ಕೆನಡಾ ಪ್ರಧಾನಿ

2023ರ ಜೂ.18ರಂದು ನಿಜ್ಜರ್‌ ಹತ್ಯೆ ಬಳಿಕ ಅಮೆರಿಕದ ಗುಪ್ತಚರ ಸಂಸ್ಥೆಗಳು ಕೆನಡಾಕ್ಕೆ ಕೆಲವೊಂದು ಮಾಹಿತಿಯನ್ನು ನೀಡಿದ್ದವು. ಇದಾದ ಬಳಿಕ ಕೆನಡಾ ಗುಪ್ತಚರ ಸಂಸ್ಥೆ ನಡೆಸಿದ ಭಾರತೀಯರ ಸಂಭಾಷಣೆ ಕದ್ದಾಲಿಕೆಯು ನಿಜ್ಜರ್‌ ಹತ್ಯೆಯಲ್ಲಿ ಭಾರತದ ಪಾತ್ರವನ್ನು ಕೆನಡಾಕ್ಕೆ ಖಚಿತಪಡಿಸಿತು. ಹೀಗಾಗಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau)ಅವರು ಬಹಿರಂಗವಾಗಿಯೇ ಈ ಕುರಿತು ಘೋಷಣೆ ಮಾಡಿದರು ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ಕೆಣಕಿದವರ ಸುಮ್ಮನೆ ಬಿಡಲ್ಲ, 5 ದಿನದಲ್ಲಿ ದೇಶ ಬಿಟ್ಟು ಹೋಗಿ: ಕೆನಡಾ ಏಟಿಗೆ ಭಾರತದ ಎದಿರೇಟು

ಈ ನಡುವೆ ಕೆನಡಾದ ಸಿಟಿವಿ ನ್ಯೂಸ್‌ಗೆ ಸಂದರ್ಶನ ನೀಡಿರುವ ಕೆನಡಾದಲ್ಲಿನ ಅಮೆರಿಕ ರಾಯಭಾರಿ ಡೇವಿಡ್‌ ಕೋಹೆನ್‌ (David Cohen) ‘ಫೈವ್‌ ಐ ಪಾಲುದಾರರ ನಡುವೆ ನಿಜ್ಜರ್‌ (Hardeep Singh Nijjar) ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಕೈವಾಡದ ಕುರಿತು ಮಾಹಿತಿ ವಿನಿಮಯವಾಗಿತ್ತು. ಹತ್ಯೆಯ ಕುರಿತು ನಮಗೆ ಮುಂಚಿನ ಮಾಹಿತಿ ಇರಲಿಲ್ಲ. ಒಂದು ವೇಳೆ ಅಂಥದ್ದೇನಾದರೂ ಮಾಹಿತಿ ಇದ್ದಿದ್ದರೆ ನಾವು ಮೊದಲೇ ಕೆನಡಾ ಜೊತೆ ಇಂಥ ಮಾಹಿತಿ ಹಂಚಿಕೊಳ್ಳುತ್ತಿದ್ದೆವು ಎಂದು ಹೇಳಿದ್ದಾರೆ.

ನಿಮ್ಮ ಮೇಲೂ ದಾಳಿ ಆದೀತು: ಅಮೆರಿಕ ಖಲಿಸ್ತಾನಿಗಳಿಗೆ ಎಫ್‌ಬಿಐ ಎಚ್ಚರಿಕೆ

ವಾಷಿಂಗ್ಟನ್‌: ಕಳೆದ ಜೂ.18ರಂದು ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಬಳಿಕ ಅಮೆರಿಕದಲ್ಲಿನ ಖಲಿಸ್ತಾನಿಗಳ (Khalistani terrorist)ಮೇಲೆ ಅನಾಮಿಕ ವ್ಯಕ್ತಿಗಳಿಂದ ದಾಳಿ ನಡೆಯಬಹುದು ಎಂದು ಅಮೆರಿಕದ ಗುಪ್ತಚರ ಸಂಸ್ಥೆಯಾದ ಎಫ್‌ಬಿಐ (ಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌) ಮುನ್ನೆಚ್ಚರಿಕೆ ನೀಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಮೂಲಗಳನ್ನು ಉಲ್ಲೇಖಿಸಿ ಆನ್‌ಲೈನ್‌ ತನಿಖಾ ಜಾಲತಾಣವಾದ ‘ಇಂಟರ್‌ಸೆಪ್ಟ್‌’ ವರದಿ ಪ್ರಕಟಿಸಿದೆ.

ಜಿ20ಯಲ್ಲಿ ಭಾರತವನ್ನು ಟೀಕಿಸಲು ಮಿತ್ರ ದೇಶಗಳಿಗೆ ಮನವಿ ಮಾಡಿದ್ದ ಕೆನಡಾ

ನಿಜ್ಜರ್‌ ಹತ್ಯೆ ಬಳಿಕ ನಮಗೆ ದೂರವಾಣಿ ಕರೆ ಮಾಡಿದ್ದ ಮತ್ತು ಭೇಟಿಯನ್ನೂ ಮಾಡಿದ್ದ ಎಫ್‌ಬಿಐ ಅಧಿಕಾರಿಗಳು, ನಿಮ್ಮ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು ಎಂದು ಅಮೆರಿಕದಲ್ಲಿನ ಸಿಖ್‌ ಸಮನ್ವಯ ಸಮಿತಿಯ ಪ್ರೀತ್‌ಪಾಲ್‌ ಸಿಂಗ್‌ (Pritpal Singh) ಇಂಟರ್‌ಸೆಪ್ಟ್‌ಗೆ (Intercept) ಮಾಹಿತಿ ನೀಡಿದ್ದಾರೆ. ದಾಳಿ ಯಾರಿಂದ ಎಂಬ ಮಾಹಿತಿ ನೀಡಿರಲಿಲ್ಲ. ಆದರೆ ನೀವು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಮೇಲೆ ದಾಳಿ ಸಾಧ್ಯತೆ ಇದೆ ಎಂದು ಹೇಳಿದ್ದರು ಎಂದು ಪ್ರೀತ್‌ಪಾಲ್‌ ಸಿಂಗ್‌ ತಿಳಿಸಿದ್ದಾರೆ.

ಕೆನಡಾ ಸರ್ಕಾರದಿಂದ ವಜಾ ಆದ ಪವನ್‌ ಕುಮಾರ್ ರಾಯ್ ಯಾರು?

ಅಮೆರಿಕದಲ್ಲಿನ ಇನ್ನಿಬ್ಬರು ಸಿಖ್‌ ವ್ಯಕ್ತಿಗಳು ಕೂಡಾ ತಮಗೆ ಎಫ್‌ಬಿಐನಿಂದ (FBI)ಇಂಥದ್ದೇ ಎಚ್ಚರಿಕೆ ರವಾನೆಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಕೆನಡಾದ ಗುಪ್ತಚರ ಸಂಸ್ಥೆಗಳು ಕೂಡಾ ಕೆನಡಾದಲ್ಲಿನ ಖಲಿಸ್ತಾನಿ ಬೆಂಬಲಿಗರಿಗೆ ಜೀವಾಪಾಯ ಇರುವುದರ ಕುರಿತು ಮುನ್ನೆಚ್ಚರಿಕೆ ನೀಡಿದ್ದರು ಎಂದು ಬ್ರಿಟಿಷ್‌ ಕೊಲಂಬಿಯಾ ಗುರುದ್ವಾರ ಸಮಿತಿಯ ವಕ್ತಾರ ಮೋನಿಂದರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. ಯಾವುದೇ ಕ್ಷಣದಲ್ಲಿ ನಿಮ್ಮ ಮೇಲೆ ದಾಳಿ ನಡೆಯಬಹುದು ಎಂಬ ಎಚ್ಚರಿಕೆ ನಮಗೆ ರವಾನೆಯಾಗಿತ್ತು. ಆದರೆ ಅದು ಭಾರತೀಯರಿಂದ ಎಂಬ ನಿರ್ದಿಷ್ಟ ಮಾಹಿತಿ ಇರಲಿಲ್ಲ. ನಿಜ್ಜರ್‌ ಕೂಡಾ ಇಂಥದ್ದೊಂದು ದಾಳಿಯ ಕುರಿತು ಎಚ್ಚರಿಕೆಯನ್ನು ಕೆನಡಾ ಗುಪ್ತಚರ ಸಿಬ್ಬಂದಿ ನೀಡಿದ್ದರು ಎಂದು ಮೋನಿಂದರ್‌ ಸಿಂಗ್‌ ಖಚಿತಪಡಿಸಿದ್ದಾರೆ.

Latest Videos
Follow Us:
Download App:
  • android
  • ios