ಗುಜರಾತ್: ಬಾಹ್ಯಾಕಾಶದಿಂದ ಬಿದ್ದ ವಿಚಿತ್ರ ಲೋಹದ ಚೆಂಡುಗಳು: ಜನರಲ್ಲಿ ಆತಂಕ!
ವರದಿಗಳ ಪ್ರಕಾರ, ಬಾಹ್ಯಾಕಾಶದಿಂದ ಬಂದ ಉಪಗ್ರಹದ ಅವಶೇಷಗಳೆಂದು ಶಂಕಿಸಲಾದ ಸಣ್ಣ ತುಣುಕುಗಳು ಗುಜರಾತ್‌ನ ಭಲೇಜ್, ಖಂಭೋಲಾಜ್ ಮತ್ತು ರಾಂಪುರ ಸೇರಿದಂತೆ ಒಟ್ಟು ಮೂರು ಸ್ಥಳಗಳಲ್ಲಿ ಬಿದ್ದಿವೆ
ಗುಜರಾತ್ (ಮೇ 13): ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳು ಗುರುವಾರ ಬಾಹ್ಯಾಕಾಶದಿಂದ ಬಿದ್ದ ವಿಚಿತ್ರ ಲೋಹದ ಚೆಂಡುಗಳನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ವರದಿಗಳ ಪ್ರಕಾರ, ಬಾಹ್ಯಾಕಾಶದಿಂದ ಅವಶೇಷಗಳೆಂದು ಶಂಕಿಸಲಾದ ಸಣ್ಣ ತುಣುಕುಗಳು ಆನಂದ್ ಜಿಲ್ಲೆಯ ಮೂರು ಸ್ಥಳಗಳಲ್ಲಿ ಬಿದ್ದಿವೆ. ಆನಂದ್ ಜಿಲ್ಲೆಯಭಲೇಜ್, ಖಂಭೋಲಾಜ್ ಮತ್ತು ರಾಂಪುರದಲ್ಲಿ ಲೋಹದ ಚೆಂಡು ಕಾಣಿಸಿಕೊಂಡಿವೆ.
ಚೆಂಡಿನಂತಿರುವ ವಸ್ತು ಗುರುವಾರ ಸಂಜೆ ಬಿದ್ದಿದು ಗ್ರಾಮಸ್ಥರನ್ನು ಗಾಬರಿಗೊಳಿಸಿದೆ. ಈ ಬಳಿಕ ಗ್ರಾಮಸ್ಥರು ಕೂಡಲೇ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾರೆ. ಜಿಲ್ಲಾ ಪೊಲೀಸರು ಘಟನೆ ಬಗ್ಗೆ ಪರೀಶಿಲನೆ ನಡೆಸುತ್ತಿದ್ದು ತನಿಖೆಯನ್ನು ಪ್ರಾರಂಭಿಸಲು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರನ್ನು ಕರೆಸಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದ ಚಂದ್ರಾಪುರ ಗ್ರಾಮದಲ್ಲಿ ಚೀನಾ ರಾಕೆಟ್ ಅವಶೇಷ ಪತ್ತೆ?
ಗುರುವಾರ ಸಂಜೆ 4.45 ರ ಸುಮಾರಿಗೆ, ಐದು ಕೆಜಿ ತೂಕದ ಮೊದಲ ದೊಡ್ಡ ಕಪ್ಪು ಲೋಹದ ಚೆಂಡು ಭಲೇಜ್‌ನಲ್ಲಿ ಬಿದ್ದಿದೆ ಬಳಿಕೆ ಖಂಭೋಲಾಜ್ ಮತ್ತು ರಾಂಪುರದಲ್ಲಿ ಕೂಡ ಲೋಹದ ಚೆಂಡು ಕಾಣಿಸಿಕೊಂಡಿವೆ. ಎಲ್ಲವೂ ಪರಸ್ಪರ 15 ಕಿಲೋಮೀಟರ್‌ಗಳಷ್ಟು ದೂರದಲ್ಲಿವೆ. ಗ್ರಾಮಸ್ಥರು ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಉಪಗ್ರಹ ಅವಶೇಷ?: ಲೋಹದ ಚೆಂಡು ಉಪಗ್ರಹ ಅವಶೇಷಗಳೆಂದು ಶಂಕಿಸಲಾಗಿದೆ ಎಂದು ಆನಂದ್ ಪೊಲೀಸ್ ಅಧೀಕ್ಷಕ ಅಜಿತ್ ರಾಜಿಯಾನ್ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ಮೊದಲ ಚೆಂಡು ಸಂಜೆ 4.45 ರ ಸುಮಾರಿಗೆ ಬಿದ್ದಿತು ಮತ್ತು ಸ್ವಲ್ಪ ಸಮಯದ ನಂತರ ಇತರ ಎರಡು ಸ್ಥಳಗಳಿಂದ ಇದೇ ರೀತಿಯ ವರದಿಗಳು ಬಂದವು… ಅದೃಷ್ಟವಶಾತ್ ಯಾವುದೇ ಗಾಯ ಅಥವಾ ಸಾವುನೋವು ಸಂಭವಿಸಿಲ್ಲ"ಎಂದು ರಾಜಿಯಾನ್ ತಿಳಿಸಿದ್ದಾರೆ
"ಅವಶೇಷಗಳು ಖಂಭೋಲಾಜ್‌ನ ಮನೆಯೊಂದರಿಂದ ದೂರ ಬಿದ್ದರೆ ಇತರ ಎರಡು ಅವಶೇಷಗಳು ಖಾಲೆ ಸ್ಥಳಗಳಲ್ಲಿ ಬಿದ್ದಿವೆ. ತೆರೆದ ಪ್ರದೇಶ. ಇದು ಯಾವ ರೀತಿಯ ಬಾಹ್ಯಾಕಾಶ ಅವಶೇಷ ಎಂದು ನಮಗೆ ಖಚಿತವಾಗಿಲ್ಲ ಆದರೆ ಗ್ರಾಮಸ್ಥರ ಪ್ರಕಾರ ಇದು ಆಕಾಶದಿಂದ ಬಿದ್ದಿದೆ" ಎಂದು ಪೊಲೀಸ್ ತಿಳಿಸಿದ್ದಾರೆ.
ತನಿಖೆಯನ್ನು ಪ್ರಾರಂಭಿಸಲು ಜಿಲ್ಲಾ ಪೊಲೀಸರು ಎಫ್‌ಎಸ್‌ಎಲ್ ತಜ್ಞರ ತಂಡವನ್ನು ಕರೆಸಿದ್ದಾರೆ ಎಂದು ರಾಜಿಯಾನ್ ಹೇಳಿದ್ದಾರೆ. “ಎಫ್‌ಎಸ್‌ಎಲ್ ಆಗಮಿಸಿ ಅದರ ತನಿಖೆ ನಡೆಸಲಿದೆ. ಘಟನೆಯಲ್ಲಿ ನಾವು ‘ನೋಟ್ ಕೇಸ್’ ದಾಖಲಿಸಿದ್ದೇವೆ ಮತ್ತು ಈ ವಿಷಯದಲ್ಲಿ ಎಫ್‌ಎಸ್‌ಎಲ್‌ನ ವರದಿಗಾಗಿ ಕಾಯುತ್ತೇವೆ. ಏತನ್ಮಧ್ಯೆ, ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಹ ವಸ್ತುಗಳು ಏನಾಗಿರಬಹುದು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ, ”ಎಂದು ರಾಜಿಯಾನ್ ಹೇಳಿದ್ದಾರೆ.
ಇದನ್ನೂ ಓದಿ: ಬ್ರಹ್ಮಾಂಡದಲ್ಲಿ 136 ಜ್ಯೋತಿರ್ವರ್ಷ ದೂರದಲ್ಲಿ ಅಡಗಿದ್ದ ಮಸುಕಾದ ಗ್ಯಾಲಕ್ಸಿ ಪತ್ತೆ!