Asianet Suvarna News Asianet Suvarna News

ಇಂಡಿಯಾಗೆ ಆಘಾತ, ಖುಜರಾಹೋ ಲೋಕಸಭಾ ಕ್ಷೇತ್ರವನ್ನು ಚುನಾವಣೆಗೂ ಮುನ್ನ ಗೆದ್ದ ಎನ್‌ಡಿಎ?

Khajuraho Loksabha Seat: ಏಪ್ರಿಲ್‌  26 ರಂದು 2ನೇ ಹಂತದಲ್ಲಿ ಚುನಾವಣೆಗೆ ಸಜ್ಜಾಗಿರುವ ಮಧ್ಯಪ್ರದೇಶದ ಪ್ರಮುಖ ಕ್ಷೇತ್ರ ಖುಜರಾಹೋದಲ್ಲಿ ಬಿಜೆಪಿ ನಿರಾಳವಾಗಿದೆ. ಇಲ್ಲಿ ಬಿಜೆಪಿಗೆ ಪ್ರಮುಖ ಎದುರಾಳಿಯಾಗಿದ್ದ ಸಮಾಜವಾದಿ ಪಕ್ಷದ ಅಭ್ಯರ್ಥಿ ಮೀರಾ ಯಾದವ್‌ ಅವರ ನಾಮಪತ್ರ ತಿರಸ್ಕೃತವಾಗಿದೆ.
 

Sp Candidate Meira Yadav Nomination Rejected in Khajuraho Lok Sabha Seat san
Author
First Published Apr 5, 2024, 8:29 PM IST

ಭೋಪಾಲ್‌ (ಏ.5): ಖಜುರಾಹೊ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವಿಷ್ಣು ದತ್‌ ಶರ್ಮಾ ವಾಕ್ ಓವರ್ ಪಡೆಯೋದು ಬಹುತೇಕ ನಿಶ್ಚಿತವಾಗಿದೆ. ಇಲ್ಲಿಂದ ಇಂಡಿಯಾ ಮಹಾಮೈತ್ರಿಕೂಟದ ಅಭ್ಯರ್ಥಿ ಮೀರಾ ಯಾದವ್ ಅವರ ಅರ್ಜಿಯನ್ನು ಜಿಲ್ಲಾ ಚುನಾವಣಾ ಆಯೋಗ ತಿರಸ್ಕೃತ ಮಾಡಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ ಈ ಮಾಹಿತಿ ನೀಡಿದ್ದಾರೆ. ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರದಲ್ಲಿ ಲೋಪಗಳಿದ್ದು, ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಡಿ ಶರ್ಮಾ ವಿರುದ್ಧ ಸಮಾಜವಾದಿ ಪಕ್ಷ ಮೀರಾ ಯಾದವ್ ಅವರನ್ನು ಕಣಕ್ಕಿಳಿಸಿತ್ತು. ಸದ್ಯ ಈ ಕ್ಷೇತ್ರದಿಂದ ವಿಡಿ ಶರ್ಮಾ ಅವರೇ ಸಂಸದರಾಗಿದ್ದಾರೆ.

ಪನ್ನಾ ಜಿಲ್ಲಾ ಅಧಿಕಾರಿ ಪ್ರಕಾರ, ಮೀರಾ ಯಾದವ್ ಅವರ ಫಾರ್ಮ್ ಅನ್ನು ತಿರಸ್ಕರಿಸಲಾಗಿದೆ. ನಾಮಪತ್ರದಲ್ಲಿ ಅವರು ನಿಗದಿತ ಸ್ಥಳದಲ್ಲಿ ಸಹಿ ಮಾಡಿಲ್ಲ. ಅದಲ್ಲದೆ, ಅವರು ಹಳೆಯ ಮತದಾರರ ಪಟ್ಟಿಯ ಹೆಸರನ್ನು ನಮೂನೆಯೊಂದಿಗೆ ಲಗತ್ತಿಸಿದ್ದಾರೆ. ನಿಯಮಗಳ ಪ್ರಕಾರ, ಅಭ್ಯರ್ಥಿಯು ನಮೂನೆಯಲ್ಲಿ ಎರಡು ಸ್ಥಳಗಳಲ್ಲಿ ಸಹಿ ಮಾಡಬೇಕಾಗಿತ್ತು ಆದರೆ ಮೀರಾ ಯಾದವ್ ಒಂದು ಸ್ಥಳದಲ್ಲಿ ಮಾತ್ರ ಸಹಿ ಹಾಕಿದ್ದರು. ಅದೇ ಸಮಯದಲ್ಲಿ, ಅವರು ತಮ್ಮ ನಾಮಪತ್ರದಲ್ಲಿ ಹಳೆಯ ಮತದಾರರ ಪಟ್ಟಿಯಲ್ಲಿ ಇದ್ದ ಹೆಸರನ್ನು ಸೇರಿಸಿದ್ದಾರೆ ಎನ್ನಲಾಗಿದೆ.
ನಮಗೆ ಸಮಯ ನೀಡಿಲ್ಲ: ಮೀರಾ ಯಾದವ್ ಅವರ ನಾಮಪತ್ರ ರದ್ದಾದ ನಂತರ ಎಸ್‌ಪಿ ರಾಜ್ಯಾಧ್ಯಕ್ಷ ಮನೋಜ್ ಯಾದವ್ ಈ ಬಗ್ಗೆ ಮಾತನಾಡಿದ್ದಾರೆ. 'ಗುರುವಾರ ನಾವು ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಈ ದೋಷದ ಬಗ್ಗೆ ತಿಳಿಸಿರಲಿಲ್ಲ. ಇಂದೂ ಕೂಡ ನಾವು 3 ಗಂಟೆಗೂ ಮುನ್ನ ಅಲ್ಲಿಯೇ ಇದ್ದವು. ಆದರೆ, ನಾಮಪತ್ರದಲ್ಲಿ ತಿದ್ದುಪಡಿ ಮಾಡುವ ಬಗ್ಗೆ ನಮಗೆ ತಿಳಿಸಿರಲಿಲ್ಲ' ಎಂದಿದ್ದಾರೆ.

ಖಜುರಾಹೊ ಲೋಕಸಭಾ ಕ್ಷೇತ್ರದಿಂದ ವಿಡಿ ಶರ್ಮಾ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದೆ. ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಈ ಸ್ಥಾನವನ್ನು ಸಮಾಜವಾದಿ ಪಕ್ಷಕ್ಕೆ ನೀಡಿತ್ತು. ಈ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ನಂತರ ಈಗ ಬೇರೆ ಯಾವ ಪಕ್ಷದ ದೊಡ್ಡ ನಾಯಕರೂ ಚುನಾವಣಾ ಕಣದಲ್ಲಿಲ್ಲ. ಹೀಗಿರುವಾಗ ವಿಡಿ ಶರ್ಮಾಗೆ ಇಲ್ಲಿಂದ ಹೆಚ್ಚೂ ಕಡಿಮೆ ವಾಕ್‌ಓವರ್‌ ಸಿಕ್ಕಿದೆ. ಸದ್ಯ ವಿಡಿ ಶರ್ಮಾ ಅವರಿಂದ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಮೀರಾ ಯಾದವ್ ಅವರ ನಾಮಪತ್ರವನ್ನು ತಿರಸ್ಕರಿಸಿದ ನಂತರ, ಪ್ರಸ್ತುತ 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಎಸ್‌ಪಿ ನಾಯಕ ತಿಳಿಸಿದ್ದಾರೆ. ಎಲ್ಲರೊಂದಿಗೆ ಕುಳಿತು ಚರ್ಚೆ ಮಾಡಿದ ಬಳಿಕ, ಈ 18 ಅಭ್ಯರ್ಥಿಯ ಪೈಕಿ ಒಬ್ಬರನ್ನೇ ನಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ನಾವು ಅಧಿಕಾರಿಗಳಿಂದ ಲಿಖಿತ ಅರ್ಜಿಗಳನ್ನು ಕೇಳಿದ್ದೇವೆ ಎಂದು ಎಸ್ಪಿ ಮುಖಂಡರು ಹೇಳಿದರು. ಮುಖ್ಯ ಚುನಾವಣಾ ಆಯೋಗದ ಮೊರೆ ಹೋಗುತ್ತೇವೆ. ಅಗತ್ಯ ಬಿದ್ದರೆ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮೊರೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಮೀರಾ ಯಾದವ್ ಅವರ ನಾಮಪತ್ರ ರದ್ದತಿ ಪ್ರಜಾಪ್ರಭುತ್ವದ ಕೊಲೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

'ಘರ್‌ ಮೆ ಗುಸ್‌ ಕೆ ಮಾರೇಂಗೆ..' ಮೋದಿ ಹೇಳಿದ್ದನ್ನು ನಿಜ ಮಾಡಿತಾ ಭಾರತದ RAW?

ಸಮಾಜವಾದಿ ಪಕ್ಷ ಈ ಕ್ಷೇತ್ರದಲ್ಲಿ ಇದಕ್ಕೂ ಮುನ್ನ ಡಾ. ಮನೋಜ್‌ ಯಾದವ್‌ ಅವರನ್ನು ಕಣಕ್ಕಿಳಿಸಿತ್ತು. ಆರೆ, ನಾಮಪತ್ರ ಸಲ್ಲಿಸಲು ಇನ್ನೇನು 48 ಗಂಟೆಗಳು ಇರುವಾಗ ಮನೋಜ್‌ ಯಾದವ್‌ ಬದಲಿಗೆ ಮೀರಾ ಯಾದವ್‌ಗೆ ಟಿಕೆಟ್‌ ನೀಡಲಾಗಿತ್ತು. ಡಾ. ಮನೋಜ್‌ ಯಾದವ್‌ ದುರ್ಬಲ ಅಭ್ಯರ್ಥಿ ಎನ್ನುವ ಕಾರಣಕ್ಕಾಗು ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಟಿಕೆಟ್‌ ಬದಲಾವಣೆ ಮಾಡುವಂತೆ ಎಸ್‌ಪಿಗೆ ಸೂಚನೆ ನೀಡಿತ್ತು. ಇನ್ನೊಂಡೆ ವಿಡಿ ಶರ್ಮ ಅವರನ್ನು ಬಿಜೆಪಿ 2ನೇ ಅವಧಿಗೆ ಇದೇ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. 

ಉತ್ತರ ಪ್ರದೇಶ ಮದರಸಾ ಕಾಯ್ದೆ ರದ್ದು ಅಸಾಂವಿಧಾನಿಕ ಎಂದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಆದೇಶಕ್ಕೆ ತಡೆ!

ಮೀರಾ ಯಾದವ್ ಮಾಜಿ ಶಾಸಕಿ. ಅವರು 2008 ರಲ್ಲಿ ನಿವಾರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದರು. ಆದರೆ ಈಗ ಈ ಕ್ಷೇತ್ರವು ಟಿಕಮ್‌ಗಢ ಲೋಕಸಭಾ ಕ್ಷೇತ್ರದ ಭಾಗವಾಗಿದೆ. 2023ರಲ್ಲಿಯೂ ಮೀರಾ ನಿವಾರಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಸೋಲನ್ನು ಎದುರಿಸಬೇಕಾಯಿತು. ಮಾಜಿ ಶಾಸಕಿ ಮೀರಾ ಯಾದವ್ ಝಾನ್ಸಿ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.

Follow Us:
Download App:
  • android
  • ios