Asianet Suvarna News Asianet Suvarna News

Omicron Panic: ಮಹಾರಾಷ್ಟ್ರದಲ್ಲಿ ದಕ್ಷಿಣ ಆಫ್ರಿಕಾದಿಂದ ಮರಳಿದವನಿಗೆ ಕೋವಿಡ್ ಪಾಸಿಟಿವ್‌!

ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ  2019ರ ಡಿಸೆಂಬರ್‌ ವೇಳೆ ಚೀನಾದಲ್ಲಿ ಪ್ರಾರಂಭಿಕವಾಗಿ ಕಾಣಿಸಿಕೊಂಡ ಕೊರೋನಾ ವೈರಸ್‌ ನಂತರದಲ್ಲಿ ಇಡೀ ಜಗತ್ತನೇ ಆವರಿಸಿತು. ವಿವಿಧ ರೂಪಗಳಲ್ಲಿ ಜಗತ್ತನ್ನು ಕಾಡುತ್ತಿರುವ ಕೋರೋನಾ ಈಗ ರೂಪಾಂತರಿಯಾಗಿ ಮತ್ತೆ ಹೊಸ ವೇಷದಲ್ಲಿ ಬಂದಿದ್ದು, ಮತ್ತೆ ಆತಂಕ ಸೃಷ್ಟಿಯಾಗಿದೆ.

south Africa Returnee Tested Covid 19 Positive with omicron variants no sure in Maharashtra akb
Author
Maharashtra, First Published Nov 29, 2021, 1:28 PM IST
  • Facebook
  • Twitter
  • Whatsapp

ಮುಂಬೈ(ನ.29): ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಮರಳಿದ ವ್ಯಕ್ತಿಯೊಬ್ಬನಿಗೆ ಕೋವಿಡ್‌ ಪಾಸಿಟಿವ್‌ ಇದ್ದು, ಇದು ರೂಪಾಂತರಿ ಕೋರೋನಾ ಒಮಿಕ್ರಾನ್‌ ಪ್ರಕರಣವೇ ಎಂಬುದು ಖಚಿತಗೊಂಡಿಲ್ಲ.ದಕ್ಷಿಣ ಆಫ್ರಿಕಾದ ಬಹುತೇಕ ಕಡೆ ಒಮಿಕ್ರಾನ್(Omicron) ರೂಪಾಂತರಿ ಕೋರೋನಾ ಪ್ರಕರಣಗಳು ಹೆಚ್ಚಿವೆ. ಮಹಾರಾಷ್ಟ್ರದ ಥಾಣೆ(Thane) ಜಿಲ್ಲೆಯಲ್ಲಿರುವ ಡೊಂಬಿವಿಲಿಗೆ ಬಂದಿದ್ದ ವ್ಯಕ್ತಿಗೆ ಕೋವಿಡ್‌ ಟೆಸ್ಟ್‌ನಲ್ಲಿ ಪಾಸಿಟಿವ್‌ ಬಂದಿದೆ ಎಂದು ಕಲ್ಯಾಣ ಡೊಂಬಿವಿಲಿ ಮುನ್ಸಿಪಲ್‌ ಕಾರ್ಪೋರೇಷನ್‌ (KDMC)ನ ಅಧಿಕಾರಿಯೊಬ್ಬರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಿಂದ ಬಂದ ಬಳಿಕ ಈತ ಕೋವಿಡ್‌ ಪರೀಕ್ಷೆ ನಡೆಸಿದಾಗ ಪಾಸಿಟಿವ್‌ ಬಂದಿದೆ ಎಂದು ಅವರು ಹೇಳಿದರು. 

ಆದರೆ ಇದು ರೂಪಾಂತರಿ ಕೊರೋನಾ ಒಮಿಕ್ರಾನ್‌ ಪ್ರಕರಣವೇ ಎಂಬುದಿನ್ನು ಖಚಿತವಾಗಿಲ್ಲ. ಒಮಿಕ್ರಾನ್‌ ಕೊರೋನಾ ರೂಪಾಂತರಿ ಬಗ್ಗೆ ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ. ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌( Cape Town)ನಿಂದ ಈ ವ್ಯಕ್ತಿ ನವಂಬರ್‌ 24ರಂದು ಮಹಾರಾಷ್ಟ್ರದ ಡೊಂಬಿವಿಲಿಗೆ ಬಂದಿದ್ದರು. ದಕ್ಷಿಣ ಆಫ್ರಿಕಾದಿಂದ ಬಂದ ಮೇಲೆ ಅವರು ಯಾವುದೇ ವ್ಯಕ್ತಿಯನ್ನು ಸಂಪರ್ಕಿಸಿಲ್ಲ ಎಂದು ಡೊಂಬಿವಿಲಿಯ ಮುನ್ಸಿಪಲ್‌ ಕಾರ್ಪೋರೇಷನ್‌ನ ಆರೋಗ್ಯ ಅಧಿಕಾರಿ ಡಾ. ಪ್ರತಿಭಾ ಪನ್ಪತಿಲ್‌ ( Dr Pratiba Panpatil) ಹೇಳಿದ್ದಾರೆ.  ಪ್ರಸ್ತುತ ಈ ವ್ಯಕ್ತಿ  ಮುನ್ಸಿಪಲ್‌ ಕಾರ್ಪೋರೇಷನ್‌ನ ಆರ್ಟ್‌ ಗ್ಯಾಲರಿಯಲ್ಲಿ ನಿರ್ಮಿಸಿರುವ ಐಸೋಲೇಷನ್‌ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಕೆಡಿಎಂಸಿಯ ಆರೋಗ್ಯ ಇಲಾಖೆ ಈ ಬಗ್ಗೆ ಜಾಗೃತವಾಗಿದ್ದು, ಹೊಸ ರೂಪಾಂತರಿ ವಿರುದ್ಧ ಹೋರಾಡಲು ಸಿದ್ಧಗೊಂಡಿದ್ದೇವೆ ಎಂದು ಡಾ. ಪ್ರತಿಭಾ ಹೇಳಿದರು. 

Covid19: ಸೋಂಕಿತರಲ್ಲೀಗ ಲಸಿಕೆ ಪಡೆದವರೇ ಹೆಚ್ಚು ಜನ..!

ಒಮಿಕ್ರಾನ್‌ ಭೀತಿ ಹಿನ್ನೆಲೆ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಹೊಸ ಪ್ರಭೇದದ ವೈರಸ್‌ನ ಸಂಪರ್ಕಕ್ಕೆ ಬಂದಿರುವ ಎಲ್ಲ ದೇಶಗಳಿಂದ ಬರುವ ಜನರಿಗೆ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ ನೆಗೆಟಿವ್‌ ಬಂದರಷ್ಟೇ ನಗರ ಪ್ರವೇಶಕ್ಕೆ ಅವಕಾಶ ನೀಡಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಅಲೆ ನಿಯಂತ್ರಣಕ್ಕೆ ಬಂದ ಸಂದರ್ಭದಲ್ಲೇ ದಕ್ಷಿಣ ಆಫ್ರಿಕಾ(South Africa), ಹಾಂಕಾಂಗ್‌(Hong Kong), ಬೋಟ್ಸಾವನಾ(Botswana) ದೇಶಗಳಲ್ಲಿ ಕೋವಿಡ್‌ ಹೊಸ ಪ್ರಭೇದ ಒಮಿಕ್ರೋನ್‌(Omicron) ಕಾಣಿಸಿಕೊಂಡಿದೆ. ಜತೆಗೆ ಮೈಸೂರು, ಧಾರವಾಡ, ಬೆಂಗಳೂರಿನ ಕೆಲ ವಿದ್ಯಾರ್ಥಿ ನಿಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಆ ಹಾಸ್ಟೆಲ್‌ಗಳನ್ನು ಕ್ವಾರಂಟೈನ್‌(Quarantine) ಮಾಡಲಾಗಿದೆ. ಪ್ರಮುಖವಾಗಿ ಕೇರಳದಿಂದ ಬಂದ ಪ್ಯಾರಾಮೆಡಿಕಲ್‌ ವಿದ್ಯಾರ್ಥಿಗಳು(Students), ಸಿಬ್ಬಂದಿಯಿಂದ ಹೆಚ್ಚು ಸೋಂಕು ಹರಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

Omicron: ವಿದೇಶದಿಂದ ಬಂದವರಿಗೆ ಕಡ್ಡಾಯ ಟೆಸ್ಟ್‌: ಸಿಎಂ ಬೊಮ್ಮಾಯಿ

ಈ ಎಲ್ಲಾ ಕಾರಣಗಳಿಂದ ದಕ್ಷಿಣ ಕನ್ನಡ, ಮಡಿಕೇರಿ, ಚಾಮರಾಜನಗರ, ಮೈಸೂರು ಸೇರಿದಂತೆ ಕೇರಳ(Kerala) ಗಡಿ ಜಿಲ್ಲೆಗಳಿಂದ ಬರುವವರಿಗೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ(Covid Test) ಕಡ್ಡಾಯಗೊಳಿಸಿ ನೆಗೆಟಿವ್‌ ಬಂದರಷ್ಟೇ ನಗರ ಪ್ರವೇಶಕ್ಕೆ ಅವಕಾಶ ನೀಡುವುದು. ಪಾಸಿಟಿವ್‌ ಬಂದರೆ ಕ್ವಾರಂಟೈನ್‌ ಕೇಂದ್ರ, ಅಗತ್ಯಬಿದ್ದರೆ ಆಸ್ಪತ್ರೆಗೆ(Hospital) ದಾಖಲಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೋವಿಡ್-19 ವೈರಸ್‌ನ (Covid 19) ಹೊಸ ರೂಪಾಂತರವಾದ ಓಮಿಕ್ರಾನ್ (Omicron) (ಬಿ.1.1.529) ಬಗ್ಗೆ ವಿಶ್ವದ ಅನೇಕ ದೇಶಗಳಲ್ಲಿ ಭೀತಿ ಹುಟ್ಟಿಕೊಂಡಿದೆ. ಇದು ಡೆಲ್ಟಾ (Delta Varient) ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕೆ ಅಮೆರಿಕನ್ ಫಾರ್ಮಾ ಕಂಪನಿ ಮಾಡೆರ್ನಾ (Moderna) ಬೂಸ್ಟರ್ ಡೋಸ್ ತಯಾರಿಸುವುದಾಗಿ ಘೋಷಿಸಿದೆ. ಹೊಸ ಆತಂಕವನ್ನು ಎದುರಿಸಲು ಕಂಪನಿಯು ಕಾರ್ಯನಿರ್ವಹಿಸುತ್ತಿದೆ ಎಂದು ಮಾಡೆರ್ನಾ ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಲಸಿಕೆಯನ್ನು ಹೊಸ ರೂಪಾಂತರದ ಪ್ರಕಾರ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ.

Follow Us:
Download App:
  • android
  • ios