Asianet Suvarna News Asianet Suvarna News

Omicron: ವಿದೇಶದಿಂದ ಬಂದವರಿಗೆ ಕಡ್ಡಾಯ ಟೆಸ್ಟ್‌: ಸಿಎಂ ಬೊಮ್ಮಾಯಿ

*   ನೆಗೆಟಿವ್‌ ಬಂದರಷ್ಟೇ ನಗರ ಪ್ರವೇಶಕ್ಕೆ ಅವಕಾಶ
*   ಒಮಿಕ್ರೋನ್‌ ನಿಯಂತ್ರಣಕ್ಕೆ ರಾಜ್ಯದಲ್ಲಿ ಕಠಿಣ ಕ್ರಮ
*   ಹೊಸ ವರ್ಷಾಚರಣೆ ಬಗ್ಗೆ ಮುಂದೆ ನಿರ್ಧಾರ 
 

Covid Test Mandatory Who Came From Foreign to Karnataka Says  Basavaraj Bommai grg
Author
Bengaluru, First Published Nov 29, 2021, 9:04 AM IST

ಬೆಂಗಳೂರು(ನ.29):  ರಾಜ್ಯದಲ್ಲಿ(Karnataka) ಕೋವಿಡ್‌ ನಿಯಂತ್ರಣಕ್ಕೆ ಎಲ್ಲ ರೀತಿ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ಹೆಚ್ಚಿರುವ ಕೇರಳ, ಮಹಾರಾಷ್ಟ್ರದಿಂದ ಬರುವ ಜನರಿಗೆ ಗಡಿ ಜಿಲ್ಲೆಗಳಲ್ಲಿ ಹಾಗೂ ಹೊಸ ಪ್ರಭೇದದ ವೈರಸ್‌ನ ಸಂಪರ್ಕಕ್ಕೆ ಬಂದಿರುವ ಎಲ್ಲ ದೇಶಗಳಿಂದ ಬರುವ ಜನರಿಗೆ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ ನೆಗೆಟಿವ್‌ ಬಂದರಷ್ಟೇ ನಗರ ಪ್ರವೇಶಕ್ಕೆ ಅವಕಾಶ ನೀಡಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಅಲೆ ನಿಯಂತ್ರಣಕ್ಕೆ ಬಂದ ಸಂದರ್ಭದಲ್ಲೇ ದಕ್ಷಿಣ ಆಫ್ರಿಕಾ(South Africa), ಹಾಂಕಾಂಗ್‌(Hong Kong), ಬೋಟ್ಸಾವನಾ(Botswana) ದೇಶಗಳಲ್ಲಿ ಕೋವಿಡ್‌ ಹೊಸ ಪ್ರಭೇದ ಒಮಿಕ್ರೋನ್‌(Omicron) ಕಾಣಿಸಿಕೊಂಡಿದೆ. ಜತೆಗೆ ಮೈಸೂರು, ಧಾರವಾಡ, ಬೆಂಗಳೂರಿನ ಕೆಲ ವಿದ್ಯಾರ್ಥಿ ನಿಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ.

Omicron Variant: ಮತ್ತಷ್ಟು ದೇಶಗಳಿಗ ವ್ಯಾಪಿಸಿದ ಒಮಿಕ್ರೋನ್‌: ಆಸ್ಪ್ರೇಲಿಯಾ, ನೆದರ್‌ಲೆಂಡ್‌ನಲ್ಲಿ ಪತ್ತೆ!

ಮುಂಜಾಗ್ರತಾ ಕ್ರಮವಾಗಿ ಆ ಹಾಸ್ಟೆಲ್‌ಗಳನ್ನು ಕ್ವಾರಂಟೈನ್‌(Quarantine) ಮಾಡಲಾಗಿದೆ. ಪ್ರಮುಖವಾಗಿ ಕೇರಳದಿಂದ ಬಂದ ಪ್ಯಾರಾಮೆಡಿಕಲ್‌ ವಿದ್ಯಾರ್ಥಿಗಳು(Students), ಸಿಬ್ಬಂದಿಯಿಂದ ಹೆಚ್ಚು ಸೋಂಕು ಹರಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಈ ಎಲ್ಲಾ ಕಾರಣಗಳಿಂದ ದಕ್ಷಿಣ ಕನ್ನಡ, ಮಡಿಕೇರಿ, ಚಾಮರಾಜನಗರ, ಮೈಸೂರು ಸೇರಿದಂತೆ ಕೇರಳ(Kerala) ಗಡಿ ಜಿಲ್ಲೆಗಳಿಂದ ಬರುವವರಿಗೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ(Covid Test) ಕಡ್ಡಾಯಗೊಳಿಸಿ ನೆಗೆಟಿವ್‌ ಬಂದರಷ್ಟೇ ನಗರ ಪ್ರವೇಶಕ್ಕೆ ಅವಕಾಶ ನೀಡುವುದು. ಪಾಸಿಟಿವ್‌ ಬಂದರೆ ಕ್ವಾರಂಟೈನ್‌ ಕೇಂದ್ರ, ಅಗತ್ಯಬಿದ್ದರೆ ಆಸ್ಪತ್ರೆಗೆ(Hospital) ದಾಖಲಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ವಿದೇಶಗಳಲ್ಲಿ(Foreign) ಪತ್ತೆಯಾಗಿರುವ ಹೊಸ ಪ್ರಭೇದ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಸಂಪೂರ್ಣ ವಿವರ ಗೊತ್ತಿಲ್ಲ. ಆದರೆ, ಬಹಳ ವೇಗವಾಗಿ ಹರಡುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಭಾರತದಲ್ಲೂ(India) ಹೆಚ್ಚು ಎಚ್ಚರಿಕೆ ವಹಿಸಲು ಪ್ರಧಾನಿ(Narendra Modi) ನಿರ್ದೇಶನ ನೀಡಿದ್ದಾರೆ. ನಮ್ಮಲ್ಲಿ ಹೊಸ ಪ್ರಭೇದ ಪತ್ತೆಯಾಗಿಲ್ಲವಾದರೂ ರಾಜ್ಯದಲ್ಲೂ ಸಭೆ ನಡೆಸಿ ಎಲ್ಲಾ ರೀತಿಯ ಕಟ್ಟೆಚ್ಚರ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿ ನಿಲಯಗಳನ್ನು(Hostel) ಕಂಟೈನ್ಮೆಂಟ್‌ ಝೋನ್‌ಗಳನ್ನಾಗಿಸಿ ಅಲ್ಲಿರುವ ಎಲ್ಲರಿಗೂ ಪರೀಕ್ಷೆ ನಡೆಸಲಾಗುತ್ತಿದೆ. ಪಾಸಿಟಿವ್‌ ಬಂದವರಿಗೆ ಚಿಕಿತ್ಸೆಯನ್ನೂ ಆರಂಭಿಸಲಾಗಿದೆ ಎಂದು ತಿಳಿಸಿದರು.

ಬೂಸ್ಟರ್‌ ಡೋಸ್‌ಗೆ ಕೇಂದ್ರಕ್ಕೆ ಪತ್ರ

ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌(Booster Dose)ಕೋವಿಡ್‌ ಲಸಿಕೆ(Covid Vaccine) ನೀಡಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ(Central Government) ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ವೇಳೆ ತಿಳಿಸಿದರು.

ಸಾಕಷ್ಟು ಮಂದಿ ಎರಡನೇ ಡೋಸ್‌ ಲಸಿಕೆಯನ್ನೂ ಪಡೆದಿಲ್ಲ. ಆರೋಗ್ಯ ಇಲಾಖೆ(Department of Health) ನೀಡಿರುವ ಮಾಹಿತಿ ಪ್ರಕಾರ ಶೇ.91ರಷ್ಟು ಮಂದಿ ಮೊದಲ ಡೋಸ್‌ ಪಡೆದಿದ್ದರೆ, ಶೇ.57ರಷ್ಟು ಮಂದಿ ಮಾತ್ರ ಎರಡನೇ ಡೋಸ್‌ ಪಡೆದಿದ್ದಾರೆ. ಡಿಸೆಂಬರ್‌ ವೇಳೆಗೆ ಶೇ.70ರಷ್ಟು ಜನರಿಗೆ ಎರಡನೇ ಡೋಸ್‌ ನೀಡುವ ಗುರಿ ಇದೆ ಎಂದರು.

Omicron Variant: ಹೊಸ ತಳಿ ವೈರಸ್‌ ಭಯ, ಲಸಿಕೆಗೆ ಮುಗಿಬಿದ್ದ ಜನ..!

ಹೊಸ ವರ್ಷಾಚರಣೆ ಬಗ್ಗೆ ಮುಂದೆ ನಿರ್ಧಾರ

ಹೊಸ ವರ್ಷ ಆಚರಣೆ ವಿಚಾರವಾಗಿ ಮುಂದಿನ ದಿನಗಳಲ್ಲಿ ಕೋವಿಡ್‌ ನಿಯಂತ್ರಣದ ಬೆಳವಣಿಗೆಗಳನ್ನು ಅವಲೋಕಿಸಿ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಇದಕ್ಕಾಗಿ ಮಾಲ್‌ಗಳು, ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಎರಡನೇ ಡೋಸ್‌ ಪಡೆಯಬೇಕೆಂದು ಸೂಚಿಸಿ ಸ್ಥಳದಲ್ಲೇ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುವುದು. ರಾಜ್ಯದಲ್ಲಿ ಪ್ರಸ್ತುತ 80 ಲಕ್ಷ ಡೋಸ್‌ ಲಸಿಕೆ ಲಭ್ಯವಿದೆ ಎಂದು ಹೇಳಿದರು.
 

Follow Us:
Download App:
  • android
  • ios