Asianet Suvarna News Asianet Suvarna News

Covid wave ಕೋವಿಡ್ 4ನೇ ಅಲೆ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಭೀತಿ, ಸೌತ್ ಆಫ್ರಿಕಾದಲ್ಲಿ 5ನೇ ಅಲೆ ಆರಂಭ!

  • ಭಾರತದಲ್ಲಿ 4ನೇ ಅಲೆ ಭೀತಿ, ನಿರ್ಬಂಧ ಜಾರಿ
  • 4ನೇ ಅಲೆ ತೀವ್ರವಾಗುವ ಲಕ್ಷಣ ಗೋಚರ
  • ಸೌತ್ ಆಫ್ರಿಕಾದಲ್ಲಿ 5ನೇ ಅಲೆ ಆರಂಭ
     
South Afria reports BA4 BA5 Fear of entering covid 19 5th wave hospitalisations picking up ckm
Author
Bengaluru, First Published Apr 29, 2022, 4:26 PM IST | Last Updated Apr 29, 2022, 4:26 PM IST

ನವದೆಹಲಿ(ಏ.29): ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಒಂದೊಂದೆ ನಿರ್ಬಂಧ ಜಾರಿಯಾಗಿದೆ. ತಜ್ಞರು ಜೂನ್ ತಿಂಗಳಲ್ಲಿ 4ನೇ ಅಲೆ ತೀವ್ರತೆ ಕುರಿತು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಕಾರಣ ಸೌತ್ ಆಫ್ರಿಕಾದಲ್ಲಿ 5ನೇ ಅಲೆ ಆರಂಭಗೊಂಡಿದೆ. ಇದು ಭಾರತಕ್ಕೂ ಹರಡುವ ಭೀತಿ ಎದುರಾಗಿದೆ.

ಸೌತ್ ಆಫ್ರಿಕಾದಲ್ಲಿ ಆರಂಭವಾದ 3ನೇ ಅಲೆ ಭಾರತಕ್ಕೆ ಹರಡಲು ಹೆಚ್ಚು ದಿನ ತೆಗೆದುಕೊಂಡಿರಲಿಲ್ಲ. ಅದೃಷ್ಟವಶಾತ್ ಭಾರತದಲ್ಲಿ 3ನೇ ಅಲೆ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ ಸದ್ಯ ಭಾರತದಲ್ಲೇ 4ನೇ ಅಲೆ ಕಾಣಿಸಿಕೊಂಡಿರುವ ಬೆನ್ನಲ್ಲೇ ಸೌತ್ ಆಫ್ರಿಕಾದ 5ನೇ ಅಲೆ ಪರಿಣಾಮ ಭಾರತದ ಮೇಲೆ ಬಿದ್ದರೆ ಪರಿಸ್ಥಿತಿ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಮಹದೇವಪುರದಿಂದಲೇ ಕರ್ನಾಟಕಕ್ಕೆ 4ನೇ ಅಲೆ..?

ಸೌತ್ ಆಫ್ರಿಕಾದಲ್ಲಿ BA.4 ಹಾಗೂ BA.5 ಓಮಿಕ್ರಾನ್ ಉಪತಳಿ ಪ್ರಕರಣ ಪತ್ತೆಯಾಗಿದೆ. ಕಳೆದ 14 ದಿನಗಳಲ್ಲಿ BA.4 ಹಾಗೂ BA.5 ಪ್ರಕರಣ ಹೆಚ್ಚಾಗಿದೆ.  ಕಳೆದರು ವಾರದಲ್ಲಿ ಸೌತ್ ಆಫ್ರಿಕಾದಲ್ಲಿ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆ ದಾಖಲಾಗುವ ಸಂಖ್ಯೆ ಕೂಡ ಹೆಚ್ಚಾಗಿದೆ. ಇದು ಕಳವಳಕಾರಿಯಾಗಿದೆ . ಜನವರಿಯಲ್ಲಿ 4ನೇ ಅಲೆ ಎದುರಿಸಿದ ಸೌತ್ ಆಫ್ರಿಕಾ ಇದೀಗ 5ನೇ ಅಲೆ ಎದುರಿಸಬೇಕಾಗಿದೆ.

ಸೌತ್ ಆಫ್ರಿಕಾ ಆರೋಗ್ಯ ಸಚಿವ ಜೋ ಫಾಲಾ ಈ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ. ಹೊಸ ಪ್ರಕರಣಗಳಲ್ಲಿ ಸೋಂಕಿತರ ಸಾವಿನ ಪ್ರಕರಣ ಕಡಿಮೆ ಇದೆ ಅನ್ನೋದೇ ಸಮಾಧಾನ. ಪ್ರತಿಯೊಬ್ಬರು ಮುನ್ನಚ್ಚೆರಿಕೆ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

ಭಾರತದಲ್ಲಿ ಇದೀಗ 4ನೇ ಅಲೆ ಶುರುವಾಗಿದೆ. ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಗಣನೀಯ ಏರಿಕೆಯಾಗಿದೆ. 

Covid Crisis: 46 ದಿನದ ಬಳಿಕ 3000 ಗಡಿ ದಾಟಿದ ಕೋವಿಡ್‌, ಮತ್ತೆ ಹೆಚ್ಚಿದ ಆತಂತ..!

ದಿಲ್ಲಿಯಲ್ಲಿ 1490 ಕೇಸು, 4.62 ಪಾಸಿಟಿವಿಟಿ
ದೆಹಲಿಯಲ್ಲಿ ಗುರುವಾರ ಕೋವಿಡ್‌ ಮತ್ತಷ್ಟುಹೆಚ್ಚಳವಾಗಿದೆ. 1490 ಪ್ರಕರಣ ದಾಖಲಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ 4.62ರಷ್ಟುದಾಖಲಾಗಿದೆ.

ರಾಜ್ಯದಲ್ಲಿ 40 ದಿನ ಬಳಿಕ 150+ ಕೋವಿಡ್‌ ಪ್ರಕರಣ
ರಾಜ್ಯದಲ್ಲಿ 40 ದಿನಗಳ ಬಳಿಕ ಮೊದಲ ಬಾರಿಗೆ ದೈನಂದಿನ ಸೋಂಕಿತರ ಸಂಖ್ಯೆ 150ರ ಗಡಿ ದಾಟಿದೆ. ಗುರುವಾರ 154 ಮಂದಿಯಲ್ಲಿ ಕೋವಿಡ್‌ -19 ದೃಢಪಟ್ಟಿದೆ. 116 ಮಂದಿ ಚೇತರಿಸಿಕೊಂಡಿದ್ದಾರೆ. ಸತತ 20 ದಿನದಿಂದ ಸೋಂಕಿನಿಂದ ಮೃತಪಟ್ಟಿದ್ದು ವರದಿಯಾಗಿಲ್ಲ. ಮಾಚ್‌ರ್‍ 19ರಂದು 173 ಪ್ರಕರಣ ವರದಿಯಾಗಿತ್ತು. ಅದಾದ ಬಳಿಕ ದೈನಂದಿನ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಾ ಬಂದಿತ್ತು. ಆದರೆ ಇದೀಗ ಮತ್ತೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹತ್ತು ದಿನಗಳ ಹಿಂದೆ 1,400ರ ಅಸುಪಾಸಿಗೆ ಕುಸಿದಿದ್ದ ಸಕ್ರಿಯ ಸೋಂಕಿತರ ಸಂಖ್ಯೆ 1,751ಕ್ಕೆ ಜಿಗಿದಿದೆ. 10,319 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಪಾಸಿಟಿವಿಟಿ ದರ ಶೇ.1.49 ದಾಖಲಾಗಿದೆ. ಫೆ.18ಕ್ಕೆ ಶೇ.1.59 ಪಾಸಿಟಿವಿಟಿ ದರ ದಾಖಲಾದ ಬಳಿಕದ ಗರಿಷ್ಠ ಪಾಸಿಟಿವಿಟಿ ದರ ವರದಿಯಾಗಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟುಏರಿಕೆ ದಾಖಲಾಗಿದ್ದು, ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 3,303 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. 46 ದಿನಗಳ ನಂತರ ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 3000 ಗಡಿಯನ್ನು ದಾಟಿದೆ.ಇದೇ ವೇಳೆಯಲ್ಲಿ 39 ಸೋಂಕಿತರು ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕುಗಳ ಸಂಖ್ಯೆ 16,980ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.66ಕ್ಕೆ ಏರಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.61ರಷ್ಟಿದೆ.

Latest Videos
Follow Us:
Download App:
  • android
  • ios