ಕೋಲ್ಕತ್ತಾ ವೈದ್ಯ ವಿದ್ಯಾರ್ಥಿನಿಯ ಮೇಲೆ ಆಗಿರುವುದು ರೇಪ್, ಗ್ಯಾಂಗ್‌ರೇಪ್ ಅಲ್ಲ: ಕೋರ್ಟ್‌ಗೆ ತಿಳಿಸಿದ ಸಿಬಿಐ!
ಸಿಬಿಐ ಇದುವರೆಗೆ ನಡೆಸಿರುವ ತನಿಖೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದಿರುವುದು ಅತ್ಯಾಚಾರ, ಇದು ಗ್ಯಾಂಗ್‌ರೇಪ್‌ಅಲ್ಲ. ಇದರಲ್ಲಿ ಸಂಜಯ್ ರಾಯ್ ಎನ್ನುವ ವ್ಯಕ್ತಿಯೊಬ್ಬನೇ ಭಾಗಿಯಾಗಿದ್ದಾನೆ ಎಂದು ತಿಳಿಸಿದೆ.
ನವದೆಹಲಿ (ಆ.22): 31ರ ಹರೆಯದ ಕೋಲ್ಕತ್ತಾದ ವೈದ್ಯೆ ವಿದ್ಯಾರ್ಥಿನಿಯ ರೇಪ್ & ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಲ್ಲಿಯವರೆಗೆ ನಡೆಸಿರುವ ತನಿಖೆಯಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎನ್ನುವುದನ್ನು ಸೂಚಿಸಿದೆ.ಈ ಕುರಿತಾಗಿ ಸಿಬಿಐ ಕೋರ್ಟ್‌ಗೆ ಕೂಡ ತಿಳಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಆಗಸ್ಟ್ 9 ರಂದು ಸರ್ಕಾರಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಭೀಕರ ಅಪರಾಧದಲ್ಲಿ ಆಸ್ಪತ್ರೆಯ ವರ್ಕರ್ ಸಂಜಯ್ ರಾಯ್ ಎನ್ನುವ ಏಕೈಕ ವ್ಯಕ್ತಿ ಭಾಗಿಯಾಗಿದ್ದಾನೆ ಎನ್ನುವುದನ್ನು ತನಿಖೆ ಸೂಚಿಸಿದೆ. ಫೋರೆನ್ಸಿಕ್ ವರದಿ ಮೂಲಗಳ ಪ್ರಕಾರ, ಕೋಲ್ಕತ್ತಾ ಪೊಲೀಸರ ಕಸ್ಟಡಿಯಲ್ಲಿರುವ ಆಸ್ಪತ್ರೆಯ ವರ್ಕರ್ ಸಂಜಯ್ ರಾಯ್ ಆಕೆಯನ್ನು ಅತ್ಯಾಚಾರ ಮಾಡಿ ಕೊಂದಿದ್ದಾನೆ. ಡಿಎನ್‌ಎ ವರದಿ ಕೂಡ ಇದರಲ್ಲಿ ಒಬ್ಬ ವ್ಯಕ್ತಿಯ ಕೈವಾಡ ಇರೋದನ್ನು ದೃಢಪಡಿಸಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಆಗಿತ್ತು, ಅನಿಖೆ ಸರಿಯಾಗಿ ನಡೆಯುತ್ತಿಲ್ಲ ಎನ್ನುವ ಆರೋಪಗಳನ್ನು ಮಾಡಲಾಗಿತ್ತು. ಇದರ ಬೆನ್ನಲ್ಲಿಯೇ ಇಡೀ ದೇಶದಲ್ಲಿ ಇದರ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.
ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ವೈದ್ಯೆಯ ಅರೆಬೆತ್ತಲೆ ಶವ ಪತ್ತೆಯಾದ ಒಂದು ದಿನದ ನಂತರ ಸಂಜಯ್ ರಾಯ್‌ನನ್ನು ಆಗಸ್ಟ್ 10 ರಂದು ಬಂಧನ ಮಾಡಲಾಗಿತ್ತು. ವೈದ್ಯೆಯಯನ್ನು ಹತ್ಯೆಗೈದ ಕಟ್ಟಡಕ್ಕೆ ರಾಯ್ ಪ್ರವೇಶಿಸುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳ ಮೂಲಕವೂ ಸಿಬಿಐ ಪರಿಶೀಲನೆ ನಡೆಸಿದೆ ಎಂದು ವರದಿಯಾಗಿದೆ. ಕೌಟುಂಬಿಕ ದೌರ್ಜನ್ಯದ ಇತಿಹಾಸವನ್ನು ಹೊಂದಿರುವ ಮತ್ತು ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಪ್ರವೇಶವನ್ನು ಹೊಂದಿದ್ದ ರಾಯ್ ಅವರ ಬ್ಲೂಟೂಥ್ ಹೆಡ್‌ಸೆಟ್ ಸ್ಥಳದಲ್ಲಿ ಪತ್ತೆಯಾದ ಬೆನ್ನಲ್ಲಿಯೇ ಆತನನ್ನು ಬಂಧಿಸಲಾಗಿತ್ತು. ಆದರೆ, ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಕುರಿತು ಸಿಬಿಐ ತನಿಖೆಯನ್ನು ಇನ್ನೂ ಮುಕ್ತಾಯಗೊಳಿಸಿಲ್ಲ. ಏಜೆನ್ಸಿಯು ವಿಧಿವಿಜ್ಞಾನ ವರದಿಯನ್ನು ಅವರ ಅಂತಿಮ ಅಭಿಪ್ರಾಯಕ್ಕಾಗಿ ಸ್ವತಂತ್ರ ತಜ್ಞರಿಗೆ ಕಳುಹಿಸುವ ಸಾಧ್ಯತೆಯಿದೆ.
ಇದಕ್ಕೂ ಮುನ್ನ ವೈದ್ಯ ವಿದ್ಯಾರ್ಥಿನಿಯ ಯೋನಿ ಸ್ವ್ಯಾಬ್ ಪರೀಕ್ಷೆಯಲ್ಲಿ ಆಕೆಯ ವಜೈನಾದಲ್ಲಿ 150 ಮಿಲಿಗ್ರಾಂ ವೀರ್ಯ ಕಂಡು ಬಂದಿದೆ ಎಂದು ಹೇಳಲಾಗಿತ್ತು. ಇದರಿಂದಾಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಆಗಿರುವ ಸಾಧ್ಯತೆಯೂ ಇದೆ ಎಂದು ವೈದ್ಯರು ಹೇಳಿದ್ದರು. ಅದಲ್ಲದೆ, ಆಕೆಗೆ ಆಗಿರುವ ಗಾಯಗಳನ್ನು ಗಮನಿಸಿದರೆ, ಇದರಲ್ಲಿ ಕೇವಲ ಒಬ್ಬ ವ್ಯಕ್ತಿ ಇರುವ ಸಾಧ್ಯತೆ ಕಡಿಮೆ ಎಂದು ಡಾ ಸುವರ್ಣ ಗೋಸ್ವಾಮಿ ತಿಳಿಸಿದ್ದರು. ಸಂತ್ರಸ್ತೆಯ ಪೋಷಕರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಈ ವಾದವನ್ನು ಮಂಡಿಸಿದ್ದರು. "ಅವಳ ದೇಹದಲ್ಲಿ ಗಮನಾರ್ಹ ಪ್ರಮಾಣದ ವೀರ್ಯ" ಇದೆ ಎಂದು ಆರೋಪಿಸಿ ಸಾಮೂಹಿಕ ಅತ್ಯಾಚಾರ ಆಗಿರಬಹುದು ಎಂದಿದ್ದರು.
ನಿಮಗೆ ಆಸೆಯಾದ್ರೆ ನಮ್ಮ ಬಳಿ ಬನ್ನಿ ಆದ್ರೆ... ಕಾಮುಕರಿಗೆ ವೇಶ್ಯೆಯೊಬ್ಬಳ ಮನಕಲುಕುವ ಮನವಿ
ಆ ಆರೋಪಗಳನ್ನು ತಿರಸ್ಕರಿಸಿದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಶವಪರೀಕ್ಷೆ ವರದಿಯನ್ನು ಉಲ್ಲೇಖಿಸಿ, ವರದಿಯಲ್ಲಿ ಉಲ್ಲೇಖಿಸಲಾದ 150 ಗ್ರಾಂ ಒಳ ಮತ್ತು ಹೊರ ಜನನಾಂಗದ ಸಿಕ್ಕ ವೀರ್ಯದ ತೂಕವನ್ನು ಉಲ್ಲೇಖಿಸುತ್ತದೆ ಎಂದು ಹೇಳಿದರು. ದ್ರವಗಳನ್ನು ಮಿಲಿಲೀಟರ್‌ಗಳಲ್ಲಿ ಅಳೆಯಲಾಗುತ್ತದೆ ಎಂದು ಅವರು ಹೇಳಿದರು.
ಆರ್‌ಜಿ ಕರ್ ಆಸ್ಪತ್ರೆಯ ಪ್ರಿನ್ಸಿಪಾಲ್‌ನ ಮಾಫಿಯಾ ರಾಜ್; ಹೆಣಗಳ ಮಾರಾಟ, ಫೇಲ್ ಆದ ವಿದ್ಯಾರ್ಥಿಗಳಿಂದ ಕಮೀಷನ್!