ಕೊರೋನಾ ಕಷ್ಟಕಾಲ ಆರಂಭವಾದಾಗಿನಿಂದ ಜನರ ಸೇವೆಗೆ ನಿಂತಿರುವ ಬಾಲಿವುಡ್ ನಟ ಸೋನು ಸೂದ್ ಮತ್ತೊಮ್ಮೆ ತಮ್ಮ ಮಾನವೀಯ ಕೆಲಸದ ಮೂಲಕ ಸುದ್ದಿಯಾಗಿದ್ದಾರೆ. ಮಹಾರಾಷ್ಟ್ರದ ಪೊಲೀಸ್‌ ಸಿಬ್ಬಂದಿಗೆ ಸುಮಾರು 25 ಸಾವಿರ ಮುಖಗವಸುಗಳನ್ನು ವಿತರಿಸಿದ್ದಾರೆ.

ಬಾಲಿವುಡ್ ನಟ ಸೋನು ಸೂದ್ ಪೊಲೀಸ್ ಸಿಬ್ಬಂದಿಗೆ 25 ಸಾವಿರ ಫೇಸ್‌ ಶೀಳ್ಡ್ ನೀಡಿರುವುದಾಗಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ ತಿಳಿಸಿದ್ದಾರೆ. ಸೋನು ಸೂದ್‌ಗೆ ಥ್ಯಾಂಕ್ಸ್ ಹೇಳಿರುವ ಸಚಿವರು ಅವರೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದಾರೆ.

ಬಾಲಿವುಡ್ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ಸ್‌ಗೆ ರೇಷನ್ ಕಿಟ್ ನೀಡಿದ ಸೋನು ಸೂದ್

ಪೊಲೀಸ್ ಸಿಬ್ಬಂದಿಗೆ 25 ಸಾವಿರ ಫೇಸ್‌ ಶೀಲ್ಡ್ ಕೊಟ್ಟ ನಟ ಸೋಜು ಸೂದ್‌ ಜೀ ಅವರಿಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ. ಕೊರೋನಾ ಭಾರತಕ್ಕೆ ಕಾಲಿಟ್ಟಾಗಿನಿಂದಲೂ ಜನರಿಗೆ ನೆರವಾಗುತ್ತಲೇ ಬಂದಿದ್ದಾರೆ ಸೋನು ಸೂದ್. ಲಾಕ್‌ಡೌನ್ ಸಂದರ್ಭ ಬಹಳಷ್ಟು ಜನರಿಗೆ ತವರು ಸೇರಲು ಬಸ್, ರೈಲು, ವಿಮಾನಗಳ ವ್ಯವಸ್ಥೆಯನ್ನೂ ಮಾಡಿದ್ದರು. ಇದೀಗ ಈ ಸಂಬಂಧವೇ ಪುಸ್ತಕವನ್ನು ಹೊರತರುವ ಸಿದ್ಧತೆಯಲ್ಲಿದ್ದಾರೆ ನಟ.

ಕಳೆದ ಮೂರು ತಿಂಗಳು ನನ್ನ ಪಾಲಿಗೆ ಬದುಕು ಬದಲಾಯಿಸುವ ಅನುಭವವಾಗಿತ್ತು. ವಲಸಿಗರ ಜೊತೆ ದಿನದ 16-18 ಗಂಟೆ ಕಳೆದ ಅನುಭವ ಅವರ ನೋವನ್ನು ಅರ್ಥ ಮಾಡಿಸಿದೆ. ಅವರು ಅವರ ಮನೆ ಕಡೆ ಹೊರಟು ನಿಂತಾಗ ನನ್ನ ಮನಸಿಗಾದ ಸಮಾಧಾನ, ಖುಷಿ ಅಪಾರ. ಅವರ ನಗುವಿನ ಮುಖ, ಸಂತೋಷದ ಕಣ್ಣೀರು ನನ್ನ ಜೀವನದ ವಿಶೇಷ ಅನುಭವ. ಕೊನೆಯ ಕಾರ್ಮಿಕನು ತನ್ನ ಪ್ರೀತಿಯ ಮನೆಯನ್ನು ಸೇರುವ ತನಕ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಅವರು ನಟ ಸೋನು ಹೇಳಿದ್ದಾರೆ.

ಆರತಿ ಬೆಳಗಿ ಸೋನು ಸೂದ್‌ಗೆ ಇಡ್ಲಿ ಮಾರಾಟಗಾರರ ಧನ್ಯವಾದ

ನಾನು ಈ ಕೆಲಸ ಮಾಡುವುದ್ಕಾಗಿಯೇ ಮುಂಬೈಗೆ ಬಂದಿದ್ದೇನೇನೋ ಎಂದೆನಿಸುತ್ತದೆ. ನನ್ನ ಹೃದಯ ಮುಂಬೈನಲ್ಲಿ ಮಿಡಿಯುವಾಗ ಅದರ ಸಣ್ಣ ಭಾಗಗಳು ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್, ಅಸ್ಸಾಂ ಮತ್ತು ಇತರ ರಾಜ್ಯದಲ್ಲಿಯೂ ಇದೆ ಎನಿಸುತ್ತಿದೆ. ಅಲ್ಲೆಲ್ಲವೂ ನನಗೆ ಹೊಸ ಸ್ನೇಹಿತರಿದ್ದಾರೆ, ಅವರೊಂದಿಗೆ ಆಳವಾದ ಸಂಬಂಧವಿದೆ. ನಾನು ಇವೆಲ್ಲವನ್ನೂ ಪುಸ್ತಕ ರೂಪದಲ್ಲಿ ಸಂರಕ್ಷಿಸಲು ನಿರ್ಧರಿಸಿದ್ದೇನೆ ಎಂದು ಅವರು ತಮ್ಮ ಪುಸ್ತಕದ ಬಗ್ಗೆ ಹೇಳಿದ್ದಾರೆ.