* ಪ್ರಧಾನಿಗೆ ಪತ್ರ ಬರೆದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ* ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ಧಾವಿಸುವಂತೆ ಮನವಿ* ಅನಾಥ ಮಕ್ಕಳಿಗೆ ನವೋದಯ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುವಂತೆ ಒತ್ತಾಯ* ಗುಟಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿ

ನವದೆಹಲಿ(ಮೇ 20) ಕೊರೋನಾ ಸೋಂಕು ಏರಿಕೆಯಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪತ್ರ ಬರೆದಿದ್ದಾರೆ. ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ಧಾವಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅನಾಥ ಮಕ್ಕಳಿಗೆ ನವೋದಯ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲು ಒತ್ತಾಯ ಮಾಡಿದ್ದಾರೆ.

ಪ್ರತಿಯೊಬ್ಬರಿಗೂ ಗುಂಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಕೊರೋನಾ ಸಂಕಷ್ಟದಿಂದ ಕುಟುಂಬ ಕಳೆದುಕೊಂಡ ಮಕ್ಕಳ ನೆರವಿಗೆ ಧಾವಿಸಬೇಕು. ದೇಶದ ಭವಿಷ್ಯವಾಘಿರುವ ಮಕ್ಕಳಿಗೆ ಉತ್ತಮ ಬದುಕು ಕಟ್ಟಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

'ಸಿದ್ದು ಡಿಸಿ ಸಭೆ ಕರೆಯಂಗಿಲ್ಲ' 'ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ'

ಲಸಿಕೆಗೆ ಭಿನ್ನ ದರ ಏಕೆ ಎಂದು ಪ್ರಶ್ನೆ ಮಾಡಿ ಸೋನಿಯಾ ಈ ಹಿಂದೆ ಪತ್ರ ಬರೆದಿದ್ದರು. 18 ವರ್ಷದಿಂದ 45 ವರ್ಷದವರಿಗೆ ಉಚಿತ ಲಸಿಕೆ ಒದಗಿಸಿ. ಅವರ ಪ್ರಾಣ ಅತ್ಯಮೂಲ್ಯವಾದುದು. ಎಲ್ಲ ಜನರಿಗೂ ಉಚಿತ ಲಸಿಕೆ ಸಿಗುವಂತೆ ಮಾಡಿ. ಸಿರಂ ಇನ್ಸಿಟಿಟ್ಯೂಟ್ ಲಸಿಕೆಯನ್ನ ರಿಲೀಸ್ ಮಾಡಿದೆ. ಆದರೆ ಒಂದೇ ಸಂಸ್ಥೆ ಮೂರು ವಿಭಿನ್ನ ದರ ಇಟ್ಟಿದೆ. ಕೇಂದ್ರ ಸರ್ಕಾರಕ್ಕೆ ಲಸಿಕೆಗೆ 150 ದರ ಫಿಕ್ಸ್ ಮಾಡಿದೆ. ರಾಜ್ಯ ಸರ್ಕಾರಗಳಿಗೆ 400 ರೂ.ದರ ನಿಗದಿಯಾಗಿದೆ. ಖಾಸಗಿಯವರಿಗೆ 600 ರೂ. ದರ ನಿಗದಿಪಡಿಸಲಾಗಿದೆ. ಒಂದೇ ಸಂಸ್ಥೆ ಒಂದೇ ಲಸಿಕೆಗೆ ವಿಭಿನ್ನ ದರವೇಕೆ? ಎಂದು ಪ್ರಶ್ನೆ ಮಾಡಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona