* ಮಹಾರಾಷ್ಟ್ರದ ಬೆನ್ನಲ್ಲೇ ಗೋವಾದಲ್ಲೂ ಕಾಂಗ್ರೆಸ್‌ಗೆ ಬಿಕ್ಕಟ್ಟು* ಏಕಾಏಕಿ ನಾಪತ್ತೆಯಾದ ಕಾಂಗ್ರೆಸ್ ಶಾಸಕರು* ಐವರು ಶಾಸಕರು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ
ಪಣಜಿ(ಜು.11): ಗೋವಾದಲ್ಲಿ 11 ಕಾಂಗ್ರೆಸ್ ಶಾಸಕರ ಪೈಕಿ ಐವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಹಿರಿಯ ನಾಯಕ ಮುಕುಲ್ ವಾಸ್ನಿಕ್ ಅವರನ್ನು ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ವೀಕ್ಷಿಸಲು ಗೋವಾಗೆ ಭೇಟಿ ನೀಡುವಂತೆ ಭಾನುವಾರ ಹೇಳಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭಾನುವಾರ ತಡರಾತ್ರಿ ಟ್ವೀಟ್ ಮಾಡಿ, "ಗೋವಾದ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಡಲು ಸಂಸದ ಮುಕುಲ್ ವಾಸ್ನಿಕ್ ಅವರನ್ನು ಅಲ್ಲಿಗೆ ಹೋಗುವಂತೆ ಕಾಂಗ್ರೆಸ್ ಅಧ್ಯಕ್ಷರು ಕೇಳಿದ್ದಾರೆ" ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಗೋವಾದ ಕೆಲವು ಕಾಂಗ್ರೆಸ್ ಶಾಸಕರು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಬಹುದು ಎಂಬ ಊಹಾಪೋಹಗಳ ಮಧ್ಯೆ, ಇದು ಪ್ರಜಾಪ್ರಭುತ್ವವಲ್ಲ, ಆದರೆ ಬಿಜೆಪಿಯ “ಹಣ ವ್ಯವಸ್ಥೆ” ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಭಾನುವಾರ ಆರೋಪಿಸಿದ್ದಾರೆ. ಆಷಾಢ ಏಕಾದಶಿಯಂದು ಸೋಲಾಪುರ ಜಿಲ್ಲೆಯ ಪಂಢರಪುರದಲ್ಲಿ ವಿಠ್ಠಲ ದೇವರಿಗೆ ಪೂಜೆ ಸಲ್ಲಿಸಿದ ನಂತರ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಅವರು ಈ ವಿಷಯ ತಿಳಿಸಿದರು.
11 ಕಾಂಗ್ರೆಸ್ ಶಾಸಕರ ಪೈಕಿ ಕೆಲವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂಬ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಈ ಪೈಕಿ ಎಷ್ಟು ಶಾಸಕರು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆಯಿಂದ ತನಿಖೆ ಎದುರಿಸುತ್ತಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಈ ಬಗ್ಗೆ ಕಿಡಿ ಕಾರುತ್ತಾ, "ಇದು ನಿಮಗೆ ತಿಳಿದಿದ್ದರೆ, ಇದು ಪ್ರಜಾಪ್ರಭುತ್ವವಲ್ಲ, ಆದರೆ ಇದು ಬಿಜೆಪಿಯ ಹಣದ ವ್ಯವಸ್ಥೆ ಎಂದು ನಿಮಗೆ ತಿಳಿಯುತ್ತದೆ" ಎಂದರು.ಗೋವಾದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಭಾನುವಾರ ತನ್ನ 11 ಶಾಸಕರ ಪೈಕಿ ಐವರರನ್ನು "ತಲುಪಲು ಸಾಧ್ಯವಿಲ್ಲ" ಎಂದು ಹೇಳಿದೆ. ಇವರಲ್ಲಿ ಇಬ್ಬರು ಶಾಸಕರಾದ ಮೈಕೆಲ್ ಲೋಬೋ ಮತ್ತು ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಭಾರತೀಯ ಜನತಾ ಪಕ್ಷf (ಬಿಜೆಪಿ) ಜೊತೆ ನಿಂತು, ಕಾಂಗ್ರೆಸ್ ಪಕ್ಷದ ವಿರುದ್ಧ "ಪಿತೂರಿ" ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಗೋವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಸ್ಥಾನದಿಂದ ಲೋಬೊ ಅವರನ್ನು ಕಾಂಗ್ರೆಸ್ ತೆಗೆದುಹಾಕಿದೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್, ‘ಬಿಜೆಪಿ 2/3 ವಿಭಜನೆಗೆ ಪ್ರಯತ್ನಿಸುತ್ತಿದೆ, ನಮ್ಮ ಅನೇಕ ನಾಯಕರಿಗೆ ದೊಡ್ಡ ಮೊತ್ತದ ಹಣವನ್ನು ನೀಡಲಾಗಿದೆ, ನೀಡಿರುವ ಮೊತ್ತದಿಂದ ನನಗೆ ಆಶ್ಚರ್ಯವಾಗಿದೆ, ಆದರೆ ನಮ್ಮ 6 ಶಾಸಕರು ದೃಢವಾಗಿ ನಿಂತಿದ್ದಾರೆ, ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.
