ನವದೆಹಲಿ(ಜ.  06) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ  'ಭಾರತ ರತ್ನ' ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಒತ್ತಾಯಿಸಿದ್ದಾರೆ.

'ರಾಹುಲ್ ರಿಂದ ಮಾತ್ರ ಪ್ರಜಾಪ್ರಭುತ್ವ ಮರುಸ್ಥಾಪನೆ ಸಾಧ್ಯ'

ಟ್ವೀಟ್ ಮಾಡಿರುವ ರಾವತ್,  ಸೋನಿಯಾ ಮತ್ತು ಮಾಯಾವತಿ ಇಬ್ಬರೂ ಪ್ರಮುಖ ರಾಜಕೀಯ ಧುರೀಣರು. ನೀವು ಅವರ ರಾಜಕಾರಣ ಒಪ್ಪದೆ ಇರಬಹುದು ಆದರೆ ಅವರು ಉಲ್ಲೇಖ ಮಾಡುವ ಸಂಗತಿಗಳನ್ನು ತಳ್ಳಿ ಹಾಕುವಂತೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

 ಹಲವಾರು ವರ್ಷಗಳಿಂದ ಶೋಷಿತ ಮತ್ತು ಕೆಳವರ್ಗದ ಜನರ ಪರವಾಗಿ ಮಾಯಾವತಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸೋನಿಯಾ ಸಹ ಜನಪರ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಲ್ಲ. ಇಬ್ಬರಿಗೂ ಭಾರತ ರತ್ನ ಗೌರವ  ನೀಡಬೇಕು ಎಂದು ಕೋರಿದ್ದಾರೆ.