ಕಾಶ್ಮೀರದಲ್ಲಿ ಪುತ್ರನ ಭೇಟಿಗೆ ಸೋನಿಯಾ ಬೋಟ್ ಸಂಚಾರ, ಇಂದು ಮಗಳು ಅಳಿಯನ ಜತೆ ಸುತ್ತಾಟ
ಖಾಸಗಿ ಭೇಟಿಗಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿಯೊಂದಿಗೆ ಶನಿವಾರ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೆ ಆಗಮಿಸಿದರು.

ಶ್ರೀನಗರ (ಆ.27): ಖಾಸಗಿ ಭೇಟಿಗಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿಯೊಂದಿಗೆ ಶನಿವಾರ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೆ ಆಗಮಿಸಿದರು. ಈ ವೇಳೆ ಸೋನಿಯಾರನ್ನು ಪಕ್ಷದ ಮುಖಂಡರು ಸ್ವಾಗತಿಸಿದರು. ಆಗಮನದ ಬಳಿಕ ಇಲ್ಲಿನ ನೈಗೀನ್ ಲೇಕ್‌ಗೆ ಭೇಟಿ ನೀಡಿದ ಸೋನಿಯಾ, ರಾಹುಲ್ ಗಾಂಧಿ ಜೊತೆ ದೋಣಿಯಲ್ಲಿ ವಾಯುವಿಹಾರ ನಡೆಸಿದರು. ಈ ಭೇಟಿಯ ಭಾಗವಾಗಿ ಸೋನಿಯಾ, ರಾಹುಲ್ ಅವರು ಭಾನುವಾರ ಗುಲ್ಮಾಗ್‌ರ್‍ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಇವರನ್ನು ಪ್ರಿಯಾಂಕಾ ಗಾಂಧಿ ಹಾಗೂ ಅವರ ಪತಿ ರಾಬರ್ಟ್ ವಾದ್ರಾ ಸೇರಿಕೊಳ್ಳಲಿದ್ದಾರೆ. ಇದೊಂದು ಸಂಪೂರ್ಣ ಖಾಸಗಿ ಭೇಟಿಯಾಗಿದ್ದು, ಯಾವುದೇ ರಾಜಕೀಯ ಕಾರ್ಯಕ್ರಮವಿಲ್ಲ.
ಜಮ್ಮು ಮತ್ತು ಕಾಶ್ಮೀರ ಅವರ ಮನೆ. ಇಲ್ಲಿನ ಜನರನ್ನು ಮತ್ತು ಈ ನೆಲವನ್ನು ಅವರು ಪ್ರೀತಿಸುತ್ತಾರೆ, ಆದ್ದರಿಂದ ಅವರು ಇಲ್ಲಿ ಎರಡು ದಿನಗಳನ್ನು ಶಾಂತಿಯಿಂದ ಕಳೆಯಲು ಬಯಸುತ್ತಾರೆ. ಇದು ರಾಜಕೀಯ ಭೇಟಿಯಲ್ಲ, ಇದು ಸಂಪೂರ್ಣ ವೈಯಕ್ತಿಕ ಮತ್ತು ಖಾಸಗಿ ಭೇಟಿ ಎಂದು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಳ್ಳು ಸುದ್ದಿ ಪತ್ತೆಗೆ ವಿಶೇಷ ತಂಡ, ಬೆಂಗಳೂರಿನಲ್ಲಿ 3 ಹಂತದಲ್ಲಿ ತಂಡ ರಚನೆ
ರಾಹುಲ್ ನೈಜೀನ್ ಲೇಕ್‌ನಲ್ಲಿರುವ ಹೌಸ್‌ಬೋಟ್‌ನಲ್ಲಿ ತಂಗಿದ್ದು, ಶನಿವಾರ ಕುಟುಂಬವು ರೈನಾವಾರಿ ಪ್ರದೇಶದ ಹೋಟೆಲ್‌ನಲ್ಲಿ ತಂಗಿದೆ. ಗಾಂಧಿ ಕುಟುಂಬಕ್ಕೆ ಹೋಟೆಲ್‌ನ ಹಳೆಯ ನೆನಪುಗಳಿವೆ ಎಂದು ಪಕ್ಷದ ಹಿರಿಯ ನಾಯಕ ಹೇಳಿದ್ದಾರೆ.
ಎರಡು ರಾತ್ರಿಗಳ ನಂತರ ಅವರು ಗುಲ್ಮಾರ್ಗ್‌ಗೆ ಭೇಟಿ ನೀಡಲಿದ್ದಾರೆ. ಆದಾಗ್ಯೂ, ಭೇಟಿಯ ಸಮಯದಲ್ಲಿ ಕುಟುಂಬಕ್ಕೆ ಯಾವುದೇ ರಾಜಕೀಯ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿಲ್ಲ. ರಾಹುಲ್ ಕಳೆದ ಒಂದು ವಾರದಿಂದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿದ್ದಾರೆ.
ರಾಹುಲ್ ಗಾಂಧಿ ಅವರು ಒಂದು ವಾರದ ಲಡಾಕ್ ಪ್ರವಾಸ ಮುಗಿಸಿ ಶ್ರೀನಗರದಲ್ಲಿ ಎರಡು ದಿವಸ ಖಾಸಗಿ ಸಮಯ ಕಳೆಯಲಿದ್ದಾರೆ. ಇಲ್ಲಿ ಅವರ ಜೊತೆಗ ಸೋನಿಯಾ ಗಾಂಧಿ ಸೇರಿಕೊಂಡಿದ್ದಾರೆ. ರಾಹುಲ್ ತಮ್ಮ ಒಂದು ವಾರದ ಲಡಾಕ್ ಪ್ರವಾಸವನ್ನು ಕಾರ್ಗಿಲ್‌ನಲ್ಲಿರುವ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಿ ಬಳಿಕ ಶ್ರೀನಗರಕ್ಕೆ ಮರಳಿದ್ದರು.
ದೇಶ ಕಂಡ ಬಹುದೊಡ್ಡ ಹಗರಣದ ರೂವಾರಿ ಕರ್ನಾಟಕದವ, ಹಣ್ಣು ವ್ಯಾಪಾರಿ ಬಹುಕೋಟಿ ದಂಧೆಗಿಳಿದ ಕಥೆ
ಆಗಸ್ಟ್ 17 ರಂದು ರಾಹುಲ್ ಲಡಾಖ್ ತಲುಪಿದರು, ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ರದ್ದುಗೊಳಿದ ನಂತರ ರಾಹುಲ್ ಅವರ ಮೊದಲ ಭೇಟಿಯಾಗಿತ್ತು. ಹಿಂದಿನ ರಾಜ್ಯ ಜಮ್ಮು ಮತ್ತು ಕಾಶ್ಮೀರವನ್ನು ಅದರ ಅಡಿಯಲ್ಲಿ ವಿಶೇಷ ಸ್ಥಾನಮಾನದೊಂದಿಗೆ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಲಾಗಿದೆ.
ರಾಹುಲ್ ಕಳೆದ ಗುರುವಾರ ಕಾರ್ಗಿಲ್ ತಲುಪುವ ಮುನ್ನ ತನ್ನ ಬೈಕ್‌ನಲ್ಲಿ ಪಾಂಗಾಂಗ್ ಸರೋವರ, ನುಬ್ರಾ ಕಣಿವೆ, ಖರ್ದುಂಗ್ಲಾ ಟಾಪ್, ಲಮಾಯೂರು ಮತ್ತು ಝನ್ಸ್‌ಕಾರ್ ಸೇರಿದಂತೆ ಪ್ರದೇಶದ ಎಲ್ಲಾ ಪ್ರಸಿದ್ಧ ಸ್ಥಳಗಳನ್ನು ಸುತ್ತಿದ್ದರು.