MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ದೇಶ ಕಂಡ ಬಹುದೊಡ್ಡ ಹಗರಣದ ರೂವಾರಿ ಕರ್ನಾಟಕದವ, ಹಣ್ಣು ವ್ಯಾಪಾರಿ ಬಹುಕೋಟಿ ದಂಧೆಗಿಳಿದ ಕಥೆ

ದೇಶ ಕಂಡ ಬಹುದೊಡ್ಡ ಹಗರಣದ ರೂವಾರಿ ಕರ್ನಾಟಕದವ, ಹಣ್ಣು ವ್ಯಾಪಾರಿ ಬಹುಕೋಟಿ ದಂಧೆಗಿಳಿದ ಕಥೆ

ಹಣ್ಣು ಮಾರಾಟಗಾರ. ಟ್ರಾವೆಲ್ ಏಜೆಂಟ್ ಕೊನೆಗೆ ಹಗರಣ ರೂವಾರಿಯಾದ. ಭಾರತದ ಬಹುದೊಡ್ಡ ರೂ. 30,000 ಕೋಟಿ ಹಗರಣ ರೂವಾರಿ ಕಿಂಗ್‌ಪಿನ್‌ಗಳಲ್ಲಿ ಒಬ್ಬನಾಗಿ ಬೆಳೆದ ಈ ವ್ಯಕ್ತಿ ಕರ್ನಾಟಕದವನು ಎಂಬುದೇ ಆಶ್ಚರ್ಯ. ಕರ್ನಾಟಕದಿಂದ ಹೊರ ರಾಜ್ಯಕ್ಕೆ ತೆರಳಿ ತನ್ನ ದಂಧೆ ಆರಂಭಿಸಿದ ಈತನ ಜೀವನಗಾಥೆ ಇಂದು ತೆರೆ ಮೇಲೆ ಬರುತ್ತಿದೆ.  ದೇಶ ಕಂಡ ಬಹುದೊಡ್ಡ ಹಗರಣದ ರೂವಾರಿ  ಯಾರು? ಕರ್ನಾಟಕದ ಯಾವ ಊರಿನವನು ಎಂಬ ಕುತೂಹಲದ ಸಂಗತಿ ಇಲ್ಲಿದೆ.

2 Min read
Gowthami K
Published : Aug 26 2023, 06:11 PM IST| Updated : Aug 26 2023, 06:13 PM IST
Share this Photo Gallery
  • FB
  • TW
  • Linkdin
  • Whatsapp
18

ಕರ್ನಾಟಕ ಸೇರಿದಂತೆ ಭಾರತದ ನಾನಾ ರಾಜ್ಯಗಳಲ್ಲಿನ ರೂ. 30,000 ಕೋಟಿಗೂ ಹೆಚ್ಚಿನ ನಕಲಿ ಛಾಪಾ ಕಾಗದ ಹಗರಣ ರೂವಾರಿ ಕರೀಂ ಲಾಲಾ ತೆಲಗಿ ಜೀವನಗಾಥೆ ತೆರೆ ಮೇಲೆ ಬಂದಿದೆ. ನಿರ್ದೇಶಕ ಹನ್ಸಲ್ ಮೆಹ್ತಾ ಅವರು ಸ್ಕ್ಯಾಮ್ 2003: ದಿ ಟೆಲ್ಗಿ ಸ್ಟೋರಿ ತೆರೆ ಮೇಲೆ ತಂದಿದ್ದಾರೆ. ತೆ ನಕಲಿ ಛಾಪಾ ಕಾಗದ ಹಗರಣದ ಮಾಸ್ಟರ್ ಮೈಂಡ್ ಅಬ್ದುಲ್ ಕರೀಂ ತೆಲಗಿ  ಯಾರು?  ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ. 

28

 ಅಬ್ದುಲ್ ಕರೀಂ ಲಾಲ ತೆಲಗಿ  ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ. ಈತನ ತಂದೆ ಖಾನಾಪುರ ರೈಲು ನಿಲ್ದಾಣದಲ್ಲಿ ಹಮಾಲಿ (ಮೂಟೆ ಹೊರುವುದು) ಕೆಲಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆಯನ್ನು ಕಳೆದುಕೊಂಡ ಅಬ್ದುಲ್ ತನ್ನ ಕುಟುಂಬವನ್ನು ನೋಡಿಕೊಳ್ಳಬೇಕಿತ್ತು. ಮೊದಲಿಗೆ ಅಬ್ದುಲ್ ರೈಲ್ವೇ ನಿಲ್ದಾಣದಲ್ಲಿ ಹಣ್ಣು ಮಾರುವವನಾಗಿ ಜೀವನ ಸಾಗಿಸುತ್ತಿದ್ದ.  ತನ್ನ ಮೂಲಭೂತ ಶಿಕ್ಷಣವನ್ನು ಪೂರ್ಣಗೊಳಿಸಲು  ಸೌದಿ ಅರೇಬಿಯಾಕ್ಕೆ ಹೋದ. ಆದರೆ  ಶೀಘ್ರದಲ್ಲೇ ಹಿಂದಿರುಗಿ ಬಾಂಬೆಗೆ ಸ್ಥಳಾಂತರಗೊಂಡ.

38

ಅಬ್ದುಲ್ ಬಾಂಬೆಯನ್ನು ತಲುಪಿದಾಗ, ಅವನಿಗೆ ವಾಸಿಸಲು ಸ್ಥಳವಿಲ್ಲದೆ, ತಿನ್ನಲು ಆಹಾರವಿಲ್ಲದೆ ಹಲವು ದಿನ ಪರದಾಡಿದ. ಆದಾಗ್ಯೂ, ಅಬ್ದುಲ್ ಟ್ರಾವೆಲ್ ಏಜೆಂಟ್ ಒಬ್ಬರನ್ನು ಭೇಟಿಯಾಗಿ ಅವರ ಬಳಿ  ಬಳಿ ಕೆಲಸಕ್ಕೆ ಸೇರಿಕೊಂಡ. ಬಳಿಕ ತಾನೇ ಟ್ರಾವೆಲ್ ಏಜೆನ್ಸಿಯನ್ನು ಪ್ರಾರಂಭಿಸಿದ. ಮತ್ತು  ಗಲ್ಫ್ ದೇಶಗಳಲ್ಲಿ ಕೆಲಸ ಹುಡುಕುತ್ತಿರುವ ಕಾರ್ಮಿಕರಿಗೆ ನಕಲಿ ವಲಸೆ ಕ್ಲಿಯರೆನ್ಸ್ ದಾಖಲೆಗಳನ್ನು ಮಾರಾಟ ಮಾಡಲು ಆರಂಭಿಸಿದ.

48

1991 ರಲ್ಲಿ, ಅಬ್ದುಲ್ ನನ್ನು ವಂಚನೆ ಮತ್ತು ನಕಲಿ ದಾಖಲೆ ವಿಚಾರವಾಗಿ ಬಂಧಿಸಿ ಅಲ್ಪಾವಧಿಯ ಜೈಲು ಶಿಕ್ಷೆ ವಿಧಿಸಲಾಯಿತು. ಜೈಲಿನಲ್ಲಿ, ಅಬ್ದುಲ್, ಸ್ಟಾಂಪ್ ವೆಂಡರ್ ರಾಮ್ ರತನ್ ಸೋನಿಯನ್ನು ಭೇಟಿಯಾದ. ರಾಮ್ ರತನ್ ಸೋನಿ ಶೇರು ಪತ್ರಗಳನ್ನು ನಕಲಿ ಮಾಡಿದ ಆರೋಪದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಸೋನಿ ಶೇರ್ ಮಾರ್ಕೆಟ್‌ನಲ್ಲಿ ಅಬ್ದುಲ್‌ಗೆ ಈ ದಂಧೆಯಲ್ಲಿ ಆಸಕ್ತಿಯನ್ನು ಹುಟ್ಟುಹಾಕಿದ ಮತ್ತು ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಅಬ್ದುಲ್ ದೊಡ್ಡ ಹಗರಣದಲ್ಲಿ ತೊಡಗಿದ. 

58

ಸೋನಿಯ ಸಹಾಯದಿಂದ, ಅಬ್ದುಲ್ ಸ್ಟಾಂಪ್ ಪೇಪರ್‌ಗಳನ್ನು ನಕಲಿ ಮಾಡಲು ಪ್ರಾರಂಭಿಸಿದ. ಮಾಧ್ಯಮ ವರದಿಗಳ ಪ್ರಕಾರ ಕಾನೂನು ದಾಖಲೆಯು ಯಾವಾಗಲೂ ಬೇಡಿಕೆಯ ಮೇಲೆ ಹೆಚ್ಚು ಮತ್ತು ಕಡಿಮೆ ಪೂರೈಕೆಯಲ್ಲಿದೆ. ಹೀಗಾಗಿ, ಸ್ಟಾಂಪ್ ಪೇಪರ್‌ಗಳನ್ನು ಮುದ್ರಿಸಲು ನಾಸಿಕ್ ಸೆಕ್ಯುರಿಟಿ ಪ್ರೆಸ್‌ನಿಂದ ಸ್ಥಗಿತಗೊಂಡ ಮುದ್ರಣ ಯಂತ್ರಗಳನ್ನು ತೆಲಗಿ ಖರೀದಿಸಿದ. ಬಳಿಕ 6-7 ವರ್ಷಗಳಲ್ಲಿ ಇಬ್ಬರು ಕೂಡ ನಕಲಿ ಸ್ಟಾಂಪ್ ಪೇಪರ್‌ಗಳನ್ನು ಮುದ್ರಿಸಲು ಯಂತ್ರಗಳನ್ನು ಖರೀದಿಸುತ್ತಲೇ ಇದ್ದರು. ಅವರ ಖರೀದಿದಾರರು ಸಾಮಾನ್ಯ ಜನರು, ಬ್ಯಾಂಕ್‌ಗಳು, ಬ್ರೋಕರೇಜ್ ಮತ್ತು ವಿಮಾ ಕಂಪನಿಗಳಾಗಿದ್ದವು.

68

ಈ ಹಗರಣ ಪುಣೆ ಪೊಲೀಸರ ಗಮನಕ್ಕೆ ಬಂದು  ಅಬ್ದುಲ್ ಅವರನ್ನು 2001 ರಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಯಿತು ಮತ್ತು 2007 ರಲ್ಲಿ ಅತನಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. 2002 ರ ಹೊತ್ತಿಗೆ, ಹಲವಾರು ಪ್ರಕರಣಗಳು ತನಿಖೆಯಾಗುತ್ತಿರುವಾಗ ಅಬ್ದುಲ್ HIV ಪಾಸಿಟಿವ್ ಎಂದು ಪರೀಕ್ಷಿಸಿದರು. 2013ರಲ್ಲಿ 17 ಲಕ್ಷ ರೂಪಾಯಿ ಮೌಲ್ಯದ ನಕಲಿ ಸ್ಟಾಂಪ್ ಪೇಪರ್‌ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಅಬ್ದುಲ್‌ಗೆ ಶಿಕ್ಷೆ ವಿಧಿಸಲಾಗಿತ್ತು.

78

ಆಗಿನಿಂದ ಸುಮಾರು 17 ವರ್ಷ ಜೈಲಿನಲ್ಲೇ ಕಳೆದ ತೆಲಗಿ, 2017ರಲ್ಲಿ ಬಹುಅಂಗಾಂಗ ವೈಫಲ್ಯಕ್ಕೊಳಗಾಗಿ ಸಾವನ್ನಪ್ಪಿದ. ಅಬ್ದುಲ್ ಕರೀಂ ಲಾಲಾ ತೆಲಗಿನಿಧನದ ಒಂದು ವರ್ಷದ ನಂತರ ನಾಸಿಕ್ ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವನ್ನು ಖುಲಾಸೆಗೊಳಿಸಿದೆ.  

88

ಈ ಬಹುಕೋಟಿ ಹರಣಕ್ಕೆ ಸಂಬಂಧಿಸಿದ‘ಸ್ಕ್ಯಾಮ್ 2003: ದ ತೆಲಗಿ ಸ್ಟೋರಿ’ ಎಂಬ ವೆಬ್ ಸರಣಿಯು ಸೆ. 2ರಿಂದ ಸೋನಿ ಲೈವ್ ಒಟಿಟಿ ವಾಹಿನಿಯಲ್ಲಿ ಆರಂಭವಾಗಲಿದೆ. ಈಗಾಗಲೇ ಈ ವೆಬ್ ಸರಣಿ ಕುರಿತಾದ ಪ್ರೋಮೋ ಬಿಡುಗಡೆಯಾಗಿದ್ದು, ಅದರ ಬಗ್ಗೆ ನೆಟ್ಟಿಗರು ಭಾರೀ ನಿರೀಕ್ಷೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved