ಆಂಧ್ರ ಪ್ರದೇಶ(ಜು.25): ಕಾಂಗ್ರೆಸ್ ಪಕ್ಷ ನಿಷ್ಠಾಂವತ ಕಾರ್ಯಕರ್ತನಾಗಿ, ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಪಿವಿ ನರಸಿಂಹ ರಾವ್ ಅವರನ್ನು ಕಾಂಗ್ರೆಸ್  ಅಂತಿಮ ದಿನಗಳಲ್ಲಿ ಕಡೆಗಣಿಸಿತ್ತು ಅನ್ನೋ ಆರೋಪವಿದೆ. ಹಲವು ಸಭೆಗಳಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಆಡಳಿತವನ್ನು ಶ್ಲಾಘಿಸುತ್ತಿದ್ದ ಕಾಂಗ್ರೆಸ್ ನರಸಿಂಹ ರಾವ್ ಆಡಳಿತದ ಬಗ್ಗೆ ಮೌನ ವಹಿಸಿತ್ತು. ಆದರೆ ಇದೀಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪಿವಿ ನರಸಿಂಹ ರಾವ್ ಕಾಂಗ್ರೆಸ್ ಕಿರೀಟವಿದ್ದಂತೆ ಎಂದಿದ್ದಾರೆ.

ನರಸಿಂಹರಾವ್ ಸ್ಮರಿಸಿದ ಮೋದಿ, ನೆನಪು ಶೇರ್ ಮಾಡಿದ ರತ್ನಪ್ರಭಾ.

ತೆಲಂಗಾಣ ಕಾಂಗ್ರೆಸ್ ಆಯೋಜಿಸಿದ್ದ ದಿವಂಗತ ಪ್ರಧಾನಿ ಪಿವಿ ನರಸಿಂಹ  ರಾವ್ ಅವರ ಜನ್ಮಶತಮಾನೋತ್ಸವ ಆಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ ಸೋನಿಯಾ ಗಾಂಧಿ, ಇದೇ ಮೊದಲ ಬಾರಿಗೆ ಪಿವಿ ನರಸಿಂಹ ರಾವ್ ಹೊಗಳಿದ್ದಾರೆ. ನರಸಿಂಹ ರಾವ್ ನಾಯಕತ್ವದಲ್ಲಿ ಕಾಂಗ್ರೆಸ್ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದೆ.  ಸ್ಥಿರ ಆರ್ಥಿಕತೆ ನೀಡುವಲ್ಲಿ ಸಫಲವಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದರು.

ಸೋನಿಯಾ ಕುಟುಂಬದ ಟ್ರಸ್ಟ್‌ನಲ್ಲಿ ವಿದೇಶಿ ಹಣ..? ತನಿಖೆಗೆ ಸಚಿವರ ತಂಡ ರೆಡಿ

ಅಂದು ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಜೊತೆ  ಪಿವಿ ನರಸಿಂಹ ರಾವ್ ಭಾರತದ ಆರ್ಥವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ್ದರು. ಭಾರತದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಭಾರತದಲ್ಲಿ ಆರ್ಥಿಕತೆ ಬದಲಾವಣೆ ತಂದ ಹರಿಕಾರ ಎಂದು ಪಿವಿ ನರಸಿಂಹ ರಾವ್ ಅವರನ್ನು ಮನಮೋಹನ್ ಸಿಂಗ್ ಕರೆದಿದ್ದಾರೆ. ಪಕ್ಷದಲ್ಲಿ ದುಡಿದ ನರಸಿಂಹ ರಾವ್ ಪ್ರಧಾನಿಯಾಗಿ ಭಾರತದ ಎದುರಿಸುತ್ತಿದ್ದ ಆರ್ಥಿಕ ಸವಾಲುಗಳನ್ನು ನಿವಾರಿಸಿದ್ದಾರೆ. ನರಸಿಂಹ ರಾವ್ ಅವರ ಧೀರ ನಾಯಕತ್ವಕ್ಕೆ ಊದಾಹರಣೆಯಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. 

1991ರ ಜುಲೈನಲ್ಲಿ ಮಂಡಿಸಿದ  ಬಜೆಟ್ ಭಾರತದ ಆರ್ಥಿಕತೆಯಲ್ಲಿ ಬದಲಾವಣೆ ತಂದಿದೆ. ರಾವ್ ಅವಧಿಯಲ್ಲಿ ಭಾರತ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ವಿದೇಶಾಂಗ ನೀತಿಯಲ್ಲಿ ಗಣನೀಯ ಸಾಧನೆ ಮಾಡಿದೆ ಎಂದು ಸೋನಿಯಾ ಗಾಂಧಿ ಹೇಳಿದರು.

ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಿವಿ ನರಸಿಂಹ ರಾವ್ ಅವರ ಆಡಳಿತವನ್ನು ಹೊಗಳಿದ್ದು ಕಡಿಮೆ. 2010ರ ಕಾಂಗ್ರೆಸ್ ಸಭೆಯಲ್ಲಿ ಭಾರತದ ಆರ್ಥಿಕತೆ ಬದಲಾವಣೆಗೆ ರಾಹುಲ್ ಗಾಂಧಿ ಆಡಳಿತ ಕಾರಣ ಎಂದು ಸೋನಿಯಾ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿ ಅಲ್ಲ ಸಮಯದಲ್ಲಿ ಭಾರತಕ್ಕೆ ಹೊಸ ದಿಕ್ಕು ತೋರಿಸಿದ್ದರು. 21ನೇ ಶತಮಾನ ಪ್ರವೇಶಿಸುವ ಭಾರತವನ್ನು ಸದೃಢವಾಗಿಸಿದ್ದರು ಎಂದು ಸೋನಿಯಾ ಗಾಂಧಿ ಹೇಳಿದ್ದರು. ಕಾಂಗ್ರೆಸ್ ಅಧಿಕಾರದ ಸಾಧನೆಗಳ ಕುರಿತು ಮಾತನಾಡಿದ್ದ ಈ ಸಭೆಯಲ್ಲಿ ಪಿವಿ ನರಸಿಂಹ ರಾವ್ ಕುರಿತು ಒಂದು ಮಾತು ಆಡಿರಲಿಲ್ಲ.