ಜೂನ್ 28 ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಜನ್ಮದಿನ. ಪ್ರಧಾನಿ ಮೋದಿ ನರಸಿಂಹರಾವ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭ ಸಹ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು[ಜೂ. 28] ಭಾರತದ ಇತಿಹಾಸ ಒಂದು ನಿರ್ಣಾಯಕ ಹಂತದಲ್ಲಿ ಇದ್ದಾಗ ದೇಶವನ್ನು ಮುನ್ನಡೆಸಿದವರು ನರಸಿಂಹ ರಾವ್, ವಿದ್ವಾಂಸ ಮತ್ತು ಅತ್ಯುತ್ತಮ ಆಡಳಿತಗಾರರನ್ನು ಇಂದು ಸ್ಮರಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆರ.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಮುಖ್ಯ ಕಾರ್ಯದರ್ಶಿ ರತ್ನಪ್ರಭ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನರಸಿಂಹರಾವ್ ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಸೆನ್ಸಾರ್ ಮಂಡಳಿಯ ರಿಜನಲ್ ಆಫಿಸರ್ ಆಗಿ ನನ್ನನ್ನು ನೇಮಕ ಮಾಡಿದ್ದರು. ತೆಲಗು ಫಿಲ್ಮ್ ಸೆನ್ಸಾರ್ ಶಿಪ್ ಹೈದರಾಬಾದ್ ಗೆ ವರ್ಗಾಯಿಸಿದ್ದು ಒಂದು ಐತಿಹಾಸಿಕ ತೀರ್ಮಾನ ಎಂದು ಸ್ಮರಿಸಿಕೊಂಡಿದ್ದಾರೆ.
