Asianet Suvarna News Asianet Suvarna News

ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅನಾರೋಗ್ಯ: ದೆಹಲಿಯ ಆಸ್ಪತ್ರೆಗೆ ದಾಖಲು

ದೆಹಲಿಯ ಗಂಗಾರಾಮ್‌ ಆಸ್ಪತ್ರೆಗೆ ಸೋನಿಯಾ ಗಾಂಧಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

sonia gandhi admitted to delhis gangaram hospital for medical checkup ash
Author
First Published Jan 4, 2023, 3:01 PM IST

ಕಾಂಗ್ರೆಸ್‌ (Congress) ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ  (Sonia Gandhi) ಅನಾರೋಗ್ಯವುಂಟಾಗಿದ್ದು, ಈ ಹಿನ್ನೆಲೆ ಇಂದು ದೆಹಲಿಯ (Delhi) ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಸೋನಿಯಾ ಗಾಂಧಿ ಜತೆಗೆ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಸಹ ತಾಯಿಯ ಜತೆಗೆ ಆಸ್ಪತ್ರೆಗೆ ತೆರಳಿದ್ದಾರೆ ಎಂದೂ ವರದಿ ಹೇಳಿದೆ. ದೆಹಲಿಯ ಗಂಗಾರಾಮ್‌ ಆಸ್ಪತ್ರೆಗೆ (Gangaram Hospital) ಸೋನಿಯಾ ಗಾಂಧಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸಹ ಟ್ವೀಟ್‌ ಮಾಡಿದ್ದಾರೆ.
 
76 ವರ್ಷದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದ್ದು, ನನಗೆ ಬೇಸರವಾಗಿದೆ. ಶೀಘ್ರದಲ್ಲೇ ಅವರು ಚೇತರಿಸಿಕೊಳ್ಳಲಿ ಹಾಗೂ ಆರೋಗ್ಯವಾಗಿ ಆಸ್ಪತ್ರೆಯಿಂದ ಮರಳಲಿ ಎಂದು ಸಿದ್ದರಾಮಯ್ಯ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ. 

ಇದನ್ನು ಓದಿ: ಇವೆಲ್ಲಾ ಸಂಸತ್ತಿನ ಹೊರಗಿಟ್ಟುಕೊಳ್ಳಿ, ಸೋನಿಯಾ ಗಾಂಧಿಗೆ ಸ್ಪೀಕರ್ ವಾರ್ನಿಂಗ್!

 ಸೋನಿಯಾ ಗಾಂಧಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಪಿಟಿಐ ವರದಿ ಮಾಡಿದೆ. ನಿನ್ನೆಯಿಂದ ಅಂದರೆ ಜನವರಿ 3, 2023 ರಿಂದ ಸೋನಿಯಾ ಗಾಂಧಿ ಅನಾರೋಗ್ಯಕ್ಕೀಡಾಗಿದ್ದು, ಈ ಹಿನ್ನೆಲೆ ಕಾಂಗ್ರೆಸ್‌ ಸಂಸದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ದೆಹಲಿಗೆ ಮರಳಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಸಾಮಾನ್ಯ ತಪಾಸಣೆಗೆಂದೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರತ್‌ ಜೋಡೋ ಯಾತ್ರೆಯಲ್ಲಿ 7 ಕಿ.ಮೀ. ಕಾಲ ನಡೆದ ನಂತರ ಪುತ್ರ ರಾಹುಲ್‌ ಗಾಂಧಿ ಹಾಗೂ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿಗೆ ಮರಳಿದ್ದಾರೆಂದೂ ತಿಳಿದುಬಂದಿದೆ. ನಿನ್ನೆ ಸಂಜೆಯಷ್ಟೇ ಯಾತ್ರೆ ಉತ್ತರ ಪ್ರದೇಶ ತಲುಪಿದೆ. 

ಕೆಲ ದಿನಗಳ ಬ್ರೇಕ್‌ ಬಳಿಕ ಭಾರತ್ ಜೋಡೋ ಯಾತ್ರೆ ಮತ್ತೆ ಆರಂಭವಾಗಿದ್ದು, ನಿನ್ನೆ ಸಂಜೆ ಮತ್ತೆ ವಿರಾಮ ಘೋಷಿಸಲಾಗಿದೆ. ಆದ್ರೆ, ಇಂದು ಬೆಳಗ್ಗೆ 6 ಗಂಟೆಯಿಂದ ಮತ್ತೆ ಯಾತ್ರೆ ಪುನಾರಂಭವಾಗಿದೆ. ತೀವ್ರ ಚಳಿ ಇದ್ದರೂ, ಇದನ್ನು ಲೆಕ್ಕಿಸದೆ ರಾಹುಲ್‌ ಗಾಂಧಿ ಹರ್ಯಾಣ ಹಾಗೂ ದೆಹಲಿಯಲ್ಲಿ ಬಿಳಿ ಟಿ ಶರ್ಟ್‌ ಧರಿಸಿದ್ದರು. ಇಮದು ಬೆಳಗ್ಗೆ ಸಹ ಅವರು ಯಾತ್ರೆಯಲ್ಲಿ ಭಾಘಿಯಾಗಿದ್ದರು. ಈ ಮಧ್ಯೆ, ಪ್ರಿಯಾಂಕಾ ಗಾಂಧಿ ಸಹ ನಿನ್ನೆ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದು, ಆದರೆ ಇಂದು ಯಾತ್ರೆಯಲ್ಲಿ ಭಾಗಿಯಾಗಿಲ್ಲ.

ಇದನ್ನೂ ಓದಿ: ರಾಜೀವ್ ಹಂತಕರ ಬಿಡುಗಡೆ, ಸೋನಿಯಾ ಗಾಂಧಿ ನಿಲುವಿಗೆ ವಿರುದ್ಧ ಹೇಳಿಕೆ ನೀಡಿದ ಕಾಂಗ್ರೆಸ್!

ಕಳೆದ ವರ್ಷ ಕೋವಿಡ್ - 19 ಸೋಂಕಿಗೊಳಗಾಧ ಬಳಿಕ ಕಾಂಗ್ರೆಸ್‌ ಮಾಜಿ ಅಧಿನಾಯಕಿ ಅನಾರೋಗ್ಯಕ್ಕೊಳಗಾಗುತ್ತಲೇ ಇದ್ದಾರೆ. ಕೆಲ ತಿಂಗಳ ಹಿಂದಷ್ಟೇ ತಪಾಸಣೆಗೆಂದು ಅವರು ವಿದೇಶಕ್ಕೆ ತೆರಳಿದ್ದರು. ಆದರೂ, ಕರ್ನಾಟಕದ ಮಂಡ್ಯದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಪುತ್ರ ರಾಹುಲ್‌ ಜತೆಗೆ ಕಾಣಿಸಿಕೊಂಡಿದ್ದರು. ಅಲ್ಲದೆ, ದೆಹಲಿಯಲ್ಲೂ ರಾಹುಲ್, ಪ್ರಿಯಾಂಕಾ ಹಾಗೂ ಅಳಿಯ ರಾಬರ್ಟ್‌ ವಾದ್ರಾ ಜತೆಗೆ ಕಾಣಿಸಿಕೊಡಿದ್ದರು.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಈ ಯಾತ್ರೆಯಲ್ಲಿ ಗಾಂಧಿ ಕುಟುಂಬವೇ ಭಾಗಿಯಾಗಿದ್ದು, ಪ್ರಮುಖ ಅಂಶ ಎನಿಸಿಕೊಂಡಿದೆ. ದೇಶದ ಜನತೆಯನ್ನು ಒಂದಾಗಿಸಲು ದೇಶದ ಹಳೆಯ ಪಕ್ಷವಾದ ಕಾಂಗ್ರೆಸ್‌ ಈ ಯಾತ್ರೆ ಕೈಗೊಂಡಿದೆ ಎಂಬುದು ಕಾಂಗ್ರೆಸ್‌ ನಾಯಕರ ಹೇಳಿಕೆ. 

ಇದನ್ನೂ ಓದಿ: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿ ಖರ್ಗೆ ಅಧಿಕಾರ ಸ್ವೀಕಾರ: ಅಭಿನಂದನೆ ಸಲ್ಲಿಸಿದ ಸೋನಿಯಾ ಗಾಂಧಿ

Follow Us:
Download App:
  • android
  • ios