ಹೋಂವರ್ಕ್ ಮಾಡದ ಮಗನಿಗೆ ಬುದ್ಧಿ ಹೇಳಿದ ಅಪ್ಪನಿಗೆ ಮಗನೇ ಪೊಲೀಸರಿಗೆ ದೂರು ನೀಡಿ ಜೈಲಿಗೆ ಕಳುಹಿಸಿದ ಘಟನೆ ನಡೆದಿದೆ. ಅಪ್ಪನ ಬೈಗುಳ ಸಹಿಸದ ಮಗ, ಮನೆಯಲ್ಲಿ ಅಪ್ಪ ಅಫೀಮು ಇಟ್ಟುಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.

ಪ್ರತಿದಿನ ಶಾಲೆಯಲ್ಲಿ ಕೊಡುತ್ತಿದ್ದ ಹೋಮ್ ವರ್ಕ್‌ ಅನ್ನು ಮಾಡದ ಮಗನಿಗೆ ಅಪ್ಪ ಒಂದು ದಿನ ಚೆನ್ನಾಗಿ ಬೈದು ಬುದ್ಧಿ ಹೇಳಿದ್ದಾನೆ. ಆದರೆ, ತನಗೆ ಅಪ್ಪ ಬೈದಿದ್ದು ಇಷ್ಟವಾಗಿಲ್ಲ ಎಂದು ಪೊಲೀಸರಿಗೆ ದೂರು ಮಗನೇ ಹೋಗಿ ದೂರು ಕೊಟ್ಟಿದ್ದಾನೆ. ಪೊಲೀಸರು ಬಂದು ಅಪ್ಪನನ್ನು ಎಳೆದುಕೊಂಡು ಹೋಗಿದ್ದು, ಇದೀಗ ಅಪ್ಪ ಜೈಲು ಪಾಲಾಗಿದ್ದಾನೆ.

ಚಿಕ್ಕ ಮಕ್ಕಳನ್ನ ಚೆನ್ನಾಗಿ ಮಾತಾಡಿಸಿ, ಬೈಯದೆ ಒಂದೊಂದು ದಿನಗಳನ್ನು ತಳ್ಳುವುದಕ್ಕೆ ಅಪ್ಪ ಅಮ್ಮಂದಿರು ತುಂಬಾ ಕಷ್ಟಪಡುತ್ತಾರೆ. ಆದರೂ ಏನೋ ಸಣ್ಣ ವಿಷಯಕ್ಕೆ ಮಕ್ಕಳು ಅಳುತ್ತಾರೆ. ಮಕ್ಕಳ ಹಠಕ್ಕೆ ಅಪ್ಪ ಅಮ್ಮಂದಿರು ಕೆಲವು ಬಾರಿ ಕೋಪ ಮಾಡಿಕೊಳ್ಳುತ್ತಾರೆ. ಇದರಿಂದ ಸಮಸ್ಯೆ ಇನ್ನೂ ದೊಡ್ಡದಾಗುತ್ತದೆ. ಮಕ್ಕಳು ಹಠ ಮಾಡುವುದಕ್ಕೆ ಇಂತಹದ್ದೇ ಕಾರಣ ಬೇಕೆಂದೇನಿಲ್ಲ. ಊಟ ಮಾಡುವುದು, ಆಟಿಕೆ ತಗೊಂಡು ಕೊಟ್ಟಿಲ್ಲ ಎನ್ನುವುದು, ಪುಸ್ತಕ ಕೊಡಿಸಿಲ್ಲ ಎನ್ನುವುದು, ಚಾಕೋಲೇಟ್ ವಿಚಾರ ಹೀಗೆ ಸಣ್ಣ ಪುಟ್ಟ ಕಾರಣಕ್ಕೆ ಹಠ ಮಾಡುತ್ತಾರೆ. ಅದರಲ್ಲಿಯೂ ಶಾಲೆಗೆ ಹೋಗುವ ಮಕ್ಕಳಾದರೆ ಅವರು ಓದಿಕೊಳ್ಳುವ ವಿಚಾರ ಅಥವಾ ಹೋಮ್‌ ವರ್ಕ್ ಮಾಡುವ ವಿಚಾರಕ್ಕೆ ಅಪ್ಪ ಅಮ್ಮನಿಂದ ಬೈಸಿಕೊಳ್ಳುತ್ತಾರೆ. ಕೆಲವು ಬಾರಿ ಒದೆ ತಿನ್ನುತ್ತಾರೆ.

ಇದನ್ನೂ ಓದಿ: ಪುಟ್ಟ ಬಾಲಕನನ್ನು ಮರಕ್ಕೆ ಕಟ್ಟಿಹಾಕಿ ವಿಕೃತಿ ಮೆರೆದ ದುರುಳರು; ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾರಿಹಬ್ಬ ಶುರು!

ಚೀನಾದಲ್ಲಿ ಅಪ್ಪ ಹೋಮ್‌ ವರ್ಕ್ ಮಾಡು ಎಂದು ಬೈದು ಬುದ್ಧಿ ಹೇಳಿದ್ದಕ್ಕೆ, ಅಪ್ಪನಿಗೆ ಮಗ ಜೈಲಿಗೆ ಕಳಿಸಿದ್ದಾನೆ. ಈ ಘಟನೆ ಮಧ್ಯ ಚೀನಾದ ಯೋಂಗ್ಯಿಂಗ್ ಪ್ರಾಂತ್ಯದಲ್ಲಿ ನಡೆದಿದೆ. 10 ವರ್ಷದ ಮಗ ಹೋಮ್ ವರ್ಕ್‌ ಮಾಡದೆ ಆಟ ಆಡುತ್ತಿದ್ದನು. ಇದನ್ನ ನೋಡಿದ ಅಪ್ಪ ಬೈದ ಬುದ್ಧಿ ಹೇಳಿದ್ದಾರೆ. ಕೂಡಲೇ ನೀನು ಹೋಮ್‌ ವರ್ಕ್‌ ಮಾಡಿ ಮುಗಿಸಬೇಕು ಎಂದು ಹೇಳಿದ್ದಾರೆ. ಆಗ ಅಪ್ಪನ ಬೈಗುಳ ಸಹಿಸಿಕೊಳ್ಳದ ಮಗ ಮನೆಯಿಂದ ಹೊರಗೆ ಹೋಗಿದ್ದಾನೆ. ಹತ್ತಿರದ ಅಂಗಡಿಯಿಂದ ಪೊಲೀಸರಿಗೆ ಫೋನ್ ಮಾಡಿ, ಮನೆಯಲ್ಲಿ ಅಪ್ಪ ಅಫೀಮು (ಗಾಂಜಾ) ಇಟ್ಟುಕೊಂಡಿದ್ದಾರೆ ಅಂತ ಹೇಳಿದ್ದಾನೆ. ಮನೆಗೆ ಮಗ ವಾಪಸ್ ಬಂದು ಏನೂ ಗೊತ್ತಿಲ್ಲದವನಂತೆ ಕೋಪದಲ್ಲಿಯೇ ಕುಳಿತುಕೊಂಡಿದ್ದಾನೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಪೊಲೀಸರು ಆತನ ಮನೆಗೆ ಬಂದಿದ್ದಾರೆ. 

ಇದನ್ನೂ ಓದಿ: 'ನಾಯಿ ಜೊತೆಗೆ ಸ್ನೇಹ ಮಾಡಿದ ಹುಲಿ'ಯ ವಿಡಿಯೋ ವೈರಲ್; ಇದು ಸಸ್ಯಾಹಾರಿ ಹುಲಿಯೇ?

ಪೊಲೀಸರನ್ನ ನೋಡಿ ಮನೆಯವರು ಏನಾಗಿದೆ ಎಂದು ಕೇಳಿದಾಗ, ಮನೆಯಲ್ಲಿ ಅಫೀಮು ಇದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ನಾವು ಶೋಧ ಕಾರ್ಯ ಮಾಡಲು ಬಂದಿದ್ದೇವೆ ಎಂದು ಹೇಳಿದ್ದಾರೆ. ಆಗ ಮನೆಯವರ ಅನುಮತಿಗಾಗಿ ಕಾಯದೇ ಮನೆಯೊಳಗೆ ನುಗ್ಗಿ ಪರಿಶೀಲನೆ ಮಾಡಿದಾಗ ಒಣಗಿದ ಓಪಿಯಂನ ಎಂಟು ತುಂಡುಗಳು ಸಿಕ್ಕವು. ಚೀನಾದಲ್ಲಿ ಓಪಿಯಂ ಸೇವನೆ ಮಾಡೋದು ಅಪರಾಧ. ನಾನು ಔಷಧಿಗೆ ಇಟ್ಟುಕೊಂಡಿದ್ದೆ ಎಂದು ಅಪ್ಪ ಪೊಲೀಸರಿಗೆ ಹೇಳಿದ್ದಾರೆ. ಆದರೆ ಇದನ್ನು ಪೊಲೀಸರು ನಂಬಲಿಲ್ಲ. ಹೀಗಾಗಿ, ಅಪ್ಪನನ್ನು ಮಾದಕವಸ್ತು ವಿರೋಧಿ ಕಾಯ್ದೆಯಡಿ ಬಂಧಿಸಿ ಜೈಲಿಗೆ ಹಾಕಿದ್ದಾರೆ. ಮಗುವಿನ ಖಾಸಗಿತನ ಕಾಪಾಡಲು ಪೊಲೀಸರು ಮಗ ಅಥವಾ ಅಪ್ಪನ ಹೆಸರು ಬಹಿರಂಗ ಪಡಿಸಿಲ್ಲ.