ಕೋಲ್ಕತ್ತಾ(ಆ. 11)   ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ದೇಹ ನೋಡಲು ಆಸ್ಪತ್ರೆಯೊಂದು  51  ಸಾವಿರ ಹಣ ಕೇಳಿದ  ಆರೋಪ ಹೊತ್ತಿದೆ.

ಶನಿವಾರ ಮಧ್ಯರಾತ್ರಿ ಹರಿ ಗುಪ್ತಾ ಎನ್ನುವರು ಮೃತಪಟ್ಟಿದ್ದರು. ಅವರ ಪುತ್ರ ಸಾಗರ್ ಗುಪ್ತಾ  ಹೇಳುವಂತೆ,  ನಮ್ಮ ತಂದೆ ಸಾವಿಗೀಡಾಗಿ ಗಂಟೆಗಳೆ ಕಳೆದಿದ್ದರೂ ಖಾಸಗಿ ಆಸ್ಪತ್ರೆ ಸಣ್ಣ ಮಾಹಿತಿ ನೀಡುವ ಕೆಲಸವನ್ನು ಮಾಡಿರಲಿಲ್ಲ ಎಂದು ಆರೋಪಿಸಿದ್ದಾರೆ.

ಮಂಗಳವಾರ ಕರ್ನಾಟಕದ ಕೊರೋನಾ ಲೆಕ್ಕ

ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಕರೆ ಬಂದಿದೆ. ನಿಮ್ಮ ತಂದೆ ಕೊರೋನಾ ಕಾರಣಕ್ಕೆ ಶನಿವಾರ  1  ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಇಷ್ಟು ತಡವಾಗಿ ಯಾಕೆ ವಿಷಯ ತಿಳಿಸುತ್ತಿದ್ದೀರಿ ಎಂದು ಕೇಳಿದ್ದಕ್ಕೆ ನಮ್ಮ ಬಳಿ ನಿಮ್ಮ ಸಂಪರ್ಕ ಸಂಖ್ಯೆ ಇರಲಿಲ್ಲ ಎಂಬ ಹಾರಿಕೆ ಉತ್ತರ ನೀಡಿದ್ದಾರೆ.

ಕುಟುಂಬ ಆಸ್ಪತ್ರೆಗೆ ತೆರಳಿದಾಗ ದೇಹವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿಂದ ಕುಟುಂಬ ಶಿಬ್‌ಪುರ್ ಸ್ಮಶಾನದ ಬಳಿ ತೆರಳಿದಾಗ ದೇಹ ನೋಡಲು ತಕ್ಷಣ 51  ಸಾವಿರ ರೂ. ನೀಡಬೇಕು ಎಂಬ ಬೇಡಿಕೆ ಇಡಲಾಯಿತು.

ಕುಟುಂಬ ವಾಗ್ವಾದಕ್ಕೆ ನಿಂತಾಗ 31 ಸಾವಿರ ನೀಡಿ ಸಾಕು ಎಂಬ ಚೌಕಾಶಿ ವ್ಯವಹಾರವೂ ನಡೆದು ಹೋಯಿತು.  ಕುಟುಂಬ ನಂತರ ಪೊಲೀಸರ ಮೊರೆ ಹೋಗುವ ನಿರ್ಧಾರ ಮಾಡಿತು.

ಬುದ್ಧಿ ಕಲಿಯದ ಚೀನಿಯರಿಗೆ ಮತ್ತೆ ಕೊರೋನಾ ಇರುವ ಸಮುದ್ರ ಆಹಾರ ಬೇಕಂತೆ!

ಪೊಲೀಸರ ಬಂದರೂ ಬಗ್ಗದ ಆಸ್ಪತ್ರೆ ಸಿಬ್ಬಂದಿ ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿಕೊಂಡು ಬನ್ನಿ ಎಂದು ಧಮಕಿ ಹಾಕಿದರು.  ಅಂತ್ಯಸಂಸ್ಕಾರದ ವಿಡಿಯೋ ಮಾಡಲು ಕುಟುಂಬದವರು ಯತ್ನಿಸಿದರೆ ಅವರ ಪೋನ್ ಕಸಿದುಕೊಳ್ಳಲಾಯಿತು.

ಮಾಧ್ಯಮದವರ ಒತ್ತಾಯಕ್ಕೆ ಮಣಿದು ಅಂತಿಮವಾಗಿ 2,500 ರೂ. ಡಿಪಾಸಿಟ್ ಎಂಬ ಹೆಸರಿನಲ್ಲಿ ಪಡೆದುಕೊಂಡು ಪಾರ್ಥಿವಶರೀರ ನೋಡಲು ಅವಕಾಶ ಮಾಡಿಕೊಡಲಾಯಿತು ಎಂದು ಕುಟುಂಬದವರು ನೊಂದು ನುಡಿಯುತ್ತಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೌರಾತ್ ಕಮಿಷನರ್ ಧವಲ್ ಜೈನ್ ಇಂಥ ಆರೋಪಕ್ಕೆ ಸಂಬಂಧಿಸಿ ನಮಗೆ ಇಲ್ಲಿಯವರೆಗೆ ಯಾವುದೇ ದೂರು ಬಂದಿಲ್ಲ ಎಂದಿದ್ದಾರೆ. 


"