Asianet Suvarna News Asianet Suvarna News

ಮಂಗಳವಾರ 30 ಜಿಲ್ಲೆಗಳಲ್ಲೂ ಕೊರೋನಾ ಸ್ಫೋಟ, ಆದ್ರೂ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕರೋನಾ ಸೋಂಕಿತರ ಸಂಖ್ಯೆ 4267 ಪ್ರಕರಣ ಪತ್ತೆಯಾಗಿವೆ. ಆದ್ರೆ, ಸಂತಸದ ಸಂಗತಿ ಅಂದ್ರೆ ಸೊಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ.

86 deaths 6257 New COVID cases reported in Karnataka On August 11th
Author
Bengaluru, First Published Aug 11, 2020, 7:47 PM IST

ಬೆಂಗಳೂರು, (ಆ.11): ಕಳೆದ 24 ಗಂಟೆಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಕೊರೋನಾ ರಣಕೇಕೆ ಹಾಕಿದೆ. ಸಂತಸದ ಸಂಗತಿ ಅಂದ್ರೆ ಸೋಂಕಿತರಿಗಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯೇ ಹೆಚ್ಚಾಗಿರುವುದು ಸಮಾಧಾನ ತಂದಿದೆ.

ಹೌದು... ರಾಜ್ಯದಲ್ಲಿ ಇಂದು (ಮಂಗಳವಾರ) 6,257 ಹೊಸ ಕೊರೋನಾ ಕೇಸ್ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,88,611ಕ್ಕೆ ಏರಿಕೆಯಾಗಿದೆ. 

 ಇನ್ನು ಮಂಗಳವಾರ ಒಂದೇ ದಿನ 6473 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ.

ಒಟ್ಟು ಇದುವರೆಗೆ 1,88,611ರಲ್ಲಿ 1,05,599 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.  ಹೀಗಾಗಿ ರಾಜ್ಯದಲ್ಲಿ 79,606 ಸಕ್ರಿಯ ಕೇಸ್‌ಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಇನ್ನು ಕಳೆದ 24 ಗಂಟೆಗಳಲ್ಲಿ 86 ಜನರು ಕೊರೋನಾಗೆ ಬಲಿಯಾಗಿದ್ದಾರೆ. ಇದರಿಂದ ಸಾವಿನ ಸಂಖ್ಯೆ 3398ಕ್ಕೆ ಏರಿಕೆಯಾಗಿದೆ .

ಬೆಂಗಳೂರು ನಗರ 1610, ಬಳ್ಳಾರಿ 736, ಬೆಳಗಾವಿ 575, ಧಾರವಾಡ 276, ದಕ್ಷಿಣ ಕನ್ನಡ 243, ಮೈಸೂರು 238, ಉಡುಪಿ 219, ರಾಯಚೂರು 201, ಶಿವಮೊಗ್ಗ 189, ದಾವಣಗೆರೆ 172, ಕೊಪ್ಪಳ 169, ಕಲಬುರಗಿ 156, ಹಾಸನ 146, ಮಂಡ್ಯ 141, ಬಾಗಲಕೋಟೆ 135, ವಿಜಯಪುರ 121, ಯಾದಗಿರಿ 102, ರಾಮನಗರ 96, ಚಿಕ್ಕಮಗಳೂರು  93, ತುಮಕೂರು 89, ಗದಗ 78, ಬೀದರ್ ಮತ್ತು ಉತ್ತರ ಕನ್ನಡ 73, ಚಾಮರಾಜನಗರ 72, ಕೋಲಾರ 69, ಚಿತ್ರದುರ್ಗ 47, ಕೊಡಗು 41, ಹಾವೇರಿ 36, ಚಿಕ್ಕಬಳ್ಳಾಪುರ 33 ಮತ್ತು ಬೆಂಗಳೂರು ಗ್ರಾಮಾಂತರ 28 ಸೇರಿದಂತೆ ಒಟ್ಟು 6257 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 
86 deaths 6257 New COVID cases reported in Karnataka On August 11th86 deaths 6257 New COVID cases reported in Karnataka On August 11th

Follow Us:
Download App:
  • android
  • ios