ಕೆಲ ವ್ಯಕ್ತಿಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ದೃಢ ಸಂಕಲ್ಪ ಮಾಡಿದ್ದು, ಈ ಕೃತ್ಯಕ್ಕಾಗಿ ಸುಪಾರಿ ಕೂಡಾ ನೀಡಿದ್ದಾರೆ. ಜೊತೆಗೆ ಈ ಕೆಲಸಕ್ಕೆ ದೇಶದ ಒಳಗಿನ ಕೆಲ ವ್ಯಕ್ತಿಗಳು ಮತ್ತು ಹೊರಗಿರುವ ಕೆಲ ವ್ಯಕ್ತಿಗಳು ಕೂಡಾ ಕೈಜೋಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಭೋಪಾಲ್: ಕೆಲ ವ್ಯಕ್ತಿಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ದೃಢ ಸಂಕಲ್ಪ ಮಾಡಿದ್ದು, ಈ ಕೃತ್ಯಕ್ಕಾಗಿ ಸುಪಾರಿ ಕೂಡಾ ನೀಡಿದ್ದಾರೆ. ಜೊತೆಗೆ ಈ ಕೆಲಸಕ್ಕೆ ದೇಶದ ಒಳಗಿನ ಕೆಲ ವ್ಯಕ್ತಿಗಳು ಮತ್ತು ಹೊರಗಿರುವ ಕೆಲ ವ್ಯಕ್ತಿಗಳು ಕೂಡಾ ಕೈಜೋಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವದ (Democracy) ಮೇಲೆ ದಾಳಿ ನಡೆಸಲಾಗುತ್ತಿದೆ. ವಿದೇಶಗಳು ಇದನ್ನು ಗಮನಿಸಬೇಕು ಎಂದು ಲಂಡನ್‌ನಲ್ಲಿ ಇತ್ತೀಚೆಗೆ ಕಾಂಗ್ರೆಸ್ಸಿಗ ರಾಹುಲ್ ಗಾಂಧಿ (Rahul Gandhi) ಲಂಡನ್‌ನಲ್ಲಿ (London) ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮೋದಿ ಅವರು ರಾಹುಲ್ ಹೆಸರೆತ್ತದೇ ಪರೋಕ್ಷ ತಿರುಗೇಟು ನೀಡಿದ್ದಾರೆ.
ಮೋದಿ ಡಿಗ್ರಿ ಬಗ್ಗೆ ಈಗ ಅನುಮಾನ ಇನ್ನೂ ಜಾಸ್ತಿ ಆಗಿದೆ ಎಂದ ಅರವಿಂದ್ ಕೇಜ್ರಿವಾಲ್!
ಭೋಪಾಲ್‌ನ (Bhopal) ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಭೋಪಾಲ್- ದೆಹಲಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ನೂತನ ರೈಲು ಸೇವೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ದೇಶದಲ್ಲಿನ ಕೆಲ ವ್ಯಕ್ತಿಗಳು 2014ರಿಂದಲೂ ಮೋದಿ ವ್ಯಕ್ತಿತ್ವಕ್ಕೆ ಧಕ್ಕೆ ತಂದೇ ತೀರುವುದಾಗಿ ಪಣ ತೊಟ್ಟಿದ್ದಾರೆ. ಇದಕ್ಕೆ ನಮ್ಮ ದೇಶದೊಳಗೆ ಕುಳಿತ ಕೆಲ ವ್ಯಕ್ತಿಗಳು ಬೆಂಬಲ ಸೂಚಿಸಿದ್ದರೆ, ದೇಶದ ಹೊರಗೆ ಕುಳಿತ ಇನ್ನಷ್ಟು ವ್ಯಕ್ತಿಗಳು ಕೂಡಾ ತನ್ನ ನೆರವನ್ನು ಚಾಚಿದ್ದಾರೆ. ಈ ವ್ಯಕ್ತಿಗಳು ನಿರಂತರವಾಗಿ ಮೋದಿಯ ವ್ಯಕ್ತಿತ್ವವನ್ನು ಹಾಳುಗೆಡವುವ ಮತ್ತು ಧಕ್ಕೆ ತರುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಆದರೆ ಭಾರತದ ಬಡವರು, ಮಧ್ಯಮ ವರ್ಗದ ಜನರು, ಆದಿವಾಸಿಗಳು (Trible), ದಲಿತರು, ಹಿಂದುಳಿದ ಸಮುದಾಯ ಮತ್ತು ಪ್ರತಿ ಭಾರತೀಯ ಪ್ರಜೆ ಮೋದಿಗೆ ಭದ್ರತಾ ತಡೆಗೋಡೆಯಾಗಿ ರಕ್ಷಣೆ ಮಾಡುತ್ತಿದ್ದಾರೆ. ಈ ವಿಷಯವೇ ನನ್ನ ಟೀಕಾಕಾರರು ಹೊಸ ತಂತ್ರ ಹುಡುಕುವಂತೆ ಮಾಡಿದೆ; ಎಂದು ವಿಪಕ್ಷಗಳನ್ನು ಕುಟುಕಿದರು. ಇಂಥ ವ್ಯಕ್ತಿಗಳೇ ಮೋದಿ ನಿನ್ನ ಸಮಾಧಿ ಅಗೆಯುತ್ತೇವೆ ಎಂದು ಪ್ರತಿಜ್ಞೆ ಕೈಗೊಂಡಿದ್ದಾರೆ. ಇಂಥ ಸಂಚುಗಳ ನಡುವೆಯೇ, ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶದ ಅಭಿವೃದ್ಧಿ ಮತ್ತು ದೇಶ ಕಟ್ಟುವ ಕೆಲಸದ ಬಗ್ಗೆ ಗಮನ ಕೊಡಬೇಕು ಎಂದು ಕರೆಕೊಟ್ಟರು.
ಪ್ರಧಾನಿ ಮೋದಿ ಡಿಗ್ರಿ ಕೇಳಿದ್ದ ಕೇಜ್ರಿವಾಲ್ ಅರ್ಜಿ ವಜಾ: 25 ಸಾವಿರ ದಂಡ
