ಬೆಂಗಳೂರು( ಜ.  13)  ಅತಿದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ಶುರುವಾಗಲು ಕಾಲ ಹತ್ತಿರವಾಗಿದೆ. ಇದೆಲ್ಲದರ ನಡುವೆ ವಿವಾದಾತ್ಮಕ ಹೇಳಿಕೆಗಳು ಹರಿದು ಬರುತ್ತಿವೆ.

ದೇಶದ ಕೆಲ ಮುಸಲ್ಮಾನನರಿಗೆ ಭಾರತದ ವಿಜ್ಞಾನಿಗಳ ಮೇಲೆ ನಂಬಿಕೆ ಇಲ್ಲ. ಅಂಥವರು ಧಾರಾಳವಾಗಿ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್  ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಂಸ್ಕೃತ ಶ್ಲೋಕದೊಂದಿಗೆ ಗುರಿ ತಲುಪಿದ ಕೊರೋನಾ ಲಸಿಕೆ

ಕೆಲ ಮುಸ್ಲಿಮರಿಗೆ ವಿಜ್ಞಾನಿಗಳು ಮತ್ತು ಪೊಲೀಸರ ಮೇಲೆ ನಂಬಿಕೆ ಇಲ್ಲದಿರುವುದು ದುರ್ದೈವ. ಅವರಿಗೆ ಪ್ರಧಾನಿ ಮೇಲೆಯೂ ನಂಬುಗೆ ಇಲ್ಲ.  ಪಾಕಿಸ್ತಾದ ಮೇಲೆ ನಂಬಿಕೆ ಇದ್ದರೆ ಅಲ್ಲಿಗೆ ಹೋಗಬಹುದು ಎಂದು ಹೇಳಿದ್ದಾರೆ.

ದೆಹಲಿ ಸರ್ಕಾರದ ಮೇಲೆಯೂ ವಾಗ್ದಾಳಿ ಮಾಡಿದ ಶಾಸಕ ಕೇಜ್ರಿವಾಲ್ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ ಎಂದು ಆರೋಪಿಸಿದರು. ಪುಣೆಯಲ್ಲಿ ಸಿದ್ಧವಾದ ಲಸಿಕೆ ದೇಶದ ಹದಿಮೂರು ನಗರಗಳಿಗೆ ತಲುಪಿದ್ದು  ಲಸಿಕೆ ನೀಡಿಕೆ ಕಾರ್ಯ ಆರಂಭವಾಗಲಿದೆ.