ಕಾಫಿನಾಡಿನ ಯೋಧನ ಮೃತದೇಹ ಬಿಹಾರದಲ್ಲಿ ಪತ್ತೆ

* ಕಾಫಿನಾಡಿನ ಯೋಧನ ಮೃತದೇಹ ಬಿಹಾರದಲ್ಲಿ ಪತ್ತೆ

* ಕಿಶನ್ ಗಂಜ್ ಪ್ರದೇಶದಲ್ಲಿ ಪತ್ತೆಯಾದ ಯೋಧ ಎಂ.ಎನ್ ಗಣೇಶ್ ಮೃತದೇಹ

* ಎಂ.ಎನ್ ಗಣೇಶ್, ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಗ್ರಾಮದವರು

Soldier From Chikkamagaluru Found Dead In Bihar pod

ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಜೂ.13): ಕಾಫಿನಾಡು, ಚಿಕ್ಕಮಗಳೂರಿನ ಯೋಧನ ಮೃತದೇಹ ಬಿಹಾರದಲ್ಲಿ ಪತ್ತೆಯಾಗಿದೆ. ಕಿಶನ್ ಗಂಜ್ ಪ್ರದೇಶದಲ್ಲಿ ಯೋಧ ಎಂ.ಎನ್ ಗಣೇಶ್ ಮೃತದೇಹ ಪತ್ತೆಯಾಗಿದೆ. 

ಇನ್ನು ಯೋಧ ಎಂ.ಎನ್ ಗಣೇಶ್, ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಗ್ರಾಮದವರು. ಕಳೆದ ಏಪ್ರಿಲ್ 24ರಂದು ರಜೆ ಮೇಲೆ ಯೋಧ ಗಣೇಶ್ ಊರಿಗೆ ಬಂದಿದ್ದರು. ಆದರೆ ಜೂನ್ 9ರಂದು ಗ್ರಾಮದಿಂದ  ತೆರಳಿದ್ದ ಯೋಧ ಗಣೇಶ್, ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಸಾವನ್ನಪ್ಪಿದ್ದಾರೆ. 

Soldier From Chikkamagaluru Found Dead In Bihar pod

ಕಿಶನ್ ಗಂಜ್ ಪ್ರದೇಶದಲ್ಲಿ ಯೋಧ ಸಾವನ್ನಪ್ಪಿರುವ ಬಗ್ಗೆ ಸೇನೆಯ ಅಧಿಕಾರಿಗಳಿಂದ ಚಿಕ್ಕಮಗಳೂರು ಡಿಸಿಗೆ ಮಾಹಿತಿ ಲಭ್ಯವಾಗಿದೆ. ಇನ್ನು ಯೋಧ ಗಣೇಶ್ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಭೇಟಿ ನೀಡಿದ್ದು, ಎರಡು ದಿನದಲ್ಲಿ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತರಲು ಏರ್ಪಾಡು ಮಾಡಲಾಗುತ್ತದೆ. 

ಸಾವಿನ ಕಾರಣ ನಿಗೂಢ : ತನಿಖೆ 

ಬಿಹಾರದ ಕಿಶನ್ ಗಂಜ್ನಲ್ಲಿ ಅವರ ಮೃತದೇಹ ಕಂಡ ಆಂಬುಲೆನ್ಸ್ ಚಾಲಕ ಜೇಬಿನಲ್ಲಿದ್ದ ಐಡಿ ಕಾರ್ಡ್ ಹಾಗೂ ಆರ್ಮಿಯ ಪಾಸ್ಔಟ್ ನೋಡಿ ಈತ ಯೋಧ ಎಂದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸೇನೆಗೆ ವಾಪಸ್ ಹೋಗೇ ಇಲ್ಲ. ಅವರು ಹೇಗೆ ಸಾವನ್ನಪ್ಪಿದರು ಎಂಬುದು ಕುಟುಂಬಸ್ಥರು ಹಾಗೂ ಸ್ಥಳಿಯರಲ್ಲಿ ಯಕ್ಷಪ್ರಶ್ನೆಯಾಗಿದೆ. ತಾಲೂಕಿನ ಮಸಿಗದ್ದೆ ಗ್ರಾಮದ ನಾಗಯ್ಯ-ಗಂಗಮ್ಮ ದಂಪತಿಯ ಪುತ್ರನಾದ ಗಣೇಶ್ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತ ಯೋಧ ಗಣೇಶ್ ಪ್ರಸ್ತುತ ಜಮ್ಮುವಿನಲ್ಲಿ ಸಿಗ್ನಲ್ ರೆಜಿಮೆಂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೃತ ಗಣೇಶ್ ಐದು ವರ್ಷದ ಓರ್ವ ಹೆಣ್ಣು ಮಗಳಿದ್ದಾಳೆ.

ಕಳೆದ ಮೂರು ವರ್ಷಗಳ ಹಿಂದೆ ನಾಗಯ್ಯ-ಗಂಗಮ್ಮ ದಂಪತಿಯ ಇನ್ನೊಬ್ಬ ಮಗ ಹಾಗೂ ಯೋಧ ಗಣೇಶ್ ಸಹೋದರ ಕೂಡ ತೀರಿಕೊಂಡಿದ್ದರು. ಇದೀಗ ಯೋಧ ಗಣೇಶ್ ಕೂಡ ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬಕ್ಕೆ ಆಧಾರವೇ ಇಲ್ಲದಂತಾಗಿದೆ. ಯೋಧನ ಸಾವಿನಿಂದ ಕುಟುಂಬ ಹಾಗೂ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತ ಯೋಧ ಗಣೇಶ್ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ , ಸ್ಥಳೀಯ ಶಾಸಕ ಟಿ ಡಿ ರಾಜೇಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.ಇನ್ನು ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಯೋಧ ಗಣೇಶ್ ಮೃತಪಟ್ಟಿರುವ ಬಗ್ಗೆ ಸೇನೆ ಅಧಿಕಾರಿಗಳು ಖಚಿತಪಡಿಸಿದ್ದಾರೆ, ಸಾವಿನ ಕಾರಣ ಇನ್ನು ತಿಳಿದಿಲ್ಲ ಬಂದಿಲ್ಲ, ಮೃತದೇಹವನ್ನು ಶೀಘ್ರವೇ ಹಸ್ತಾಂತರ ಮಾಡುವ ಬಗ್ಗೆ ಸೇನೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios