Asianet Suvarna News Asianet Suvarna News

ಮಳೆ ಹೆಚ್ಚಾಗುತ್ತಿದ್ದಂತೆ ಸ್ಕೂಟರ್ ಏರಿ ಬೆಚ್ಚಗೆ ಕುಳಿತ ಬುಸ್‌ ಬುಸ್‌ ಸ್ನೇಕ್: ವೀಡಿಯೋ

ಇಲ್ಲೊಂದು ಕಡೆ ಹಾವೊಂದು ಸ್ಕೂಟರ್‌ವೊಂದರ ಪೆಟ್ರೋಲ್ ಟ್ಯಾಂಕ್‌ನ ವಾಲ್‌ ಮೇಲೆ ಸುರುಳಿ ಸುತ್ತಿ ಬೆಚ್ಚಗೆ ಮಲಗಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

snake found in scooters petrol tank video goes viral akb
Author
First Published Jun 28, 2024, 6:26 PM IST

ಮಳೆಗಾಲ ಶುರುವಾಗುತ್ತಿದ್ದಂತೆ ಹಾವುಗಳೆಲ್ಲಾ ವಾಸ ಮಾಡುವುದಕ್ಕೆ ಬೆಚ್ಚನೆಯ ಜಾಗವನ್ನು ಹುಡುಕುವುದೇ ಹೆಚ್ಚು. ಕೆಲವು ಮನೆಯಲ್ಲಿ ಬಿಚ್ಚಿಟ್ಟ ಶೂಗಳ ಒಳಗೆ ಮನೆಯೊಳಗಿನ ಕತ್ತಲ ನಿಗೂಢ ಜಾಗ, ಕಬೋರ್ಡ್, ಬಕೆಟ್ ಮುಂತಾದವುಗಳ ಒಳಗೆ ಹೊಕ್ಕು ಬೆಚ್ಚನೆ ಮಲಗುತ್ತವೆ. ಅದೇ ರೀತಿ ಈಗ ಮುಂಗಾರು ಮಳೆ ಜೋರಾಗಿ ಸುರಿಯುತ್ತಿದ್ದು, ಹಾವು ಚೇಳುಗಳು ಸುರಕ್ಷಿತ ಜಾಗ ಹುಡುಕಿ ಮಾನವರು ಇರುವ ಪ್ರದೇಶಕ್ಕೆ ಬರುತ್ತಿದ್ದು, ಇಲ್ಲೊಂದು ಕಡೆ ಹಾವೊಂದು ಸ್ಕೂಟರ್‌ವೊಂದರ ಪೆಟ್ರೋಲ್ ಟ್ಯಾಂಕ್‌ನ ವಾಲ್‌ ಮೇಲೆ ಸುರುಳಿ ಸುತ್ತಿ ಬೆಚ್ಚಗೆ ಮಲಗಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Salihkt Mullambath ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, 7 ಮಿಲಿಯನ್‌ಗೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಇದರಲ್ಲಿ ಕಾಣಿಸುವಂತೆ ಮೆರೂನ್ ಬಣ್ಣದ ಸ್ಕೂಟರ್‌ ನ ಪೆಟ್ರೋಲ್ ಟ್ಯಾಂಕ್ ಮೇಲೆ ಹಾವೊಂದು ಸುರುಳಿ ಸುತ್ತಿ ಮಲಗಿದೆ. ಆದರೆ ಇದು ಯಾವಾಗಿನ ವೀಡಿಯೋ ಎಂಬುದು ತಿಳಿದಿಲ್ಲ. ವೀಡಿಯೋದಲ್ಲಿ ಜನ ಮಲೆಯಾಳಂ ಮಾತನಾಡುತ್ತಿದ್ದು, ಇದರಿಂದ ಇದು ಕೇರಳ ಆಗಿರಬಹುದು ಎಂದು ಊಹಿಸಲಾಗಿದೆ. 

ಭಾರತದಲ್ಲಿ ವಾಸುಕಿ ಸರ್ಪ ಇದ್ದದ್ದು ಸುಳ್ಳಲ್ಲ ಅಂತಾಯ್ತು! ಈಗ ಅದರ 3 ಕತೆ ಓದಿ

ಒಬ್ಬರು ನಿಧಾನವಾಗಿ ಸ್ಕೂಟರ್‌ನ ಸೀಟನ್ನು ಎತ್ತಿದಾಗ ಅಲ್ಲಿ ಕಪ್ಪು ಹಾಗೂ ಬಿಳಿ ಮಿಶ್ರಿತ ಹಾವು ಸುರುಳು ಸುತ್ತಿ ಮಲಗಿರುವುದು ಕಾಣಿಸುತ್ತಿದೆ. ವೀಡಿಯೋ ನೋಡಿದ ಅನೇಕರು ಇದು ಪೆಟ್ರೋಲ್ ಫುಲ್ ಟ್ಯಾಂಕ್ ಇದ್ಯಾ ಎಂದು ನೋಡುವುದಕ್ಕೆ ಬಂದಿರಬೇಕು ಎಂದು ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಇದು ಭಾರತದ ರಾಕ್ ಫೈಥಾನ್ ಹೆಸರಿನ ಹಾವಾಗಿದ್ದು, ಇದು ವಿಷಕಾರಿ ಅಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.  

ಒಟ್ಟಿನಲ್ಲಿ ಮಳೆಗಾಲದ ಸಮಯದಲ್ಲಿ ಬಿಚ್ಚಿಟ್ಟ ಶೂಗಳನ್ನು ಧರಿಸುವ ಮೊದಲು ಅಥವಾ ಕತ್ತಲ ಸ್ಥಳಗಳಲ್ಲಿ ಕಾಲಿಡುವ ಮೊದಲು ಬಹಳ ಜಾಗರೂಕರಾಗಿರುವುದು ಒಳಿತು ಏಕೆಂದರೆ ಹಾವುಗಳು ಸಾಮಾನ್ಯಾಗಿ ಸುರಕ್ಷಿತ ಸ್ಥಳಗಳನ್ನು ಅರಸಿ ಬಂದು ಇಂತಹ ಸ್ಥಳಗಳಲ್ಲಿ ಬೆಚ್ಚಗೆ ಮಲಗಿರುತ್ತವೆ.

ಭೂಮಿ ಆಗೆಯುವಾಗ ಪವಾಡ, ತ್ರಿಶೂಲ, ಉಂಗುರ ಸೇರಿ ಚಿನ್ನದ ನಿಧಿಗೆ ಕಾವಲಿತ್ತು ನಾಗರ ಹಾವು!

 

Latest Videos
Follow Us:
Download App:
  • android
  • ios