Asianet Suvarna News Asianet Suvarna News

ಕುಣಿಯಲಷ್ಟೇ ಸ್ಮೃತಿ ಅಮೇಥಿಗೆ ಬರ್ತಾರೆ: ಕಾಂಗ್ರೆಸ್ ನಾಯಕನಿಂದ ವಿವಾದಿತ ಹೇಳಿಕೆ

ಬಿಜೆಪಿ ಸಂಸದೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಸ್ವಕ್ಷೇತ್ರವಾದ ಅಮೇಠಿಗೆ ಕೇವಲ ‘ಲಟ್ಕಾ’ ಮತ್ತು ‘ಝಟ್ಕಾ’ (ನೃತ್ಯ ಪ್ರದರ್ಶನ) ಮಾಡಲು ಬರುತ್ತಾರೆ ಎಂದು ಕಾಂಗ್ರೆಸ್‌ ನಾಯಕ ಅಜಯ್‌ ರಾವ್ ಹೇಳಿದ್ದು ಭಾರಿ ವಿವಾದ ಸೃಷ್ಟಿಸಿದೆ.

Smriti will come to Amethi just by dancing: Controversial statement by Congress leader
Author
First Published Dec 20, 2022, 1:03 PM IST

ಲಖನೌ: ಬಿಜೆಪಿ ಸಂಸದೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಸ್ವಕ್ಷೇತ್ರವಾದ ಅಮೇಠಿಗೆ ಕೇವಲ ‘ಲಟ್ಕಾ’ ಮತ್ತು ‘ಝಟ್ಕಾ’ (ನೃತ್ಯ ಪ್ರದರ್ಶನ) ಮಾಡಲು ಬರುತ್ತಾರೆ ಎಂದು ಕಾಂಗ್ರೆಸ್‌ ನಾಯಕ ಅಜಯ್‌ ರಾವ್ ಹೇಳಿದ್ದು ಭಾರಿ ವಿವಾದ ಸೃಷ್ಟಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅಮೇಠಿಯಿಂದ ಸ್ಪರ್ಧಿಸಿ ಜಯಗಳಿಸಲಿದ್ದಾರೆ. ಇದು ಕಾಂಗ್ರೆಸ್‌ನ ಸ್ವಕ್ಷೇತ್ರವಾಗಿದೆ. ಪ್ರಸ್ತುತ ಇಲ್ಲಿನ ಸಂಸದೆಯಾಗಿರುವ ಸ್ಮೃತಿ ಜನರ ಕಷ್ಟ ಕೇಳಲು ಬರದೇ ಕೇವಲ ನೃತ್ಯ ಪ್ರದರ್ಶನಕ್ಕಾಗಿ ಇಲ್ಲಿದೆ ಬರುತ್ತಾರೆ ಎಂದು ರಾಯ್‌ ಹೇಳಿದ್ದಾರೆ. ಇದಕ್ಕೆ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸಿದ್ದು, ‘ದೇಶಕ್ಕೆ ಮಹಿಳಾ ಪ್ರಧಾನಿಯನ್ನು ನೀಡಿದ ಪಕ್ಷದಿಂದ ಇಂತಹ ಹೇಳಿಕೆ ಬಂದಿರುವುದು ನಾಚಿಕೆಗೇಡಿನ ಸಂಗತಿ. ಇದು ಮಹಿಳಾ ವಿರೋಧಿ ಹೇಳಿಕೆ’ ಎಂದಿದೆ.

ಸ್ಮೃತಿ ಹಳೆ ವಿಡಿಯೋ ವೈರಲ್
ಶಾರುಖ್‌- ದೀಪಿಕಾ ನಟನೆಯ ಪಠಾಣ್‌ ಚಿತ್ರದ ಬೇಶರಂ ಹಾಡು (Besharam) ಭಾರೀ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅವರು 1998ರ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ (1998 Miss India pageant) ಕೇಸರಿ ಈಜುಡುಗೆಯಲ್ಲಿ ನಿಂತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಜೊತೆಗೆ ಈ ವಿಡಿಯೋ ಬಿಜೆಪಿ ಮತ್ತು ಟಿಎಂಸಿ ನಡುವೆ ಟ್ವೀಟರ್‌ನಲ್ಲಿ ವಾಕ್ಸಮರಕ್ಕೆ ನಾಂದಿ ಹಾಡಿದೆ. ಬೇಶರಂ ಹಾಡಿನ ಕುರಿತು ಬಿಜೆಪಿ ನಾಯಕ ಅಮಿತ್‌ ಮಾಳವೀಯ (Amit Malviya) ಮಾಡಿದ್ದ ಟ್ವೀಟ್‌ಗೆ, ಟಿಎಂಸಿ ವಕ್ತಾರ ರಿಜು ದತ್ತಾ (TMC spokesperson Riju Dutta) ಅವರು ಸ್ಮೃತಿ ಇರಾನಿ ಅವರ ಹಳೆಯ ವಿಡಿಯೋ ಟ್ಯಾಗ್‌ ಮಾಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿ, ರಿಜು ದತ್ತಾ ಓರ್ವ ಸ್ತ್ರೀ ದ್ವೇಷಿ. ಇಂಥವರನ್ನು ಮಮತಾ ಬ್ಯಾನರ್ಜಿ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಿಸಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಇದಕ್ಕೆ ಮತ್ತೆ ತಿರುಗೇಟು ನೀಡಿರುವ ದತ್ತಾ, ಬಿಲ್ಕಿಸ್‌ ಬಾನೋ ಮೇಲೆ ಅತ್ಯಾಚಾರ ಎಸಗಿದವರನ್ನು ಸಂಸ್ಕಾರಿ ಬ್ರಾಹ್ಮಣರು ಎಂದು ಕರೆದ ಪಕ್ಷಕ್ಕೆ ಲಾಕೆಟ್‌ ಸೇರಿದ್ದಾರೆ ಎಂದಿದ್ದಾರೆ.

Pathaan ಹಾಡು ವಿವಾದದ ಬೆನ್ನಲ್ಲೇ ಸ್ಮೃತಿ ಇರಾನಿ ಈಜುಡುಗೆಯ ಹಳೆ ವಿಡಿಯೋ ವೈರಲ್‌..!

Dharmasthala Laksha Deepotsava: ಧಾರ್ಮಿಕ ಮೌಲ್ಯಗಳಿಂದ ಅಭಿವೃದ್ಧಿ ಸಾಧ್ಯ; ಸ್ಮೃತಿ ಇರಾನಿ

 

Follow Us:
Download App:
  • android
  • ios