Pathaan ಹಾಡು ವಿವಾದದ ಬೆನ್ನಲ್ಲೇ ಸ್ಮೃತಿ ಇರಾನಿ ಈಜುಡುಗೆಯ ಹಳೆ ವಿಡಿಯೋ ವೈರಲ್‌..!

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು 1998ರ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಕೇಸರಿ ಈಜುಡುಗೆಯಲ್ಲಿರುವ ವಿಡಿಯೋವೊಂದು ವೈರಲ್‌ ಆಗಿದೆ. ಜೊತೆಗೆ ಈ ವಿಡಿಯೋ ಬಿಜೆಪಿ ಮತ್ತು ಟಿಎಂಸಿ ನಡುವೆ ಟ್ವಿಟ್ಟರ್‌ನಲ್ಲಿ ವಾಕ್ಸಮರಕ್ಕೆ ನಾಂದಿ ಹಾಡಿದೆ.

pathaan song row smriti iranis miss india video at centre of fresh tmc bjp clash ash

ಬಾಲಿವುಡ್‌ನ (Bollywood) ಶಾರುಖ್‌ ಖಾನ್‌ (Shah Rukh Khan) - ದೀಪಿಕಾ ಪಡುಕೋಣೆ (Deepika Padukone) ನಟನೆಯ ಪಠಾಣ್‌ (Pathan) ಚಿತ್ರದ ಬೇಶರಂ (Besharam) ಹಾಡು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ತುಂಡುಡುಗೆ ಉಡುಪಿನಲ್ಲಿ ಡ್ಯಾನ್ಸ್‌ ಮಾಡಿದ್ದಾರೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ, ಬೇಶರಂ ಹಾಡಿನ ಕುರಿತು ಬಿಜೆಪಿ ನಾಯಕ ಅಮಿತ್‌ ಮಾಳವಿಯ ಮಾಡಿದ್ದ ಟ್ವೀಟ್‌ಗೆ, ಟಿಎಂಸಿ ವಕ್ತಾರ ರಿಜು ದತ್ತಾ ಅವರು ಸ್ಮೃತಿ ಇರಾನಿ (Smriti Irani) ಅವರ ಹಳೆಯ ವಿಡಿಯೋ ಟ್ಯಾಗ್‌ ಮಾಡಿದ್ದಾರೆ. 

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು 1998ರ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಕೇಸರಿ ಈಜುಡುಗೆಯಲ್ಲಿರುವ ವಿಡಿಯೋವೊಂದು ವೈರಲ್‌ ಆಗಿದೆ. ಜೊತೆಗೆ ಈ ವಿಡಿಯೋ ಬಿಜೆಪಿ ಮತ್ತು ಟಿಎಂಸಿ ನಡುವೆ ಟ್ವಿಟ್ಟರ್‌ನಲ್ಲಿ ವಾಕ್ಸಮರಕ್ಕೆ ನಾಂದಿ ಹಾಡಿದೆ. ಬೇಶರಂ ಹಾಡಿನ ಕುರಿತು ಬಿಜೆಪಿ ನಾಯಕ ಅಮಿತ್‌ ಮಾಳವಿಯ ಮಾಡಿದ್ದ ಟ್ವೀಟ್‌ಗೆ, ಟಿಎಂಸಿ ವಕ್ತಾರ ರಿಜು ದತ್ತಾ ಅವರು ಸ್ಮೃತಿ ಇರಾನಿ ಅವರ ಹಳೆಯ ವಿಡಿಯೋ ಟ್ಯಾಗ್‌ ಮಾಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿ, ರಿಜು ದತ್ತಾ ಓರ್ವ ಸ್ತ್ರೀ ದ್ವೇಷಿ. ಇಂಥವರನ್ನು ಮಮತಾ ಬ್ಯಾನರ್ಜಿ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಿಸಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. 

ಇದನ್ನು ಓದಿ: ಹಿಂದೂಗಳ ಬಳಿಕ ಪಠಾಣ್‌ಗೆ ಮುಸ್ಲಿಂ ಸಂಘಟನೆಗಳಿಂದಲೂ ವಿರೋಧ

ಇದಕ್ಕೆ ಮತ್ತೆ ತಿರುಗೇಟು ನೀಡಿರುವ ರಿಜು ದತ್ತಾ, ಬಿಲ್ಕಿಸ್‌ ಬಾನೋ ಮೇಲೆ ಅತ್ಯಾಚಾರ ಎಸಗಿದವರನ್ನು ಸಂಸ್ಕಾರಿ ಬ್ರಾಹ್ಮಣರು ಎಂದು ಕರೆದ ಪಕ್ಷಕ್ಕೆ ಲಾಕೆಟ್‌ ಚಟರ್ಜಿ ಸೇರಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಹಾಗೂ, ಲಾಕೆಟ್‌ ಚಟರ್ಜಿಯವರದ್ದು ಬೂಟಾಟಿಕೆ ಎಂದೂ ರಿಜು ದತ್ತಾ ಆರೋಪಿಸಿದರು. ಅಲ್ಲದೆ, ಬಿಜೆಪಿ ಕೆಲವು ಮಹಿಳೆಯರಿಗೆ ಒಂದು ಮಾನದಂಡವನ್ನು ಹೊಂದಿದೆ ಮತ್ತು ಇತರರಿಗೆ ಇನ್ನೊಂದು ಮಾನದಂಡವನ್ನು ಹೊಂದಿದೆ ಎಂದೂ ಹೇಳಿದರು.

ಇದನ್ನೂ ಓದಿ: ಶಾರುಖ್ ಖಾನ್ ಸಿನಿಮಾಕ್ಕೆ ಮುಗಿಯದ ಗೋಳು; ಪಠಾಣ್‌ಗೂ ಕಾಡುತ್ತಿದೆ ನಿಷೇಧದ ಭೀತಿ!

ನಂತರ, ಮತ್ತೆ ಟಿಎಂಸಿ ವಿರುದ್ಧ ಲಾಕೆಟ್‌ ಚಟರ್ಜಿ ಟೀಕೆ ಮಾಡಿದ್ದು, ಟಿಎಂಸಿ ಮುಖ್ಯಮಂತ್ರಿ ಮಹಿಳೆಯಾಗಿದ್ದರೂ, ಪಕ್ಷದವರಿಗೆ ಮಹಿಳೆಯರ ಮೇಲೆ ಗೌರವವಿಲ್ಲ ಎಂದು ಹೇಳಿದ್ದಾರೆ. ಹಾಗೂ, ಯಶಸ್ವಿ ಮಹಿಳೆಯರ ಹಳೆಯ ವಿಡಿಯೋಗಳನ್ನು ಟಿಎಂಸಿ ಪಕ್ಷ ಬಳಸುತ್ತಿರುವುದು "ದುರದೃಷ್ಟಕರ" ಮತ್ತು "ಅಸಹ್ಯಕರ" ಎಂದು ಬಿಜೆಪಿ ಸಂಸದೆ ಸುದ್ದಿಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ.

ಇದನ್ನೂ ಓದಿ: ಕೇಸರಿ ಬಟ್ಟೆಯಲ್ಲಿ ದೀಪಿಕಾ ಪಡುಕೋಣೆ ಹಾಟ್‌ ದೃಶ್ಯ, 'ಪಠಾಣ್‌' ಮೇಲೆ ಹಿಂದು ಕೆಂಗಣ್ಣು!

ಈ ಮಧ್ಯೆ,  ಲಾಕೆಟ್‌ ಚಟರ್ಜಿ ಟೀಕೆಗೆ ಹಾಗೂ ತನ್ನ ಹಿಂದಿನ ಟ್ವೀಟ್‌ಗೆ ಸುದ್ದಿ ಸಂಸ್ಥೆ ಎಎನ್‌ಐಗೆ ಸ್ಪಷ್ಟನೆ ನೀಡಿದ ರಿಜು ದತ್ತಾ, ಸ್ಮೃತಿ ಇರಾನಿ ಅವರು ಆಯ್ಕೆ ಮಾಡಿದ ಯಾವುದೇ ಬಟ್ಟೆಯಲ್ಲಿ ಟಿಎಂಸಿಗೆ ಸಮಸ್ಯೆ ಇಲ್ಲ. ಹಾಗೆ ಮಾಡುವುದು ಅವರ ಹಕ್ಕು ಎಂದು ಹೇಳಿದ್ದಾರೆ. ಹಾಗೂ, ಬಿಜೆಪಿಯ ನೈತಿಕ ಪೊಲೀಸ್‌ಗಿರಿ ಮತ್ತು ನಿರ್ದಿಷ್ಟ ವ್ಯಕ್ತಿಗಳ ವಿರುದ್ಧದ ಆಕ್ರೋಶವನ್ನು ಮಾತ್ರ ಪಕ್ಷ ವಿರೋಧಿಸುತ್ತದೆ . ನಾನು ಅಂತಹವರಿಗೆ ಕನ್ನಡಿಯನ್ನು ತೋರಿಸಿದ್ದೇನೆ ಅಷ್ಟೇ ಎಂದು ಹೇಳಿಕೊಂಡಿದ್ದಾರೆ.
 
ಈ ಹಾಡಿನ ದೃಶ್ಯಗಳನ್ನು "ತಿದ್ದುಪಡಿ" ಮಾಡದಿದ್ದರೆ, ಪಠಾಣ್ ರಾಜ್ಯದಲ್ಲಿ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದು ನಟಿ ದೀಪಿಕಾ ಪಡುಕೋಣೆ ಅವರನ್ನು ಗುರಿಯಾಗಿಟ್ಟುಕೊಂಡು, ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಎಚ್ಚರ ನೀಡಿದ್ದರು. ಅದರ ನಂತರ, ಅನೇಕ ಹಿಂದೂ ಸಂಘಟೆಗಳ ನಾಯಕರು ಹಾಗೂ ಅನೇಕರು ಈ ಹಾಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಪಠಾಣ್‌ - ದೀಪಿಕಾ ಪಡುಕೋಣೆಯ ಸೂಪರ್ ಹಾಟ್ ಅವತಾರ ಸಖತ್‌ ವೈರಲ್
 
“ಹಾಡಿನಲ್ಲಿ ಧರಿಸಿರುವ ಉಡುಪುಗಳು ಆಕ್ಷೇಪಾರ್ಹವಾಗಿವೆ. ಈ ಹಾಡಿನ ಚಿತ್ರೀಕರಣದ ಹಿಂದೆ ಕಲುಷಿತ ಮನಸ್ಸುಗಳ ಕೈವಾಡವಿದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ದೀಪಿಕಾ ಪಡುಕೋಣೆ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಪ್ರತಿಭಟನೆಗೆ ಹೋದಾಗ ತುಕ್ಡೆ-ತುಕ್ಡೆ ಗ್ಯಾಂಗ್‌ನ ಬೆಂಬಲಿಗರಾಗಿದ್ದರು ಮತ್ತು ಅದಕ್ಕಾಗಿಯೇ ಅವರು ಹಾಡಿನ ದೃಶ್ಯಗಳನ್ನು ಸರಿಪಡಿಸಬೇಕು, ವೇಷಭೂಷಣಗಳನ್ನು ಸರಿಪಡಿಸಬೇಕು ಎಂದು ನಾನು ವಿನಂತಿಸುತ್ತೇನೆ. ಇಲ್ಲದಿದ್ದರೆ, ಈ ಚಿತ್ರವನ್ನು ಮಧ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದು ಯೋಚಿಸಬಹುದಾದ ಪ್ರಶ್ನೆಯಾಗಿದೆ ಎಂದೂ ಗೃಹ ಸಚಿವ ನರೋತ್ತಮ್‌ ಮಿಶ್ರಾ ಹೇಳಿದ್ದರು. 

Latest Videos
Follow Us:
Download App:
  • android
  • ios