ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಅನ್ನೋ ಕಾಂಗ್ರೆಸ್ ಆರೋಪ ಇದೀಗ ತಿರುಗುಬಾಣವಾಗಿದೆ. ಇದೀಗ ಗೋವಾದ ಸಿಲ್ಲಿ ಸೋಲ್ಸ್ ಕೆಫೆ ಹಾಗೂ ಬಾರ್ ಮಾಲೀಕರೇ ಉತ್ತರ ನೀಡಿದ್ದಾರೆ.

ನವದೆಹಲಿ(ಜು.30):  ಅಕ್ರಮ ಬಾರ್ ವಿಚಾರ ಬಿಜೆಪಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಮುಗಿ ಬಿದ್ದ ಕಾಂಗ್ರೆಸ್‌ಗೆ ಇದೀಗ ಮುಖಭಂಗವಾಗಿದೆ. ಗೋವಾದಲ್ಲಿ ಸ್ಮೃತಿ ಇರಾನಿ ಪುತ್ರಿ ಅಕ್ರಮವಾಗಿ ಗೋವಾದಲ್ಲಿ ಸಿಲ್ಲಿ ಸೋಲ್ಸ್ ಕೆಫೆ ಆ್ಯಂಡ್ ಬಾರ್ ಹೆಸರಿನಲ್ಲಿ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಆರೋಪನ್ನು ನಿರಾಕರಿಸಿದ್ದ ಸ್ಮೃತಿ ಇರಾನಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಇತ್ತ ಗೋವಾದ ಸಿಲ್ಲಿ ಸೋಲ್ಸ್ ಕೆಫೆ ಹಾಗೂ ಬಾರ್ ಮಾಲೀಕರು ಅಸಲಿ ಸತ್ಯ ಬಹಿರಂಗಪಡಿಸಿದ್ದಾರೆ. ಸಿಲ್ಲಿ ಸೋಲ್ಸ್ ಕೆಫೆ ಹಾಗೂ ಬಾರ್ ಸಂಪೂರ್ಣವಾಗಿ ನಮ್ಮ ಕುಟುಂಬದಲ್ಲೇ ಇದೆ. ಇದರಲ್ಲಿ ಹೊರಗಿನ ವ್ಯಕ್ತಿಗಳು ಇಲ್ಲ ಎಂದು ಬಾರ್ ಮಾಲೀಕತ್ವ ಹೊಂದಿರುವ ಕುಟುಂಬಸ್ಥರು ಗೋವಾ ಅಬಕಾರಿ ಇಲಾಖೆ ಮಾಹಿತಿ ನೀಡಿದ್ದಾರೆ. 

ಸ್ಮೃತಿ ಇರಾನಿಯ 19 ವರ್ಷದ ಪುತ್ರಿ ಗೋವಾದಲ್ಲಿ ಸಿಲ್ಲಿ ಸೋಲ್ಸ್ ಕೆಫೆ ಹಾಗೂ ಬಾರ್ ಅಕ್ರಮವಾಗಿ ನಡೆಸುತ್ತಿದ್ದಾರೆ. ಬಾರ್ ಲೈಸೆನ್ಸ್ ಹೊಂದಿರುವ ವ್ಯಕ್ತಿ ಮೃತಪಟ್ಟ ಬಳಿಕ ಈ ಲೈಸೆನ್ಸ್ ಸ್ಮೃತಿ ಇರಾನಿ ತಮ್ಮ ಪುತ್ರಿಯ ಹೆಸರಲ್ಲಿ ಪಡೆದುಕೊಂಡಿದ್ದಾರೆ. ಪುತ್ರಿ ಬಾರ್ ನಡೆಸುತ್ತಿದ್ಗಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಗೋವಾದ ಸಿಲ್ಲಿ ಸೋಲ್ಸ್ ಕೆಫೆ ಹಾಗೂ ಬಾರ್ ಮರ್ಲಿನ್ ಅಂಥೋನಿ ಡಿ ಗಾಮಾ ಹಾಗೂ ಅವರ ಪುತ್ರ ಡೀನ್ ಡಿ ಗಾಮಾಗೆ ಸೇರಿದೆ. 2021ರಲ್ಲಿ ಅಂಥೋನಿ ಮೃತಪಟ್ಟಿದ್ದರು. ಹೀಗಾಗಿ ಸಹಜವಾಗಿ ಪತ್ನಿ ಹೆಸರಿಗೆ ಬಾರ್ ಲೈಸೆನ್ಸ್ ವರ್ಗಾವಣೆ ಆಗಿತ್ತು. ಇತ್ತೀಚೆಗೆ ಪತ್ನಿ ಕೂಡ ಮೃತಪಟ್ಟಿದ್ದಾರೆ. ಇದೀಗ ಈ ದಂಪತಿಯ ಮಕ್ಕಳಿಗೆ ಲೈಸೆನ್ಸ್ ವರ್ಗಾವಣೆಯಾಗಿದೆ. ಇಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಬಾರ್ ಮಾಲೀಕರು ಅಬಕಾರಿ ಇಲಾಖೆಗೆ ಉತ್ತರಿಸಿದ್ದಾರೆ. ಈ ವಿಚಾರದಲ್ಲಿ ಸುಖಾಸುಮ್ಮನೆ ರಾಜಕೀಯ ಮಾಡಿ ಕುಟುಂಬಕ್ಕೆ ಹಾನಿಮಾಡಬೇಡಿ ಎಂದು ಬಾರ್ ಮಾಲೀಕರು ಮನವಿ ಮಾಡಿದ್ದಾರೆ.

ಸ್ಮೃತಿ ಇರಾನಿ Defamation Case: ಟ್ವೀಟ್‌ ಡಿಲೀಟ್‌ ಮಾಡಿ, 3 ಕಾಂಗ್ರೆಸ್‌ ನಾಯಕರಿಗೆ ಕೋರ್ಟ್‌ ಸೂಚನೆ!

3 ಕಾಂಗ್ರೆಸ್‌ ನಾಯಕರಿಗೆ ಸ್ಮೃತಿ ಲೀಗಲ್‌ ನೋಟಿಸ್‌
ಗೋವಾದಲ್ಲಿ ಮೃತ ವ್ಯಕ್ತಿಯ ಹೆಸರಿನಲ್ಲಿ ಲೈಸೆನ್ಸ್‌ ಪಡೆದು ತಮ್ಮ ಪುತ್ರಿ ಅಕ್ರಮವಾಗಿ ಬಾರ್‌ ನಡೆಸುತ್ತಿದ್ದಾರೆ ಎಂದು ಆರೋಪಿಸಿದ 3 ಕಾಂಗ್ರೆಸ್‌ ಮುಖಂಡರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾನುವಾರ ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಕ್ಷಮೆ ಕೇಳದಿದ್ದರೆ ಕೋರ್ಚ್‌ಗೆ ಹೋಗುವುದಾಗಿ ಎಚ್ಚರಿಸಿದ್ದಾರೆ. ಆರೋಪ ಮಾಡಿದ ಕಾಂಗ್ರೆಸ್‌ ನಾಯಕರಾದ ಪವನ್‌ ಖೇರಾ, ಜೈರಾಂ ರಮೇಶ್‌ ಹಾಗೂ ನೆಟ್ಟಾಡಿ’ಸೋಜಾ ವಿರುದ್ಧ ನೋಟಿಸ್‌ ಜಾರಿಯಾಗಿದೆ. ತಮ್ಮ ಹಾಗೂ ತಮ್ಮ 18 ವರ್ಷದ ಪುತ್ರಿಯ ಹೆಸರು ಕೆಡಿಸಲು ಸುಳ್ಳು ಆರೋಪ ಮಾಡಿದ್ದೀರಿ. ಯಾವತ್ತೂ ತಮ್ಮ ಪುತ್ರಿ ಬಾರ್‌ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿಲ್ಲ. ಆ ವ್ಯಾಪಾರದಲ್ಲೂ ಆಕೆ ತೊಡಗಿಲ್ಲ. ಅಲ್ಲದೆ, ಆಕೆ ಮೃತ ವ್ಯಕ್ತಿ ಹೆಸರಲ್ಲಿ ಲೈಸೆನ್ಸ್‌ ಪಡೆದಿದ್ದಾಳೆ ಎಂದು ಗೋವಾ ಅಬಕಾರಿ ಇಲಾಖೆ ಶೋಕಾಸ್‌ ನೋಟಿಸ್‌ ಕೂಡ ನೀಡಿಲ್ಲ. ಆದರೆ ಸುಳ್ಳು ಆರೋಪಮಾಡಿ ನೈತಿಕ ಅಧಃಪತನ ಪ್ರದರ್ಶಿಸಿದ್ದೀರಿ. ಈ ಬಗ್ಗೆ ಸ್ಪಷ್ಟನೆ ನೀಡಿ’ ಎಂದು ನೋಟಿಸ್‌ನಲ್ಲಿ ಸ್ಮೃತಿ ಕಿಡಿಕಾರಿದ್ದಾರೆ.

ಸೋನಿಯಾ, ರಾಹುಲ್‌ ವಿರುದ್ಧ ಮಾತನಾಡಿದ್ದಕ್ಕೆ ಮಗಳು ಟಾರ್ಗೆಟ್: ಸ್ಮೃತಿ ಇರಾನಿ

ಕಾಂಗ್ರೆಸ್ ಆರೋಪ
ಸ್ಮೃತಿ ಇರಾನಿ ಕುಟುಂಬದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ನಕಲಿ ಲೈಸೆನ್ಸ್‌ ಪಡೆದು ಅವರ ಪುತ್ರಿ ಬಾರ್‌ವೊಂದನ್ನು ನಡೆಸುತ್ತಿದ್ದಾರೆ. ಈ ಬಾರ್‌ನ ಲೈಸೆನ್ಸ್‌ 2021ರ ಮೇ ತಿಂಗಳಿನಲ್ಲಿ ಮೃತರಾದ ವ್ಯಕ್ತಿ ಹೆಸರಿನಲ್ಲಿದೆ. ಆದರೆ ಈ ಲೈಸೆನ್ಸ್‌ ಅನ್ನು ಜೂನ್‌ 2022ರಲ್ಲಿ ಪಡೆದುಕೊಳ್ಳಲಾಗಿದೆ. ಇದು ಅಕ್ರಮ. ಒಂದು ರೆಸ್ಟೋರೆಂಟ್‌ಗೆ ಒಂದೇ ಬಾರ್‌ ಲೈಸೆನ್ಸ್‌ ಇರಬೇಕು. ಆದರೆ ಇಲ್ಲಿ ಎರಡು ಲೈಸೆನ್ಸ್‌ಗಳನ್ನು ಪಡೆಯಲಾಗಿದೆ. ಈ ಸಂಬಂಧ ಶೋಕಾಸ್‌ ನೋಟಿಸ್‌ ನೀಡಿದ ಅಬಕಾರಿ ಅಧಿಕಾರಿಯನ್ನು ರಾಜಕೀಯ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಸ್ಮೃತಿ ಇರಾನಿ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.