Asianet Suvarna News Asianet Suvarna News

ಸ್ಮೃತಿ ಇರಾನಿ Defamation Case: ಟ್ವೀಟ್‌ ಡಿಲೀಟ್‌ ಮಾಡಿ, 3 ಕಾಂಗ್ರೆಸ್‌ ನಾಯಕರಿಗೆ ಕೋರ್ಟ್‌ ಸೂಚನೆ!

ಸ್ಮೃತಿ ಇರಾನಿ ಅವರ 18 ವರ್ಷದ ಮಗಳು ಗೋವಾದಲ್ಲಿ "ಅಕ್ರಮ ಬಾರ್" ನಡೆಸುತ್ತಿದ್ದಾಳೆ ಎಂದು ಕಾಂಗ್ರೆಸ್‌ ನಾಯಕರು ಟ್ವೀಟ್‌ ಮಾಡಿದ್ದರು. ಇದರ ಬೆನ್ನಲ್ಲಿಯೇ ಕೇಂದ್ರ ಸಚಿವೆ ಈ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.

Drop Tweets Delhi High Court Tells 3 Congress Leaders in Union Minister Smriti Irani Defamation Case san
Author
Bengaluru, First Published Jul 29, 2022, 1:28 PM IST

ನವದೆಹಲಿ (ಜುಲೈ 29): ಗೋವಾದ ರೆಸ್ಟೋರೆಂಟ್‌ಗೆ ಸಂಬಂಧಿಸಿದಂತೆ ಬಿಜೆಪಿಯ ಸ್ಮೃತಿ ಇರಾನಿ ಮತ್ತು ಅವರ ಮಗಳ ವಿರುದ್ಧದ ಆರೋಪ ಮಾಡಿ, ಪೋಸ್ಟ್‌ ಮಾಡಿರುವ ಟ್ವೀಟ್‌ಗಳನ್ನು 24 ಗಂಟೆಗಳ ಒಳಗೆ ಡಿಲೀಟ್‌ ಮಾಡುವಂತೆ ಮೂವರು ಕಾಂಗ್ರೆಸ್ ನಾಯಕರಿಗೆ ಆದೇಶ ನೀಡಲಾಗಿದೆ. ಕೇಂದ್ರ ಸಚಿವರ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ನಾಯಕರಿಗೆ ಸಮನ್ಸ್ ನೀಡಿತ್ತು. ಸ್ಮೃತಿ ಇರಾನಿ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರು ತಮ್ಮ ಟ್ವೀಟ್‌ಗಳನ್ನು ಅಳಿಸಿ ಆಗಸ್ಟ್ 18 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಹಾಗೇನಾದರೂ ಕಾಂಗ್ರೆಸ್‌ ನಾಯಕರು ಇದನ್ನು ಮಾಡಲು ವಿಫಲರಾದಲ್ಲಿ, ಈ ಪ್ರಕರಣದಲ್ಲಿ ಟ್ವೀಟ್‌ಗಳನ್ನು ಸಾಮಾಜಿಕ ಮಾಧ್ಯಮ ಕಂಪನಿ ಅಥವಾ ಟ್ವಿಟರ್‌ ಇದನ್ನು ತೆಗೆದುಹಾಕಬೇಕು ಎಂದು ಹೈಕೋರ್ಟ್‌ ಆದೇಶ ನೀಡಿದೆ. ಸ್ಮೃತಿ ಇರಾನಿ ಅವರು ದಾಖಲಿಸಿರುವ ಪ್ರಕರಣಕ್ಕೆ ಔಪಚಾರಿಕವಾಗಿ ಉತ್ತರಿಸುವಂತೆ ದೆಹಲಿ ಹೈಕೋರ್ಟ್ ನಮಗೆ ನೋಟಿಸ್ ನೀಡಿದೆ. ನ್ಯಾಯಾಲಯದ ಮುಂದೆ ಸತ್ಯವನ್ನು ಪ್ರಸ್ತುತಪಡಿಸಲು ನಾವು ಎದುರು ನೋಡುತ್ತೇವೆ. ಇರಾನಿ ಅವರು ಹೊರಹಾಕುತ್ತಿರುವ ವಾದವನ್ನು ನಾವು ಪ್ರಶ್ನಿಸುತ್ತೇವೆ" ಎಂದುಕೋರ್ಟ್ ಆದೇಶದ ನಂತರ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ಸ್ಮೃತಿ ಇರಾನಿ ಅವರ 18 ವರ್ಷದ ಮಗಳು ಗೋವಾದಲ್ಲಿ "ಅಕ್ರಮ ಬಾರ್" ನಡೆಸುತ್ತಿದ್ದಾಳೆ ಎಂಬ ಆರೋಪದ ಮೂಲಕ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ ವಾರ ಕೇಂದ್ರ ಸಚಿವರು ಮೂವರು ಕಾಂಗ್ರೆಸ್ ನಾಯಕರು ಮತ್ತು ಅವರ ಪಕ್ಷಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅವರು ಲಿಖಿತ ಬೇಷರತ್ ಕ್ಷಮೆಯಾಚಿಸಲು ಮತ್ತು ತಮ್ಮ ಮಗಳ ಮೇಲಿನ ಆರೋಪಗಳನ್ನು ತಕ್ಷಣವೇ ಹಿಂಪಡೆಯುವಂತೆ ಕೋರಿದ್ದರು.

ಸ್ಮೃತಿ ಇರಾನಿಗೆ ಸೌಜನ್ಯ, ಸಾಮಾನ್ಯ ಜ್ಞಾನ ಕರುಣಿಸಲೆಂದು ಕಾಂಗ್ರೆಸ್‌ ಭವನದಲ್ಲಿ ಗಣಹೋಮ!

ಸುಳ್ಳು ಆರೋಪಗಳನ್ನು ಮಾಡಿದ್ದ ಕಾಂಗ್ರೆಸ್‌ ನಾಯಕರು: ತನ್ನ ಮತ್ತು ತನ್ನ ಮಗಳ ಪ್ರತಿಷ್ಠೆ, ನೈತಿಕ ಚಾರಿತ್ರ್ಯ ಮತ್ತು ಮಾನಹಾನಿ, ಮಾನಹಾನಿ ಮತ್ತು ಹಾನಿ ಮಾಡುವ ಸಾಮಾನ್ಯ ಉದ್ದೇಶದಿಂದ ತನ್ನ ಮತ್ತು ಮಗಳ ವಿರುದ್ಧ ಸುಳ್ಳು, ಕಟುವಾದ ಮತ್ತು ವೈಯಕ್ತಿಕ ದಾಳಿಗಳನ್ನು ನಡೆಸಲು ಕಾಂಗ್ರೆಸ್ ನಾಯಕರು (Jairam Ramesh, Netta Dsouza ) ಪರಸ್ಪರ ಪಿತೂರಿ ನಡೆಸಿದ್ದಾರೆ ಎಂದು ಇರಾನಿ ಮೊಕದ್ದಮೆಯಲ್ಲಿ ತಿಳಿಸಿದ್ದಾರೆ. ಅರ್ಜಿದಾರರು ಹಾಗೂ ಆಕೆಯ ಪುತ್ರಿ ರೆಸ್ಟೋರೆಂಟ್‌ಗಳ ಮಾಲೀಕರಲ್ಲ. ಅದಲ್ಲದೆ, ಇಂಥ ರೆಸ್ಟೋರೆಂಟ್‌ಗಳ ಪರವಾನಿಗಿ ಪತ್ರಕ್ಕೂ ಅವರು ಅರ್ಜಿ ಹಾಕಿಲ್ಲ. ಇವುಗಳ ನಡುವೆಯೂ ಕಾಂಗ್ರೆಸ್‌ ನಾಯಕರು ಉದ್ದೇಶಪೂರ್ವಕವಾಗಿ ಮಾತನಾಡಿ ಮಾಡುವಂಥ ಹೇಳಿಕೆಗಳನ್ನು ನೀಡಿದ್ದಲ್ಲದೆ, ರೆಸ್ಟೋರೆಂಟ್‌ಗಳನ್ನು ಅಕ್ರಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

"ನನ್ನ ಜತೆಗೆ ಮಾತನಾಡಬೇಡಿ" ಎಂದು ಸ್ಮೃತಿ ಇರಾನಿಗೆ ಹೇಳಿದ ಸೋನಿಯಾ ಗಾಂಧಿ..!

ಮೋಸದಿಂದ ಲೈಸೆನ್ಸ್‌ ಪಡೆದುಕೊಂಡಿದ್ದಾರೆ: ಗೋವಾದಲ್ಲಿ (Goa) ಸ್ಮೃತಿಇರಾನಿ (Smriti Irani) ಮಗಳು "ಕಾನೂನುಬಾಹಿರವಾಗಿ" ರೆಸ್ಟೋರೆಂಟ್ ಬಾರ್  (Bar )ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಮೃತ ವ್ಯಕ್ತಿಯ ಹೆಸರಿನಲ್ಲಿ "ಮೋಸದ" ಪರವಾನಗಿಯನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್, ಸ್ಮೃತಿ ಇರಾನಿ ರಾಜೀನಾಮೆಗೆ ಒತ್ತಾಯಿಸಿತ್ತು. ದೆಹಲಿಯಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ (Pawan Khera), “ಗೋವಾದಲ್ಲಿ ತನ್ನ ಮಗಳು ನಡೆಸುತ್ತಿರುವ ರೆಸ್ಟೋರೆಂಟ್‌ನಲ್ಲಿ ಬಾರ್ ಇದೆ. ಇದು ಮೋಸದಿಂದ ಪರವಾನಗಿ ಪಡೆದ ಆರೋಪವಿದೆ. ಪರವಾನಗಿಯು ಮೇ 2021 ರಲ್ಲಿ ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿದೆ ಮತ್ತು ಜೂನ್‌ನಲ್ಲಿ (2022) ಸಂಗ್ರಹಿಸಲಾಗಿದೆ. ಆ ವ್ಯಕ್ತಿಯ ಹೆಸರಿನಲ್ಲಿ ಸ್ಮೃತಿ ಇರಾನಿ ಅವರ ಮಗಳು ಪರವಾನಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು.

Follow Us:
Download App:
  • android
  • ios