ಕೊಟ್ಟಾಯಂ(ಫೆ.16): ಎರಡು ವಾರಗಳ ಹಿಂದಷ್ಟೇ ದತ್ತು ನೀಡಲಾಗಿದ್ದ 6 ವರ್ಷದ ಹೆಣ್ಣು ಮಗುವೊಂದು ರಸ್ತೆ ಅಪಘಾತದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ಸಾಲಿ (46) ಮೃತ ತಾಯಿ. ಸಾಲಿ ಇತ್ತೀಚೆಗೆ ತಾವು ದತ್ತು ಪಡೆದ ಮಗುವನ್ನು ಸಂಬಂಧಿಕರಿಗೆ ಪರಿಚಯಿಸಿ ಭಾನುವಾರ ರಾತ್ರಿ ಮನೆಗೆ ವಾಪಸಾಗುತ್ತಿದ್ದರು. ಈ ವೇಳೆ ಮಗುವನ್ನು ಎತ್ತಿಕೊಂಡು ಎತ್ತುಮನೂರ್‌ ಸಮೀಪದ ಮನಾರ್ಕಾಡ್‌-ಪಟ್ಟಿತಾನಂ ಬೈಪಾಸ್‌ನಲ್ಲಿ ರಸ್ತೆಯನ್ನು ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರೊಂದು ಗುದ್ದಿ ಪರಾರಿಯಾಗಿದೆ.

ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಕಾರಿನ ಚಾಲಕ ಪರಾರಿಯಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.