Asianet Suvarna News Asianet Suvarna News

ಪಾಕ್ ಜೈಲಿನಲ್ಲಿದ್ದ ಭಾರತದ ಐವರು ಮೀನುಗಾರರು ಸೇರಿ 6 ಮಂದಿ ಸಾವು, ಕುತಂತ್ರ ಬಯಲು!

ಪಾಕಿಸ್ತಾನದ ಜೈಲಿನಲ್ಲಿ ಅಕ್ರಮವಾಗಿ ಕೂಡಿಟ್ಟ 6 ಭಾರತೀಯರು ಮೃತಪಟ್ಟಿದ್ದಾರೆ. ಇದರಲ್ಲಿ ಐವರು ಭಾರತೀಯ ಮೀನುಗಾರರಾಗಿದ್ದಾರೆ. ಈ ಘಟನೆ ಕುರಿತು ಕೇಂದ್ರ ವಿದೇಶಾಂಗ ಇಲಾಖೆ ತೀವ್ರ ಕಳವಳ ವ್ಯಕ್ತಪಡಿಸಿದೆ.

Six Indian prisoners died in Pakistan Jail last 9 months ministry of India external affairs says Alarming ckm
Author
First Published Oct 7, 2022, 6:09 PM IST

ನವದೆಹಲಿ(ಅ.07): ಭಾರತದ ವಿಚಾರದಲ್ಲಿ ಪಾಕಿಸ್ತಾನದ ಕುತಂತ್ರಗಳು ಒಂದೊಂದೆ ಬಯಲಾಗುತ್ತಿದೆ. ಇದೀಗ ಕಳೆದ 9 ತಿಂಗಳಲ್ಲಿ ಪಾಕಿಸ್ತಾನ ಜೈಲಿನಲ್ಲಿದ್ದ  6 ಭಾರತೀಯರು ಮೃತಪಟ್ಟಿರುವ ದಾಖಲೆ ಬಹಿರಂಗವಾಗಿದೆ. ಈ ಪೈಕಿ ಐವರು ಭಾರತೀಯ ಮೀನುಗಾರರಾಗಿದ್ದಾರೆ. ಗಡಿ ದಾಟಿದ ಕಾರಣಕ್ಕೆ ಭಾರತೀಯ ಮೀನುಗಾರರನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದ ಪಾಕಿಸ್ತಾನ ಕಠಿಣ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಮೀನುಗಾರರು ಪೂರೈಸಿದ್ದಾರೆ. ಆದರೆ ಇವರನ್ನು ಬಿಡುಗಡೆ ಮಾಡದ ಪಾಕಿಸ್ತಾನ ಅಕ್ರಮವಾಗಿ ಜೈಲಿನಲ್ಲಿ ಕೂಡಿ ಹಾಕಿತ್ತು. ಇಷ್ಟೇ ಅಲ್ಲ ಇವರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಅನ್ನೋ ಆರೋಪವನ್ನ ಕುಟುಂಬಸ್ಥರು ಮಾಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ವಿದೇಶಾಂಗ ಇಲಾಖೆ ಇದು ತೀವ್ರ ಕಳವಳಕಾರಿ ವಿಚಾರ ಎಂದಿದೆ. 

ಪಾಕಿಸ್ತಾನ ಭಾರತೀಯ ಖೈದಿಗಳ ಸುರಕ್ಷತೆಗೆ ಅಗತ್ಯ ಕ್ರಮಗನ್ನು ಕೈಗೊಳ್ಳಬೇಕು. ಈಗಾಗಲೇ ಹಲವು ಪ್ರಕರಣಗಳು ವರದಿಯಾಗಿದೆ. ಇತ್ತೀಚೆಗೆ ಪಾಕಿಸ್ತಾನ ಜೈಲಿನಲ್ಲಿ ಭಾರತೀಯರ ಸಾವು ಹೆಚ್ಚಾಗುತ್ತಿದೆ. ಇದಕ್ಕೆ ಸುರಕ್ಷತೆ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಕುರಿತು ಇಸ್ಲಾಮಾಬಾದ್ ಹೈಕಮಿಶನ್‌ಗೆ ಎಚ್ಚರಿಕೆ ನೀಡಲಾಗಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಅರಿದಂ ಭಗ್ಚಿ ಹೇಳಿದ್ದಾರೆ.

ಭಯೋತ್ಪಾದನಾ ದಾಳಿ ಹೆಚ್ಚುತ್ತಿರುವ ಪಾಕಿಸ್ತಾನಕ್ಕೆ ಪ್ರವಾಸ ಬೇಡ, ಜನತೆಗೆ ಅಮೆರಿಕ ಸಂದೇಶ!

ಇತ್ತೀಚೆಗೆ ಪಾಕಿಸ್ತಾನದ ಗಡಿ ಭಾಗದಲ್ಲಿ ಮೀನಾಗಾರಿಕೆ ನಡೆಸುತ್ತಿದ್ದ ಭಾರತೀಯ ಮೀನುಗಾರರ ಬೋಟ್ ಮಗುಚಿದೆ. ಈ ವೇಳೆ ರಕ್ಷಿಸುವ ನೆಪದಲ್ಲಿ ಭಾರತೀಯ ಮೀನುಗಾರರನ್ನು ವಶಕ್ಕೆ ಪಡೆದ ಪಾಕಿಸ್ತಾನ ಸೇನೆ, ಭಾರತೀಯ ಸೇನೆಗೆ ಹಸ್ತಾಂತರಿಸಿತ್ತು.  ಆದರೆ ಜನವರಿ ತಿಂಗಳಲ್ಲಿ ಗುಜರಾತ್ ಹಾಗೂ ಪಾಕಿಸ್ತಾನ ಗಡಿ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 50 ವರ್ಷದ ಮೀನುಗಾರನ ಪಾಕಿಸ್ತಾನ ಬಂಧಿಸಿತ್ತು. ಬಳಿಕ ಅಕ್ರಮ ಒಳ ನುಸುಳುವಿಕೆ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿತ್ತು. ಈ ಭಾರತೀಯ ಮೀನುಗಾರ ಪಾಕಿಸ್ತಾನ ಜೈಲಿನಲ್ಲೇ ನಿಧನರಾಗಿದ್ದಾರೆ. 

ಉಗ್ರ ಸಾಜಿದ್‌ ಕಪ್ಪುಪಟ್ಟಿಸೇರಿಸುವ ಭಾರತದ ಯತ್ನಕ್ಕೆ ಮತ್ತೆ ಚೀನಾ ಅಡ್ಡಿ
ಮುಂಬೈ ಸರಣಿ ದಾಳಿ ಪ್ರಕರಣದ ಪ್ರಮುಖ ಸಂಚುಕೋರನಲ್ಲಿ ಒಬ್ಬನಾದ ಪಾಕಿಸ್ತಾನ ಮೂಲದ ಲಷ್ಕರ್‌ ಉಗ್ರ ಸಾಜಿದ್‌ ಮೀರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ಅಮೆರಿಕ ಮತ್ತು ಭಾರತದ ಯತ್ನಕ್ಕೆ ಚೀನಾ ಮತ್ತೊಮ್ಮೆ ಅಡ್ಡಿ ಮಾಡಿದೆ. ಶುಕ್ರವಾರ ಉಭಯ ದೇಶಗಳು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಪ್ರಸ್ತಾಪವನ್ನು ಪಾಕ್‌ ಕೋರಿಕೆಯಂತೆ ಚೀನಾ ತಡೆದಿದೆ. ಕಳೆದ 4 ತಿಂಗಳಲ್ಲಿ ಚೀನಾ ಹೀಗೆ ಮಾಡುತ್ತಿರುವುದು 3ನೇ ಯತ್ನ. ಒಂದು ವೇಳೆ ಆತ ಕಪ್ಪುಪಟ್ಟಿಗೆ ಸೇರಿದ್ದರೆ ಆತನ ಆಸ್ತಿ ಜಪ್ತಿ, ಪ್ರಯಾಣಕ್ಕೆ ನಿರ್ಬಂಧ ಮತ್ತು ಆತನಿಗೆ ಶಸ್ತ್ರಾಸ್ತ್ರ ಮಾರಾಟ ನಿಷೇಧಿಸಬಹುದಿತ್ತು. 
 

Follow Us:
Download App:
  • android
  • ios