* ಬಹುದೊಡ್ಡ ಚರ್ಚೆಗೆ ಕಾರಣವಾದ ಹಲಾಲ್ * ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ ಗಾಯಕ* ಹಲಾಲ್' ಖಂಡಿತವಾಗಿಯೂ ಇಸ್ಲಾಂ ಧರ್ಮದ ಹೊರಗಿನ ಯಾರಿಗೂ ಅಲ್ಲ* ಹಿಟ್ ಹಾಡುಗಳನ್ನು ನೀಡಿರುವ ಲಕ್ಕಿ ಅಲಿ ಅಭಿಪ್ರಾಯ
ಮುಂಬೈ(ಏ. 05) ಹಲಾಲ್ (Halal) ಕಟ್ ವಿಚಾರ ಇದೀಗ ರಾಷ್ಟ್ರೀಯ ಮಟ್ಟದ ಸುದ್ದಿಗೂ ಗ್ರಾಸವಾಗಿದೆ. ಹಲಾಲ್’ ಮಾಂಸವನ್ನು ಬಹಿಷ್ಕರಿಸಲು ಕೆಲವು ಬಲಪಂಥೀಯ (Hindu) ಗುಂಪುಗಳ ಕರೆ ನೀಡಿರುವ ಸಂದರ್ಭ ಖ್ಯಾತ ಗಾಯಕ ಲಕ್ಕಿ ಅಲಿ ಸೋಮವಾರ ಫೇಸ್‌ಬುಕ್‌ನಲ್ಲಿ (Social Media) ಹಲಾಲ್ ಬಗ್ಗೆ ವಿವರಣೆ ನೀಡುವ ಕೆಲಸ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ (CT Ravi) ಅವರು ಹಲಾಲನ್ನು 'ಆರ್ಥಿಕ ಜೆಹಾದ್; ಎಂದು ಕರೆದಿದ್ದರು. 'ಓ ಸನಮ್' ಮತ್ತು 'ಇಕ್ ಪಾಲ್ ಕಾ ಜೀನಾ' ನಂತಹ ಹಾಡುಗಳಿಗೆ ಹೆಸರುವಾಸಿಯಾದ ಗಾಯಕ-ಗೀತರಚನೆಕಾರ ಅಲಿ ಅವರು ಈ ಪ್ರತಿಕ್ರಿಯೆ ನೀಡಿದ್ದು, ‘ಹಲಾಲ್’ ಪರಿಕಲ್ಪನೆಯು ಇಸ್ಲಾಮಿಕ್ ನಂಬಿಕೆಯನ್ನು ಅಭ್ಯಾಸ ಮಾಡುವ ಜನರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ವಿವರವಾಗಿ ಬರೆದಿದ್ದಾರೆ. ಆತ್ಮೀಯ ಪ್ರೀತಿಯ ಭಾರತೀಯ ಸಹೋದರ ಸಹೋದರಿಯರೇ ನೀವೆಲ್ಲರೂ ಚೆನ್ನಾಗಿದ್ದೀರೆಂದು ಭಾವಿಸುತ್ತೇವೆ.. ನಾನು ನಿಮಗೆ ಈ ಬಗ್ಗೆ ವಿವರಿಸಲು ಬಯಸುತ್ತೇನೆ ಎಂದು ಹೇಳುತ್ತಾ ಸಾಗಿದ್ದಾರೆ. ಹಲಾಲ್ ಖಂಡಿತವಾಗಿಯೂ ಇಸ್ಲಾಂನ ಹೊರಗಿನ ಯಾರಿಗೂ ಅಲ್ಲ ಎಂದಿದ್ದಾರೆ
ನಾನೂ ಕೇಸರಿ ಶಾಲು ಹಾಕಿ ನಿಮ್ಮ ಜೊತೆ ಬರ್ತೀನಿ: ಕುಮಾರಸ್ವಾಮಿ
ಪ್ರೀತಿಯ ಭಾರತೀಯ ಸಹೋದರ ಸಹೋದರಿಯರೇ ನೀವೆಲ್ಲರೂ ಕ್ಷೇಮವಾಗಿದ್ದೀರಿ ಎಂದು ಭಾವಿಸುತ್ತೇವೆ..ನಾನು ನಿಮಗೆ ಏನನ್ನಾದರೂ ವಿವರಿಸಲು ಬಯಸುತ್ತೇನೆ...'ಹಲಾಲ್' ಖಂಡಿತವಾಗಿಯೂ ಇಸ್ಲಾಂ ಧರ್ಮದ ಹೊರಗಿನ ಯಾರಿಗೂ ಅಲ್ಲ.. ಯಾವುದೇ ಮುಸಲ್ಮಾನರು ಅವರಂತೆ ಯಾವುದೇ ಉತ್ಪನ್ನವನ್ನು ಖರೀದಿಸುವುದಿಲ್ಲ. ಹಲಾಲ್ ಅನ್ನು ಕೋಷರ್‌ಗೆ ಹೋಲುವಂತಿರುವ ಯಹೂದಿ ಸಂಬಂಧಿಕರು ಮತ್ತು ಉತ್ಪನ್ನದೊಳಗಿನ ಪದಾರ್ಥಗಳು ಅವನ ಅಥವಾ ಅವಳ ಬಳಕೆಯ ಮಿತಿಗಳಿಗೆ ಅನುಗುಣವಾಗಿರುತ್ತವೆ ಎಂದು ಪ್ರಮಾಣೀಕರಿಸುವವರೆಗೆ ಯಾವುದೇ ಉತ್ಪನ್ನವನ್ನು ಖರೀದಿಸುವುದಿಲ್ಲ.. ಈಗ ಕಂಪನಿಗಳು ಮುಸ್ಲಿಂ ಮತ್ತು ಯಹೂದಿ ಜನಸಂಖ್ಯೆಯನ್ನು ಒಳಗೊಂಡಂತೆ ಎಲ್ಲರಿಗೂ ಮಾರಾಟ ಮಾಡಲು ಬಯಸುತ್ತವೆ. , ಆದ್ದರಿಂದ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಅವರು ಅದನ್ನು ಹಲಾಲ್ ಪ್ರಮಾಣೀಕೃತ ಅಥವಾ ಕೋಷರ್ ಪ್ರಮಾಣೀಕೃತ ಎಂದು ಲೇಬಲ್ ಮಾಡಬೇಕು ... ಇಲ್ಲದಿದ್ದರೆ ಮುಸ್ಲಿಮರು ಮತ್ತು ಯಹೂದಿಗಳು ಅವರಿಂದ ಖರೀದಿಸುವುದಿಲ್ಲ, ಆದರೆ ಜನರು 'ಹಲಾಲ್' ಎಂಬ ಪದದಿಂದ ತುಂಬಾ ತೊಂದರೆಗೀಡಾಗಿದ್ದರೆ ಅವರು ಅದನ್ನು ತೆಗೆದುಹಾಕಬೇಕು ಎಂದು ಗಾಯಕ ಹೇಳಿದ್ದಾರೆ.
ಹಲಾಲ್ ಮಾಂಸ ಖರೀದಿ ಮಾಡಬೇಡಿ ಎಂದು ಹಿಂದು ಸಂಘಟನೆಗಳು ಒತ್ತಾಯ ಮಾಡುತ್ತಲೇ ಬಂದಿದ್ದವು. ಯುಗಾದಿ ಹಬ್ಬದ ಮರುದಿನದ ಬಾಡೂಟಕ್ಕೆ ಹಲಾಲ್ ಮಾಂಸ ಬೇಡ ಎನ್ನುವುದರ ಬಗ್ಗೆ ಬಹುದೊಡ್ಡ ಚರ್ಚೆಯಾಗಿತ್ತು.
ಹಲಾಲ್ ನಂತರ ಇದೀಗ ಅಜಾನ್ ಧ್ವನಿವರ್ಧಕದ ವಿಚಾರ ಚರ್ಚೆಯಾಗುತ್ತಿದೆ. ಧ್ವನಿವರ್ಧಕ ಬ್ಯಾನ್ ಮಾಡುವಂತೆ ಇಡೀ ರಾಜ್ಯಾದ್ಯಂತ ಅಭಿಯಾನ ನಡೆಸುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಹಲಾಲ್ ವರ್ಸಸ್ ಝಟ್ಕಾ ವಿವಾದದ ಬಗ್ಗೆ ಉಡುಪಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ್ದ ಕೆಎಸ್ ಈಶ್ವರಪ್ಪ ಯಾರು ಯಾವುದನ್ನು ಪೂಜೆ ಮಾಡುತ್ತಾರೆ ಅದನ್ನು ಮಾಡಿಕೊಳ್ಳಲಿ ಬಿಡಿ. ಅವರವರು ಅವರ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗಲಿ. ಮುಸಲ್ಮಾನರು(Muslim) ಹಲಾಲ್(Halal) ಮಾಡುವುದಾದರೆ ಮಾಡಲಿ. ಹಿಂದೂಗಳು(Hindu) ಝಟ್ಕಾ(Jhatka) ಮಾಡುವುದಾದರೆ ಮಾಡಿಕೊಂಡು ಹೋಗಲಿ ಎಂದಿದ್ದರು.
ಕಾಂಗ್ರೆಸ್ ಮಾತ್ರ ಯಾವುದೇ ನಿರ್ದಿಷ್ಟ ನಿಲುವಿಗೆ ಬಂದಿಲ್ಲ. ಬಿಜೆಪಿ ನಾಯಕರು ಹಲಾಲ್ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಮಾತ್ರ ಇಂಥ ಬೆಳವಣಿಗೆ ರಾಜ್ಯಕ್ಕೆ ಮಾರಕ ಎಂದು ಹೇಳುತ್ತಲೇ ಬಂದಿದ್ದಾರೆ.
