ಭಾರತ ಅಂದ್ರೆ ಹೀಗೆ, ಜಾಮೀಯಾ ಮಸೀದಿ ಸಾನಿಟೈಸ್ ಮಾಡಿದ ಸಿಖ್ಖರು

ವೈವಿಧ್ಯತೆಯಲ್ಲಿ ಏಕತೆ/ ಕೋಮು ಸೌಹಾರ್ದ ಸಾರಿದ ದೇಶ/ ಮಸೀದಿ ಸಾನಿಟೈಸ್ ಮಾಡಿದ ಸಿಖ್ ಸಮುದಾಯ/ ನವದೆಹಲಿಯ ಜಾಮೀಯಾ ಮಸೀದಿ ಸಾನಿಟೈಸ್

Sikhs sanitise Jama Masjid, set example for communal harmony

ನವದೆಹಲಿ(ಮೇ 25)  ವೈವಿಧ್ಯತೆಯಲ್ಲಿ ಏಕತೆಯನ್ನು ಭಾರತ ಸಾರುತ್ತಲೇ ಬಂದಿದೆ. ಮತ್ತೆ ಮತ್ತೆ  ನಮಗೆ ಇಂಥ ನಿದರ್ಶನ ಸಿಗುತ್ತಲೇ ಇರುತ್ತದೆ.

ಈದ್ ಹಬ್ಬದ ಸಂದರ್ಭದಲ್ಲಿ ಸಿಖ್ ಸಮುದಾಯದ ಜನ ಮಸೀದಿಯೊಂದನ್ನು ಸಾನಿಟೈಸ್ ಮಾಡಿದ್ದು ಹೃದಯ ಗೆದ್ದಿದ್ದಾರೆ. ದೇಶದಲ್ಲಿನ ಕೋಮು ಸೌಹಾರ್ದ ಹೇಗಿರಬೇಕು ಎಂಬುದಕ್ಕೆ ಒಂದು ನಿದರ್ಶನ ಸಿಕ್ಕಿದೆ.

ಕೊರೋನಾ ತಡೆ ಹೇಗೆ? ಬೆಂಗಳೂರು ರೋಲ್ ಮಾಡೆಲ್

ನವದೆಹಲಿಯ ಜಾಮೀಯಾ ಮಸೀದಿಯನ್ನು ಲಾಕ್ ಡೌನ್ ಕಾರಣಕ್ಕೆ ತಿಂಗಳುಗಳಿಂದ ಬಂದ್ ಮಾಡಲಾಗಿತ್ತು.  ಕೊರೋನಾ ವಿರುದ್ಧ ಹೋರಾಟ ನಿರಂತರವಾಗಿದ್ದು ಜಾಮೀಯಾ ಮಸೀದಿ ಸ್ವಚ್ಛ ಮಾಡುವಲ್ಲಿ ನಾವು ಕೈಜೋಡಿಸಿದ್ದೇವೆ ಎಂದು ಸಿಖ್ ಸಮುದಾಯದ ಮುಖಂಡರೊಬ್ಬರು ಹೇಳುತ್ತಾರೆ.

ಯುನೈಟಡ್ ಸಿಖ್ಸ್ ನಿರ್ದೇಶಕ ಪರ್ವಿಂದರ್ ಸಿಂಗ್ ಮಾತನಾಡಿ, ನಾವು ಅಗತ್ಯ ಇರುವವರಿಗೆ ಪಿಪಿಇ ಕಿಟ್ ನೀಡಿದ್ದೇವೆ. ಬಡವರ ಹಸಿವು ನೀಡಿಸಿದ್ದೇವೆ ಎಂಬ ತೃಪ್ತಿ ಇದೆ ಎಂದು ತಿಳಿಸುತ್ತಾರೆ.

1999ರಲ್ಲಿ ಆರಂಭವಾದ ಯುನೈಡೆಟ್ ಸಿಖ್ಸ್ ಸಂಸ್ಥೆ 11 ದೇಶಗಳಲ್ಲಿ ಕೆಲಸ ಮಾಡುತ್ತಿದೆ. ಮುಫ್ತಿ ಮಹಮಸ್ ತಹೀರ್ ಹುಸೇನ್, ಇಮಾಮ್ ಬುಕಾರಿ ಸಹ ಸಿಖ್ ಸಮುದಾಯದೊಂದಿಗಿನ ಸಹಾಯಕ್ಕೆ ಜತೆಯಾಗಿದ್ದಾರೆ. 

 

Latest Videos
Follow Us:
Download App:
  • android
  • ios