Asianet Suvarna News Asianet Suvarna News

ಕೆನಡಾದೊಂದಿಗೆ ಸಿಖ್ ಲಿಂಕ್: ಈ ವಿದೇಶಿ ನೆಲದಲ್ಲಿ ಸಿಖ್ಖರೇ ಬಹುಸಂಖ್ಯಾತರು!

ಕೆನಡಾದ ಪಶ್ಚಿಮ ತೀರದಲ್ಲಿರುವ ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿ ಓರ್ವ ಪ್ರಮುಖ ಸಿಖ್ ಪ್ರತ್ಯೇಕತಾವಾದಿಯ ಕೊಲೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಗಳು ಬಂದ ಹಿನ್ನೆಲೆಯಲ್ಲಿ ಕೆನಡಾದಲ್ಲಿ ಸಿಕ್ ಸಮುದಾಯಕ್ಕಿರುವ ಮಹತ್ವದ ಬಗ್ಗೆ ಚರ್ಚೆಯಾಗುತ್ತಿದೆ. 

Sikhs are not minoroites in canada as in India that is how foreign country respect community
Author
First Published Sep 21, 2023, 10:55 AM IST

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಐತಿಹಾಸಿಕವಾಗಿ ಸಿಖ್ ಧರ್ಮದ ತವರು ನೆಲ ಪಂಜಾಬ್ ರಾಜ್ಯ ಇಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹಂಚಿ ಹೋಗಿದೆ. ಈ ಭೂಮಿ ಹಲವು ವರ್ಷಗಳ ಕಾಲ ಹಿಂಸಾಚಾರ, ರಾಜಕೀಯ ಪ್ರಕ್ಷುಬ್ಧತೆ, ಹಾಗೂ ಗಡಿಗಳಾಚೆ ಜನರ ಸ್ಥಳಾಂತರವನ್ನು ಅನುಭವಿಸಿದೆ. ಈ ಎಲ್ಲ ಘಟನೆಗಳೂ ಈಗ ಪಂಜಾಬಿನಿಂದ ಸಾವಿರಾರು ಮೈಲಿ ದೂರದಲ್ಲಿರುವ ದೇಶವಾದ ಕೆನಡಾದೊಡನೆ ಹೆಣೆದುಕೊಂಡಿದೆ.

ಪಂಜಾಬಿನಲ್ಲಿ ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಖಲಿಸ್ತಾನ ಚಳುವಳಿ ಮತ್ತು ಅದರಲ್ಲಿ ಕೆನಡಾದ ಸ್ಥಾನ ಈ ಒಂದು ವಾರದ ಅವಧಿಯಲ್ಲಿ ಸಾಕಷ್ಟು ಮುನ್ನಲೆಗೆ ಬಂದಿದೆ. ಕೆನಡಾದ ಪಶ್ಚಿಮ ತೀರದಲ್ಲಿರುವ ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿ ಓರ್ವ ಪ್ರಮುಖ ಸಿಖ್ ಪ್ರತ್ಯೇಕತಾವಾದಿಯ ಕೊಲೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಗಳು ಬಂದ ಹಿನ್ನೆಲೆಯಲ್ಲಿ ಈ ವಿಚಾರಗಳು ಬೆಳಕಿಗೆ ಬಂದಿವೆ.

ಸೋಮವಾರ ಕೆನಡಾದ ಸಂಸತ್ತಿನಲ್ಲಿ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ, 'ನಂಬಲರ್ಹ ಮೂಲಗಳ' ಪ್ರಕಾರ, ಜೂನ್‌ನಲ್ಲಿ ಸಂಭವಿಸಿದ ಖಲಿಸ್ತಾನ್ ಚಳುವಳಿಯ ಬೆಂಬಲಿಗ, ಸಿಖ್ ಸಮುದಾಯದಲ್ಲಿ ಪ್ರಸಿದ್ಧರಾದ ಹರ್‌ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಭಾರತೀಯ ಏಜೆಂಟ್ಸ್ ಪಾತ್ರವಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಭಾರತ ಇಂತಹ ಆರೋಪಗಳನ್ನು ಅಲ್ಲಗಳೆದಿದೆ. ಇಂಥ ಆರೋಪಗಳು ವಿವಾದಗಳಿಗೆ ಇನ್ನಷ್ಟು ಎಡೆ ಮಾಡಿಕೊಡುತ್ತದೆ, ಎಂದಿದೆ.

ಕೆಣಕಿದವರ ಸುಮ್ಮನೆ ಬಿಡಲ್ಲ, 5 ದಿನದಲ್ಲಿ ದೇಶ ಬಿಟ್ಟು ಹೋಗಿ: ಕೆನಡಾ ಏಟಿಗೆ ಭಾರತದ ಎದಿರೇಟು

1900ರ ಅವಧಿಯಲ್ಲಿ, ಸಿಖ್ಖರ ಮೊದಲ ಪ್ರಮುಖ ಅಲೆ ಕೆನಡಾಗೆ ತೆರಳಿತು. ಅವರಲ್ಲಿ ಬಹುತೇಕರು ಗಂಡಸರಾಗಿದ್ದು, ಬ್ರಿಟಿಷ್ ಒಂಟಾರಿಯೋ ಉತ್ಪಾದನಾ ಘಟಕದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಹೋಗಿದ್ದರು, ಎಂದು ಯುನಿವರ್ಸಿಟಿ ಆಫ್ ಕ್ಯಾಲ್ಗರಿಯ ಕ್ಲಾಸಿಕ್ಸ್ ಮತ್ತು ರಿಲಿಜಿಯನ್ ವಿಭಾಗದ ಉಪನ್ಯಾಸಕರಾದ ಹರ್‌ಜೀತ್ ಸಿಂಗ್ ಗ್ರೆವಾಲ್ ಹೇಳಿದ್ದಾರೆ.

ಸರ್ದಾರ್ ಹರ್‌ಜೀತ್ ಸಿಂಗ್ ಗ್ರೆವಾಲ್ ಅವರ ಪ್ರಕಾರ, ಬ್ರಿಟಿಷ್ ಆಡಳಿತ ಕೊನೆಗೊಂಡು, 1947ರಲ್ಲಿ ಸ್ವಾತಂತ್ರ್ಯ ಬಂದು, ಭಾರತ ಮತ್ತು ಪಾಕಿಸ್ತಾನಗಳ ವಿಭಜನೆಯಾದಾಗ ನಡೆದ ಹಿಂಸಾಚಾರಗಳು ಸಿಖ್ಖರ ತಾಯ್ನೆಲವನ್ನು ಬಿಟ್ಟು ತೆರಳುವಂತೆ ಮಾಡಿತು.

ಸಿಖ್ಖರು ಬ್ರಿಟನ್, ಆಸ್ಟ್ರೇಲಿಯಾ ಹಾಗೂ ಅಮೆರಿಕಕ್ಕೆ ವಲಸೆ ಹೋಗಿದ್ದರೂ, ಅವರೊಡನೆ ಸಮಾನ ಮೌಲ್ಯಗಳು ಮತ್ತು ನೀತಿಗಳನ್ನು ಕೆನಡಾ ಹೊಂದಿದ್ದರಿಂದ ಅವರಿಗೆ ಕೆನಡಾ ಹೆಚ್ಚು ಆಕರ್ಷಕವಾಗಿ ತೋರಿತ್ತು, ಎನ್ನುತ್ತಾರೆ. 

ಸಿಖ್ಖರಿಗೆ ಕೆನಡಾ ಅಳವಡಿಸಿಕೊಂಡಿರುವ ಹಲವು ಮೌಲ್ಯಗಳು ಅತ್ಯಂತ ನಿಕಟ ಎನಿಸುತ್ತವೆ. ಈ ಕಾರಣದಿಂದಲೇ ಸಿಖ್ಖರು ಬ್ರಿಟನ್‌ನಿಂದಲೂ ಕೆನಡಾಗೆ ವಲಸೆ ಹೋಗಿದ್ದರು ಎಂದು ಗ್ರೆವಾಲ್ ವಿವರಿಸುತ್ತಾರೆ. ಸಿಖ್ಖರನ್ನು ಕೆನಡಾಗೆ ಆಕರ್ಷಿಸುವ ಪ್ರಮುಖ ಮೌಲ್ಯಗಳಲ್ಲಿ ಮಾನವೀಯತೆ ಮತ್ತು ಸಮಾನತೆ ಪ್ರಮುಖವಾದವು ಎನ್ನುತ್ತಾರೆ ಗ್ರೆವಾಲ್.

ಖಲಿಸ್ತಾನಿ ಉಗ್ರರ ಬೆಂಬಲಿಸಿ ವಿವಾದಾತ್ಮಕ ಭೂಪಟ ಹಂಚಿದ ಗಾಯಕನ ಅನ್‌ಫಾಲೋ ಮಾಡಿದ ಕೊಹ್ಲಿ!

ಕೆನಡಾ ಪ್ರಸ್ತುತ ಭಾರತದ ಹೊರಗಡೆ ಅತಿ ಹೆಚ್ಚು ಸಿಖ್ ಜನಸಂಖ್ಯೆ ಇರುವ ದೇಶ. 2021ರ ಜನಸಂಖ್ಯೆ ಪ್ರಕಾರ ಕೆನಡಾದಲ್ಲಿ ಬಹುತೇಕ 7,70,000 ಜನರು ಸಿಖ್ ಧರ್ಮವನ್ನು ಅನುಸರಿಸುವುದಾಗಿ ಹೇಳಿದ್ದಾರೆ. ಆದರೆ, ಭಾರತದಲ್ಲಿ ಪಂಜಾಬ್ ರಾಜ್ಯ ಒಂದರಲ್ಲಿರುವ 2.2 ಕೋಟಿ ಸಿಖ್ ಜನಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆ ಅತ್ಯಂತ ಸಣ್ಣದೆನಿಸುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕೆನಡಾದ ಒಟ್ಟಾರೆ ಜನಸಂಖ್ಯೆಯೇ ಕಡಿಮೆ ಇದ್ದು, ಸಿಖ್ಖರು ಕೆನಡಾದ ಜನಸಂಖ್ಯೆಯಲ್ಲಿ 2.1% ಪಾಲು ಹೊಂದಿದ್ದರೆ, ಭಾರತದಲ್ಲಿ ಅವರ ಜನಸಂಖ್ಯೆ ಕೇವಲ 1.7% ಆಗಿದೆ.

ಬ್ರಿಟಿಷ್ ಕೊಲಂಬಿಯಾದ ಯುನಿವರ್ಸಿಟಿ ಆಫ್ ವಿಕ್ಟೋರಿಯಾದ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಕೆನಡಾ ರಿಸರ್ಚ್ ಅಧ್ಯಕ್ಷರಾಗಿರುವ ನೀಲೇಶ್ ಬೋಸ್ ಅವರ ಪ್ರಕಾರ, ಸಿಖ್ಖರು ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿದ್ದರೂ, ಕೆನಡಾದಲ್ಲಿ ಭಾರತೀಯ ಮೂಲದ ಬಹುಸಂಖ್ಯಾತ ಸಮುದಾಯವಾಗಿದ್ದಾರೆ. ಈ ಕಾರಣದಿಂದ, ಸಿಖ್ಖರು ದಕ್ಷಿಣ ಏಷ್ಯಾದ ಕುರಿತು ಕೆನಡಾದ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಾರೆ.

1985ರಲ್ಲಿ ಬ್ರಿಟನ್ ಮೂಲಕ ಕೆನಡಾದಿಂದ ಭಾರತಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಸ್ಫೋಟದ ದುರ್ಘಟನೆ ಸಂಭವಿಸಿದಾಗ, ಕೆನಡಾದ ನಂಬಿಕೆಗಳು ಆಘಾತಕ್ಕೀಡಾಗಿದ್ದವು. ಈ ದುರ್ಘಟನೆ ಐರ್ಲೆಂಡ್ ತೀರದಲ್ಲಿ ಸಂಭವಿಸಿ, ವಿಮಾನದಲ್ಲಿದ್ದ 329 ಪ್ರಯಾಣಿಕರು ಅಸುನೀಗಿದ್ದರು. ಈ ಬಾಂಬ್ ಪ್ರಕರಣದಲ್ಲಿ ಓರ್ವ ಸಿಖ್ ಮೂಲಭೂತವಾದಿ ಅಪರಾಧಿ ಎಂದು ಸಾಬೀತಾಯಿತು. 

ಈ ಘಟನೆಯ ಬಳಿಕ, ಸಿಖ್ ರಾಜಕಾರಣಿಗಳನ್ನೂ ಸೇರಿ ಸಿಖ್ಖರಿಗೆ ಸಂಬಂಧಿಸಿದ ಸಾರ್ವಜನಿಕ ಭಾಷಣಗಳಲ್ಲಿ ಭಯೋತ್ಪಾದಕ ಸಂಘಟನೆ ಅಥವಾ ಖಲಿಸ್ತಾನ್ ಚಳುವಳಿಯೊಡನೆ ಅವರ ಸಂಬಂಧವೇನು ಎಂಬ ಪ್ರಶ್ನೆಗಳು ಮೂಡಿ ಬರುತ್ತಿದ್ದವು. ಇದು ಹಿಂದೆ ಕೆನಡಾ ಸಿಖ್ಖರನ್ನು ಗ್ರಹಿಸಿದ, ಅರ್ಥ ಮಾಡಿಕೊಂಡಿದ್ದ ರೀತಿಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು ಎಂದು ಬೋಸ್ ವಿವರಿಸುತ್ತಾರೆ.

ಇನ್ನೊಂದು ಮಹತ್ವದ ವಿಚಾರವೆಂದರೆ, ಎಲ್ಲ ಸಿಖ್ಖರೂ ಪ್ರತ್ಯೇಕತಾವಾದಿ ಚಳುವಳಿಯನ್ನು ಬೆಂಬಲಿಸುವುದಿಲ್ಲ ಮತ್ತು ಖಲಿಸ್ತಾನ್ ಚಳುವಳಿಯನ್ನು ಬೆಂಬಲಿಸುವ ಎಲ್ಲರೂ ಉಗ್ರವಾದವನ್ನು ಹಿಂಬಾಲಿಸುವುದಿಲ್ಲ ಎನ್ನುತ್ತಾರೆ ಬೋಸ್.

ಭಾರತದ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಗೈರಾಗಿದ್ದೇಕೆ? ಸಚಿವ ಜೈಶಂಕರ್ ಜೊತೆ ವಿಶೇಷ ಸಂದರ್ಶನ!

ಏರ್ ಇಂಡಿಯಾ ವಿಮಾನದ ಬಾಂಬ್ ದಾಳಿ ಪ್ರಕರಣವನ್ನು ಸೆಪ್ಟೆಂಬರ್ 11, 2001ರ ಅಮೆರಿಕ ಮೇಲಿನ ಭಯೋತ್ಪಾದನಾ ದಾಳಿಗೆ ಹೋಲಿಸಲಾಗುತ್ತದಾದರೂ, ಏರ್ ಇಂಡಿಯಾ ಬಾಂಬ್ ಸ್ಫೋಟದ ಬಳಿಕ ಕೆನಡಾ ಜನತೆ ಸಿಖ್ ಸಮುದಾಯದ ಮೇಲೆ ಅಮೆರಿಕ ಮುಸ್ಲಿಂ ಸಮುದಾಯದ ಮೇಲೆ ತೋರಿಸುವ ತಾರತಮ್ಯವನ್ನು ತೋರಿಸಲಿಲ್ಲ ಎನ್ನುತ್ತಾರೆ ಬೋಸ್.

ಇಂದಿನ ಕೆನಡಾದಲ್ಲಿ, ಸಿಖ್ಖರು ಸಮಾಜ ಮತ್ತು ರಾಜಕೀಯ ಎರಡರಲ್ಲೂ ಪ್ರಮುಖ ಸ್ಥಾನಗಳನ್ನು ಸಂಪಾದಿಸಿದ್ದಾರೆ. ಕೆನಡಾದ ನ್ಯೂ ಡೆಮಾಕ್ರಟಿಕ್ ಪಾರ್ಟಿಯ ಮುಖಂಡ ಜಗ್‌ಮೀತ್ ಸಿಂಗ್ ಸಹ ಸಿಖ್ ಸಮುದಾಯದವರಾಗಿದ್ದಾರೆ. ಅವರು ಭಾರತದಲ್ಲಿ ಸಿಖ್ಖರನ್ನು ನಡೆಸಿಕೊಳ್ಳುವ ಕುರಿತು ಧ್ವನಿ ಎತ್ತಿದ್ದಾರೆ. ಅವರ ಸಾರ್ವಜನಿಕ ಹೇಳಿಕೆಗಳ ಕಾರಣದಿಂದಲೇ ಭಾರತ 2013ರಲ್ಲಿ ವೀಸಾ ನೀಡಲು ನಿರಾಕರಿಸಿತ್ತು.

2015ರಲ್ಲಿ ಜಸ್ಟಿನ್ ಟ್ರೂಡೊ ತನ್ನ ಸಚಿವ ಸಂಪುಟಕ್ಕೆ ನಾಲ್ವರು ಸಿಖ್ ಸಚಿವರನ್ನು ನೇಮಿಸಿಕೊಂಡು ಐತಿಹಾಸಿಕ ಸಾಧನೆ ನಿರ್ಮಿಸಿದರು. ಆ ಸಂದರ್ಭದಲ್ಲಿ ಭಾರತದ ಕೇಂದ್ರ ಸಚಿವ ಸಂಪುಟದಲ್ಲಿ ಕೇವಲ ಇಬ್ಬರು ಸಿಖ್ ಸಚಿವರಿದ್ದರು. ಈ ವಿಚಾರದ ಕುರಿತಾಗಿ ಟ್ರೂಡೋಗೆ ಹೆಮ್ಮೆ ಇತ್ತು, ಎನ್ನಲಾಗಿದೆ. 

ಜಸ್ಟಿನ್ ಟ್ರುಡೋಗೆ ಭಾರತದಲ್ಲಿ ಅವಮಾನ, ಕೆನಡಾದಲ್ಲಿ ವಿಪಕ್ಷಗಳ ಹೋರಾಟ

 

Follow Us:
Download App:
  • android
  • ios