Asianet Suvarna News Asianet Suvarna News

ಬೇರೆ ಬೇರೆ ಲಸಿಕೆಯಿಂದ ಅಡ್ಡ ಪರಿಣಾಮ ಜಾಸ್ತಿ: ಅಧ್ಯಯನ

  • ಬೇರೆ ಬೇರೆ ಕಂಪನಿಯ ಲಸಿಕೆ ನೀಡುವ ಬಗ್ಗೆ ಚರ್ಚೆ
  • ಬೇರೆ ಬೇರೆ ಲಸಿಕೆ ಪಡೆದವರಲ್ಲಿ ಅಡ್ಡ ಪರಿಣಾಮ
  • ಆಯಾಸ, ತಲೆನೋವು, ಜ್ವರ ಮತ್ತಿತರ ಅಡ್ಡ ಪರಿಣಾಮ
Side Effects on health if u change second dose covid Vaccine snr
Author
Bengaluru, First Published May 14, 2021, 8:43 AM IST

ನವದೆಹಲಿ (ಮೇ.14): ವಿಶ್ವದ ಬಹುತೇಕ ದೇಶಗಳಲ್ಲಿ ಲಸಿಕೆ ಕೊರತೆಯ ಪರಿಣಾಮ, ಒಬ್ಬರಿಗೆ ಎರಡು ಬೇರೆ ಬೇರೆ ಕಂಪನಿಯ ಲಸಿಕೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ, ಇಂಥ ಪ್ರಯತ್ನಗಳು, ಲಸಿಕೆ ಪಡೆದವರಲ್ಲಿ ಅಡ್ಡ ಪರಿಣಾಮಗಳಿಗೆ ಕಾರಣವಾಗಲಿದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.

ಅಸ್ಟ್ರಾಜೆನೆಕಾ ಲಸಿಕೆ 1 ಶಾಟ್‌ನಿಂದ 80% ಕಮ್ಮಿಯಾಗುತ್ತದೆ ಕೊರೋನಾ ಸಾವಿನ ರಿಸ್ಕ್ ...

ಮೊದಲು ಡೋಸ್‌ನಲ್ಲಿ ಪಡೆದ ಲಸಿಕೆ ಸಿಗಲಿಲ್ಲ ಎಂಬ ಕಾರಣಕ್ಕೆ 2ನೇ ಡೋಸ್‌ ವೇಳೆ ಇನ್ನೊಂದು ಕಂಪನಿಯ ಲಸಿಕೆಯನ್ನು ಪಡೆಯುವುದರಿಂದ ಆಯಾಸ, ತಲೆನೋವು, ಜ್ವರ ಮತ್ತಿತರ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಲಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ಲಸಿಕೆ ಕೊರತೆ : ಸೆಕೆಂಡ್ ಡೋಸ್ ಪಡೆಯುವವರಿಗೆ ಆದ್ಯತೆ

ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಆಸ್ಟ್ರಾಜೆನೆಕಾದ ಮೊದಲ ಡೋಸ್‌ ಪಡೆದು ನಾಲ್ಕು ವಾರಗಳ ಬಳಿಕ ಫೈಝರ್‌ ಲಸಿಕೆಯನ್ನು ಪಡೆದುಕೊಂಡವರಲ್ಲಿ ಅಲ್ಪ ಅವಧಿಗೆ ಸೌಮ್ಯ ಅಡ್ಡಪರಿಣಾಮಗಳು ಕಂಡುಬಂದಿರುವುದು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಆದರೆ, ಇದರಿಂದ ಪ್ರತಿಕಾಯ ವೃದ್ಧಿ ಆಗಲಿದೆಯೇ ಎಂಬ ಕುರಿತಾಗಿ ಇನ್ನಷ್ಟುಅಧ್ಯಯನ ನಡೆಸುವ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಫ್ರಾನ್ಸ್‌ನಲ್ಲಿ ಮೊದಲು ಆಸ್ಟ್ರಾಜೆನೆಕಾ ಲಸಿಕೆಯನ್ನು ವೃದ್ಧರಿಗೆ ಮಾತ್ರ ಸೀಮಿತಗೊಳಿಸುವ ಮುನ್ನ ಹಲವು ಮಂದಿ ಮೊದಲ ಡೋಸ್‌ ಪಡೆದುಕೊಂಡಿದ್ದರು. ಆ ಬಳಿಕ ಸರ್ಕಾರ ಫೈಝರ್‌ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಹೀಗಾಗಿ ಹಲವು ಮಂದಿ ಎರಡು ಲಸಿಕೆಗಳನ್ನು ಪಡೆದುಕೊಂಡಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios