ಪ್ರವಾಸಿಗರೇ ಗಮನಿಸಿ! ಸಿಯಾಚಿನ್ ಯುದ್ಧಭೂಮಿ ಭೇಟಿಗೆ ಮುಕ್ತ
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಪ್ರದೇಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು | ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸಿಯಾಚಿನ್‌ನ ಬೇಸ್ ಕ್ಯಾಂಪ್‌ನಿಂದ ಕುಮಾರ್ ಪೋಸ್ಟ್‌ವರೆಗಿನ ಇಡೀ ಪ್ರದೇಶ ಪ್ರವಾಸಿಗರ ವೀಕ್ಷಣೆಗೆ ಮುಕ್ತ
ಲೇಹ್ (ಅ. 22): ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಪ್ರದೇಶವನ್ನು ಪ್ರವಾಸಿಗರ ವೀಕ್ಷಣೆಗೆ ಕೇಂದ್ರ ಸರ್ಕಾರ ಸೋಮವಾರದಿಂದ ಮುಕ್ತಗೊಳಿಸಿದೆ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸಿಯಾಚಿನ್‌ನ ಬೇಸ್ ಕ್ಯಾಂಪ್‌ನಿಂದ ಕುಮಾರ್ ಪೋಸ್ಟ್‌ವರೆಗಿನ ಇಡೀ ಪ್ರದೇಶವನ್ನು ಪ್ರವಾಸಿಗರ ವೀಕ್ಷಣೆಗೆ ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.
ಉಗ್ರರ ನೆಲೆ ಮೇಲೆ ದಾಳಿಯಾಗಿದೆ ಎಂದು ಬಂದು ತೋರ್ಸಿ ನೋಡೋಣ; ಪಾಕ್ ಸವಾಲ್
ಚೀನಾದಿಂದ 45 ಕಿ.ಮೀ. ದೂರದಲ್ಲಿರುವ ಪಶ್ಚಿಮ ಲಡಾಖ್‌ನಲ್ಲಿನ ಶೋಕ್ ನದಿಗೆ ಅಡ್ಡಲಾಗಿ ಕಟ್ಟಿರುವ ಕಲ್ ಚೆವಾಂಗ್ ರಿಂಚಿನ್ ಸೇತುವೆ ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ಲಡಾಖ್ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿನ ಪ್ರವಾಸೋದ್ಯಮ ಬೆಳವಣಿಗೆಗೆ ಸೈನಿಕರ ಮೂಲ ನೆಲೆಯಿಂದ ಅತಿ ಎತ್ತರದ ಕುಮಾರ್ ಪೋಸ್ಟ್‌ವರೆಗೂ ಪ್ರವಾಸಿಗರು ಇನ್ನು ಭೇಟಿ ನೀಡಬಹುದು. ಅಲ್ಲದೇ, ಸಿಯಾಚಿನ್‌ನಲ್ಲಿ ಕೊರೆಯುವ ಚಳಿಯಲ್ಲಿ ಸೈನಿಕರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬ ಬಗ್ಗೆಯೂ ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಬಹುದು. ಈ ಮೂಲಕ ಇಲ್ಲಿನ ಪ್ರವಾಸೋದ್ಯಮವೂ ಉತ್ತೇಜನ ಪಡೆಯಲಿದೆ ಎಂದು ತಿಳಿಸಿದ್ದಾರೆ.
ಜಗತ್ತಿನ ಎತ್ತರದ ಯುದ್ದಬೂಮಿ ಯೀಧರ ಬದುಕು ಹೇಗಿರುತ್ತದೆ ಗೊತ್ತಾ?
ಕುಮಾರ ಪೋಸ್ಟ್ ಬೇಸ್ ಕ್ಯಾಂಪ್‌ನಿಂದ 18875 ಕಿ.ಮೀ. ಎತ್ತರದಲ್ಲಿದೆ. ಪ್ರವಾಸಿಗರು ಇಲ್ಲಿಂದ 11000 ಕಿ.ಮೀ. ಮಾತ್ರ ಪ್ರಯಾಣಿಸಲು ಸಾಧ್ಯ.