Asianet Suvarna News Asianet Suvarna News

ಯುಪಿಗೆ ಹೊರಟಿದ್ದ ಶ್ರಮಿಕ್‌ ರೈಲು ತಲುಪಿದ್ದು ಒಡಿಶಾಗೆ: ವಲಸೆ ಕಾರ್ಮಿಕರು ಕಂಗಾಲು!

ಮುಂಬೈನಿಂದ ಉತ್ತರಪ್ರದೇಶದ ಗೋರಖ್‌ಪುರಕ್ಕೆ ಹೊರಟಿದ್ದ ಶ್ರಮಿಕ್‌ ಎಕ್ಸ್‌ಪ್ರೆಸ್‌| ಮೇ 21ರಂದು ಈ ರೈಲು ಗೋರಖ್‌ಪುರಕ್ಕೆ ಹೊರಟಿತ್ತು| ಮೇ 23ರ ಶನಿವಾರ ಬೆಳಗ್ಗೆ ರೈಲು ಒಡಿಶಾದ ರೂರ್ಕೆಲಾಕ್ಕೆ ಬಂದು ನಿಂತಿದೆ

Shramik Train leaves for UP in Odisha Railways says it is a move to ease traffic
Author
Bangalore, First Published May 24, 2020, 12:05 PM IST
  • Facebook
  • Twitter
  • Whatsapp

ನವದೆಹಲಿ(ಮೇ.24): ಮುಂಬೈನಿಂದ ಉತ್ತರಪ್ರದೇಶದ ಗೋರಖ್‌ಪುರಕ್ಕೆ ಹೊರಟಿದ್ದ ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲು, ಒಡಿಶಾದ ರೂರ್ಕೆಲಾಕ್ಕೆ ತಲುಪಿದ ಘಟನೆ ನಡೆದಿದೆ.

ಮೇ 21ರಂದು ಈ ರೈಲು ಗೋರಖ್‌ಪುರಕ್ಕೆ ಹೊರಟಿತ್ತು. ಮೇ 23ರ ಶನಿವಾರ ಬೆಳಗ್ಗೆ ರೈಲು ಒಡಿಶಾದ ರೂರ್ಕೆಲಾಕ್ಕೆ ಬಂದು ನಿಂತಿದ್ದನ್ನು ನೋಡಿ ವಲಸೆ ಕಾರ್ಮಿಕರು ಆಘಾತಗೊಂಡಿದ್ದಾರೆ. ಇದರಿಂದ ಆಕ್ರೋಶ ಮತ್ತು ಕಂಗಾಲಾಗಿರುವ ಕಾರ್ಮಿಕರು ತಮ್ಮನ್ನು ತವರು ರಾಜ್ಯಕ್ಕೆ ಕಳಿಸುವಂತೆ ಪಟ್ಟು ಹಿಡಿದಿದ್ದಾರೆ.

ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲಲ್ಲಿ 20 ದಿನಗಳಲ್ಲಿ 21 ಶಿಶುಗಳ ಜನನ!

ರೈಲು ಚಾಲಕನ ಯಡವಟ್ಟಿನಿಂದಾಗಿ ರೈಲು ದಾರಿ ತಪ್ಪಿದೆ ಎನ್ನಲಾಗಿತ್ತಾದರೂ, ಅದನ್ನು ರೈಲ್ವೆ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ರೈಲ್ವೆ ಮಾರ್ಗದಲ್ಲಿನ ಸಂಚಾರ ದಟ್ಟಣೆ ತಡೆಯಲು ಕೆಲ ಮಾರ್ಗಗಳನ್ನು ಬದಲಾಯಿಸಲಾಗಿದೆ. ಅಂತೆಯೇ ಈ ರೈಲಿನ ಸಂಚಾರ ಮಾರ್ಗವನ್ನೂ ಬದಲಾಯಿಸಲಾಗಿತ್ತು ಎಂದಿದ್ದಾರೆ.

Follow Us:
Download App:
  • android
  • ios