ದೆಹಲಿ(ಮೇ.12): ಕೊರೋನಾದಿಂದ ರಕ್ಷಣೆ ಪಡೆಯೋಕೆ ಸೆಗಣಿಯಲ್ಲಿ ಮಿಂದೆದ್ದು, ಗೋಮೂತ್ರ ಕುಡಿಯೋ ಘಟನೆಗಳು ಭಾರತದ ಹಲವು ಕಡೆ ನಡೆಯುತ್ತಿದೆ. ಇತ್ತೀಚೆಗೆ ಬಿಜೆಪಿ ಶಾಸಕರೊಬ್ಬರು ತಾವು ಗೋಮೂತ್ರ ಕುಡಿಯುತ್ತಿರುವುದಾಗಿ ಹೇಳಿದ್ದಾರೆ.

ಇದರ ಬಗ್ಗೆ ಈಗಾಗಲೇ ವೈದ್ಯರು ಬಹಳಷ್ಟು ಸಲ ಎಚ್ಚರಿಕೆ ನೀಡುತ್ತಿದ್ದರೂ ಜನ ಮಾತ್ರ ಕೇಳುತ್ತಿಲ್ಲ. ಸೆಗಣಿಯಿಂದ ಕೊರೋನಾ ಬರಲ್ಲ ಎಂದು ನಂಬಿರುವ ಬಹಳಷ್ಟು ಜನರು ಅದನ್ನೇ ಅನುಸರಿಸುತ್ತಿದ್ದಾರೆ.

ಕೊರೋನಾ ಹೋಗ್ಲಿ ಅಂತ ಸೆಗಣಿ ಹಚ್ಚೋರಿಗೆ ವೈದ್ಯರ ಮಹತ್ವದ ಎಚ್ಚರಿಕೆ

ಇದೀಗ ಈ ಘಟನೆ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಪ್ರತಿಕ್ರಿಯಿಸಿ, ಇದನ್ನು ನೋಡಿ ಅಳಬೇಕೋ, ನಗಬೇಕೋ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಗುಜರಾತ್‌ನ ಅಹಮದಾಬಾದ್‌ನ ವೀಡಿಯೊವೊಂದನ್ನು ಕಾಮೆಂಟ್ ಮಾಡಿ, ಪುರುಷರು ಸೆಗಣಿ ಮತ್ತು ಮೂತ್ರದಲ್ಲಿ ಸಂತೋಷದಿಂದ ಮೀಯಿಸಿಕೊಳ್ಳುತ್ತಿರುವ ವೀಡಿಯೊಗೆ ದಿಗ್ಭ್ರಮೆಗೊಂಡು ನಾವು ಅಳಬೇಕೇ ಅಥವಾ ನಗಬೇಕೇ ಎಂದು ಟ್ವೀಟ್ ಮಾಡಿದ್ದಾರೆ.

ಶ್ರೀ ಸ್ವಾಮಿನಾರಾಯಣ ಗುರುಕುಲ್ ವಿಶ್ವವಿದ್ಯಾ ಪ್ರತಿಷ್ಠಾನಂ ಎಂಬ ಶಾಲೆಯನ್ನು ಗುರುತಿಸಿದ ಸುದ್ದಿ ಸಂಸ್ಥೆ ರಾಯಿಟರ್ಸ್ ನೀಡಿದ ವರದಿಯ ವಿಡಿಯೋ ಅವರ ಟ್ವೀಟ್‌ಗೆ ಎಟಾಚ್ ಮಾಡಲಾಗಿದೆ. ಅಲ್ಲಿ ಕೆಲವರು ವಾರಕ್ಕೊಮ್ಮೆ ಗೋವಿನ ಸಗಣಿ ಮತ್ತು ಮೂತ್ರವನ್ನು ತಮ್ಮ ದೇಹದ ಮೇಲೆ ಹಾಕಿ ಹಸುಗಳನ್ನು ತಬ್ಬಿಕೊಂಡು ಯೋಗಾಭ್ಯಾಸ ಮಾಡುತ್ತಾರೆ.