ಶಿವಕುಮಾರ ಸ್ವಾಮೀಜಿ ಮೂರ್ತಿ ವಿರೂಪಗೊಳಿಸಿದ ಏಸು ಆರಾಧಕ ಮಾನಸಿಕ ಅಸ್ವಸ್ಥನೇ? ಇಲ್ಲಿದೆ ಪೊಲೀಸ್ ಉತ್ತರ!
ಬೆಂಗಳೂರಿನ ಗಿರಿನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿಯವರ ಮೂರ್ತಿಯನ್ನು ವಿರೂಪಗೊಳಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮಾನಸಿಕ ಅಸ್ವಸ್ಥನೆಂದು ಹೇಳಿಕೊಂಡಿರುವ ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಬೆಂಗಳೂರು (ಡಿ.05): ಸಿಲಿಕಾನ್ ಸಿಟಿ ಬೆಂಗಳೂರಿನ ಗಿರಿನಗರದಲ್ಲಿ ಕಳೆದ ಶನಿವಾರ ಡಾ.ಶಿವಕುಮಾರ ಸ್ವಾಮೀಜಿಯ ಮೂರ್ತಿಯನ್ನು ಕಿಡಿಗೇಡಿಯೊಬ್ಬ ವಿರೂಪಗೊಳಿಸಿದ ಘಟನೆ ನಡೆದಿತ್ತು. ಈ ಬಗ್ಗೆ ಸಿಸಿಟಿವಿ ಫೂಟೇಜ್ ಸಂಗ್ರಹಣೆ ಮಾಡಿದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಅವರು ಘಟನೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ. ಇನ್ನು ಕಿಡಿಗೇಡಿ ಮಾನಸಿಕ ಅಸ್ವಸ್ಥನೆಂದು ಹೇಳಿಕೊಂಡಿದ್ದು, ಈ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಡಾ. ಶಿವಕುಮಾರ ಸ್ವಾಮೀಜಿ ಮೂರ್ತಿ ವಿರೂಪಗೊಳಿಸಿದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಅವರು, ನ.30ರಂದು ಗಿರಿನಗರ ಠಾಣಾ ವ್ಯಾಪ್ತಿಯ ವೀರಭದ್ರ ನಗರದಲ್ಲಿ ಘಟನೆ ಆಗಿತ್ತು. ಇನ್ನು ರಾಜ್ ಶಿವು ಎಂಬಾತ ಉದ್ದವಾದ ಕೋಲಿನಿಂದ ಮಧ್ಯರಾತ್ರಿ ಶಿವಕುಮಾರ್ ಸ್ವಾಮೀಜಿಯವರ ಮೂರ್ತಿಯನ್ನ ಜಖಂ ಮಾಡಿದ್ದಾನೆ. ಹಣೆಯ ಭಾಗಕ್ಕೆ ಕೋಲಿನಿಂದ ಹೊಡೆದು ಮೂರ್ತಿಭಂಜನೆ ಮಾಡಿದ್ದು. ಈ ಪ್ರಕರಣದ ಸಂಬಂಧ ಆಂಧ್ರ ಪ್ರದೇಶ ಮೂಲದ ಆರೋಪಿಯನ್ನ ಬಂಧಿಸಲಾಗಿದೆ. ಈತನನ್ನು ವಿಚಾರಣೆ ಮಾಡಿದಾಗ ನಾನು ಮಾನಸಿಕವಾಗಿ ಸರಿ ಇರಲಿಲ್ಲ ಅಂತಾ ಹೇಳಿಕೊಂಡಿದ್ದಾನೆ. ಹೀಗಾಗಿ, ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ವೈದ್ಯಕೀಯ ವರದಿಗಾಗಿ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಘಟನೆಯ ಹಿನ್ನೆಲೆಯೇನು?
ಬೆಂಗಳೂರಿನ ಗಿರಿನಗರದ ಬಳಿಯ ವೀರಭದ್ರನಗರ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿದ್ದ ಡಾ. ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿಯನ್ನು ಕಳೆದ ಶಿವಾರ ರಾಜ್ ಶಿವು ಎಂಬಾತ ಒಡೆದು ಹಾನಿಗೊಳಿಸಿ, ಮೂರ್ತಿ ವಿರೂಪಗೊಳಿಸಿದ್ದನು. ಈತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ವಿಚಿತ್ರವಾಗಿ ವರ್ತಿಸುತ್ತಾನೆ ಎಂದು ಹೇಳಲಾಗುತ್ತಿತ್ತು. ಈತ ಜೀಸಸ್ ಆರಾಧನೆ ಮಾಡ್ತಿರೋ ಆರೋಪಿಗೆ ಹಿಂದೂ ದೇವರ ವಿಗ್ರಹ ಪೋಟೋ ಪುತ್ಥಳಿ ಕಂಡ್ರೆ ವಿಚಿತ್ರ ವರ್ತನೆ ತೋರುತ್ತಿದ್ದನು ಎಂದು ಹೇಳಲಾಗುತ್ತಿದೆ. ಶಿವಕುಮಾರ್ ಸ್ವಾಮೀಜಿ ಮೂರ್ತಿ ಶುಕ್ರವಾರವೇ ನೋಡಿ, ಪ್ಲಾನ್ ಮಾಡಿಕೊಂಡು ಬಂದು ಶನಿವಾರ ವಿರೂಪಗೊಳಿಸಿ ಹೋಗಿದ್ದಾನೆ.
ಇದನ್ನೂ ಓದಿ: ₹2.5 ಕೋಟಿ ಪೀಕಿದ ಹೈಸ್ಕೂಲ್ ಬಾಯ್‌ಫ್ರೆಂಡ್‌ಗೆ ತನು, ಮನ, ಧನ ಮತ್ತು ದೇಹವನ್ನೂ ಅರ್ಪಿಸಿದ ಯುವತಿ!
ಈತನಿಗೆ ಹಿಂದೂ ದೇವತೆಗಳು, ಹಿಂದೂ ಧರ್ಮದ ಸಂತರ ಪುತ್ಥಳಿ ಹಾಗೂ ಪೋಟೋ ಕಂಡರೆ ವಿಚಿತ್ರವಾಗಿ ವರ್ಿಸುತ್ತಾನಂತೆ. ಈಗ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ವಾಸವಿದ್ದ ಆರೋಪಿ ರಾಜ್ ಶಿವು, ಆಂದ್ರ ಪ್ರದೇಶದ ಮೂಲದವರಾಗಿದ್ದು, ಇವರ ಕುಟುಂಬ ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡುತ್ತದೆ. ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದಾನೆ. ಈತನಿಗೆ ಕಳೆದ ಆರು ತಿಂಗಳ ಹಿಂದೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದು, ತಾನು ಬದುಕುಳಿಯಲು ಜೀಸ್ ಕಾರಣವೆಂದು ಹೇಳಿದ್ದಾನೆ.