Asianet Suvarna News Asianet Suvarna News

ಮತೃದೇಹ ತುಂಬಿದ ಶವಗಾರದಲ್ಲಿ ಕಣ್ಣು ಮಿಟುಕಿಸಿತು 2 ಜೀವ, ಕ್ಯಾಮೆರಾದಲ್ಲಿ ಸೆರೆಯಾಯ್ತು ರೊಮ್ಯಾನ್ಸ್!

ಎಲ್ಲೆಡೆ ಮೃತದೇಹಗಳು, ನಿಶ್ಯಬ್ದವಾಗಿರುವ ಕೋಣೆ, ಇಲ್ಲಿ ಬಹುತೇಕರಿಗೆ ಪ್ರವೇಶವಿಲ್ಲ, ಇದ್ದರೂ ಹೋಗುವ ಧೈರ್ಯವಿರುವುದಿಲ್ಲ. ಆದರೆ ಇದೇ ಶವಾಗಾರದಲ್ಲಿ ಎರಡು ಜೀವಗಳ ಕಣ್ಣು ಮಿಟುಕಿದೆ. ಮನಸ್ಸಿನ ತುಮುಲ, ಹೃದಯದ ರಾಗ ಹಾಡಿತ್ತು, ಆದರೆ ಸದ್ದಿಲ್ಲದೆ ಈ ನಡೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. 
 

Shocking incident reported in Noida Hospital Mortuary Video claims objectionable act ckm
Author
First Published Aug 22, 2024, 3:57 PM IST | Last Updated Aug 22, 2024, 3:57 PM IST

ನೋಯ್ಡಾ(ಆ.22) ಆಸ್ಪತ್ರೆಗೆ ಹೋಗಿ ಬಂದಂತೆ, ಆಸ್ಪತ್ರೆಯ ಶವಾಗಾರಕ್ಕೆ ಸಲೀಸಾಗಿ ಹೋಗಲು ಸಾಧ್ಯವಿಲ್ಲ. ಶಮಗಳ ಮಧ್ಯೆ ನಿಲ್ಲುವುದು ಸುಲಭದ ಮಾತಲ್ಲ. ಶವಗಳನ್ನು ಫ್ರೋಜನ್ ಮಾಡಿ ಇಡಲಾಗುತ್ತದೆ. ಮೊದಲ ಬಾರಿಗೆ ಆಸ್ಪತ್ರೆ ಶವಗಾರಕ್ಕೆ ಎಂಟ್ರಿಕೊಟ್ಟರೆ ಜೀವ ಝಲ್ ಎನ್ನದೇ ಇರದು. ಈ ಮೃತದೇಹ ತುಂಬಿಕೊಂಡಿರುವ ಈ ಶವಗಾರದಲ್ಲಿ ಇಬ್ಬರು ಎದ್ದು ಕುಳಿತಿದ್ದರು, ಹೊರಳಾಡುತ್ತಿದ್ದರು. ಇವೆಲ್ಲವೂ ಸದ್ದಿಲ್ಲದೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದು ಶವಗಾರದಲ್ಲಿ ಎದ್ದು ಕುಳಿತ ಮೃತದೇಹದ ಕತೆಯಲ್ಲ. ಈ ಆಸ್ಪತ್ರೆ ಸಿಬ್ಬಂದಿಗಳ ರೊಮ್ಯಾನ್ಸ್ ಘಟನೆ ಇದು. 

ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ವಿಡಿಯೋ ಪೋಸ್ಟ್ ಮಾಡಿ ಗಂಭೀರ ಆರೋಪ ಮಾಡಲಾಗಿದೆ. ಶವಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ರೊಮ್ಯಾನ್ಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನೋಯ್ಡಾ ಪೊಲೀಸರಿಗೆ ಮನವಿ ಮಾಡಲಾಗಿದೆ. ಆಸ್ಪತ್ರೆ ಶವಗಾರದೊಳಗೆ ಬಹುತೇಕರಿಗೆ ಪ್ರವೇಶ ಇರುವುದಿಲ್ಲ. ಹೀಗಾಗಿ ಇದೇ ತಾಣವನ್ನು  ಸುರಕ್ಷಿತ ತಾಣವಾಗಿ ಮಾಡಿಕೊಂಡಿದ್ದಾರೆ.

ನಡು ರಸ್ತೆಯಲ್ಲಿ ಜೋಡಿಯ ರೊಮ್ಯಾನ್ಸ್, ಸಿನ್ಮಾ ಶೈಲಿಯಲ್ಲಿ ಎಸ್ಕೇಪ್ ಆದರೂ ಪಜೀತಿ ದೃಶ್ಯ ಸೆರೆ!

ಎಲ್ಲೆಡೆ ಶವಗಳನ್ನು ಇಟ್ಟಿದ್ದಾರೆ. ಫ್ರೋಜನ್ ವ್ಯವಸ್ಥೆಯಲ್ಲಿ ಶವಗಳನ್ನು ಇಡಲಾಗಿದೆ. ಈ ಶವಗಳ ನಡುವೆ ಸಿಬ್ಬಂದಿಗಳ ರೊಮ್ಯಾನ್ಸ್ ನಡೆದಿದೆ. ಇದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಸಿಬ್ಬಂದಿ ಕೆಲಸದ ನಿಮಿತ್ತ ಶವಗಾರಕ್ಕೆ ತೆರಳಿದಾಗ ಈ ಘಟನೆ ಪತ್ತೆಯಾಗಿದೆ. ಸದ್ದಿಲ್ಲದ ವಿಡಿಯೋ ಮಾಡಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕ್ರಮಕ್ಕೆ ಆಗ್ರಹಿಸಲಾಗಿದೆ.

⚡️संवेदनशील दृश्य ⚡️

नोएडा के पोस्टमार्टम हाउस में चल रहा है अय्याशी। डीप फ्रीजर रूम, जहां शव रखे जाते हैं... वहां एक पुरुष और एक महिला आपत्तिजनक हरकतें कर रहे थे। साथ में काम करने वाले दोस्त ने वीडियो बनाकर वायरल कर दिया।#Noida @noidapolice pic.twitter.com/CvGgX6BqNX

— Pramod Atri (@Pramod_Atri) August 22, 2024

 

ಶವಗಾರದಲ್ಲಿ ಯಾರು ಹೋಗದ ಕಾರಣ ಇದೇ ತಾಣವನ್ನು ಸಿಬ್ಬಂದಿಗಳು ಬಳಸಿಕೊಂಡಿದ್ದಾರೆ. ಮಹಿಳೆಯನ್ನು ಪುಸಲಾಯಿಸಿದ ಪುರಷ ಸಿಬ್ಬಂದಿ ಆಕೆಯ ಜೊತೆಗೆ ರೊಮ್ಯಾನ್ಸ್‌ಗೆ ಮುಂದಾಗಿದ್ದಾನೆ. ಕ್ಯಾಮೆರಾ ನೋಡುತ್ತಿದ್ದಂತೆ ಮಹಿಲೆ ಅಲರ್ಟ್ ಆದರೆ ಪುರುಷ ಸಿಬ್ಬಂದಿ ಮಾತ್ರ ಯಾವುದಕ್ಕೆ ಕ್ಯಾರೇ ಎನ್ನದೆ ತನ್ನ ಕಾರ್ಯದಲ್ಲಿ ಮಗ್ನನಾಗಿದ್ದಾನೆ. ಅಸಭ್ಯ ನಡೆ ವಿರುದ್ಧ ಇದೀಗ ಆಕ್ರೋಶಗಳು ಕೇಳಿಬರುತ್ತಿದೆ. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸುವಂತೆ ಒತ್ತಾಯ ಹೆಚ್ಚಾಗುತ್ತಿದೆ.

ಕೋಲ್ಕತಾ ವೈದ್ಯೆ ಪ್ರಕರಣದ ಬಳಿಕ ದೇಶಾದ್ಯಂತ ಪ್ರತಿಭಟನೆ, ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿದೆ. ಇದರ ನಡುವೆ ಇದೀಗ ಮಹಿಳಾ ಸಿಬ್ಬಂದಿಗಳನ್ನು ಬೆದರಿಸಿ, ಕೆಲಸದ ಆಮಿಷ, ಇತರ ಒತ್ತಡಗಳನ್ನು ಹೇರಿ ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಅನ್ನೋ ಆರೋಪ ಗಂಭೀರವಾಗುತ್ತಿದೆ. ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳು ಎದ್ದಿದೆ. 

ಶಿವ ದೇವಸ್ಥಾನದ ಗರ್ಭಗುಡಿ ಪಕ್ಕದಲ್ಲೇ ಜೋಡಿಯ ರೊಮ್ಯಾನ್ಸ್ ದೃಶ್ಯ ಸೆರೆ, ಭಕ್ತರ ಆಕ್ರೋಶ!
 

Latest Videos
Follow Us:
Download App:
  • android
  • ios