Asianet Suvarna News Asianet Suvarna News

Shocking: ಗೆಳತಿ ಜತೆ ಮಾತಾಡುತ್ತಿದ್ದಂತೆ ಹೃದಯಾಘಾತಕ್ಕೆ ಬಲಿಯಾದ್ಲು 10ನೇ ಕ್ಲಾಸ್‌ ಬಾಲಕಿ..!

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣ ಇದೇ ಮೊದಲಲ್ಲ. ಹೃದಯಾಘಾತದಿಂದ ಯುವಕರು ಕುಸಿದು ಬಿದ್ದು ಸಾಯುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿವೆ.

shocking 10th student dies of heart attack in pune indapur ash
Author
First Published Mar 15, 2023, 8:37 AM IST

ಬಾರಾಮತಿ (ಮಾರ್ಚ್‌ 15, 2023): ಪುಣೆಯಲ್ಲಿ ಕುಸ್ತಿಪಟು ಹೃದಯಾಘಾತದಿಂದ ಮೃತಪಟ್ಟ ಕೆಲವೇ ದಿನಗಳಲ್ಲಿ, 10ನೇ ತರಗತಿ ವಿದ್ಯಾರ್ಥಿನಿ ಮಾರ್ಚ್‌ 12 ರಂದು ಪುಣೆಯ ಇಂದಾಪುರದಲ್ಲಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಹೃದಯಾಘಾತದಿಂದ ಸಾವಿಗೀಡಾಗಿದ್ದಾಳೆ. ಮೃತಳನ್ನು ಇಂದಾಪುರದ ಸೃಷ್ಟಿ ಏಕದ್‌ (16) ಎಂದು ಗುರುತಿಸಲಾಗಿದೆ. ಈಕೆ ಇಂದಾಪುರದ ನಾರಾಯಣದಾಸ್‌ ರಾಮದಾಸ್‌ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಮಾರ್ಚ್‌ 13 ರಂದು ಈಕೆಯ ಕೊನೆಯ ಪರೀಕ್ಷೆ ಇತ್ತು. ಅಷ್ಟರಲ್ಲಾಗಲೇ ಆಕೆ ಕುಸಿದು ಬಿದ್ದಳು. ಆಕೆಯ ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಳು.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack) ಪ್ರಕರಣ ಇದೇ ಮೊದಲಲ್ಲ. ಹೃದಯಾಘಾತದಿಂದ ಯುವಕರು ಕುಸಿದು ಬಿದ್ದು ಸಾಯುತ್ತಿರುವ ಹಲವಾರು ವಿಡಿಯೋಗಳು (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿವೆ.

ಇದನ್ನು ಓದಿ: ಕೋವಿಡ್‌ ನಂತರ ಹೃದಯಸ್ತಂಭನದಿಂದ ದೇಶದಲ್ಲಿ ಸಾವು 15% ಹೆಚ್ಚಳ: ವೈದ್ಯರು

ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಮಿತಿಗಿಂತ ಹೆಚ್ಚಿನ ಓಜೋನ್‌ (Ozone) ಮಟ್ಟ ಇರುವುದು ಹೃದಯಾಘಾತಕ್ಕೆ ಕಾರಣ ಆಗುತ್ತಿವೆ ಎಂದು ಯುರೋಪಿಯನ್‌ ಸೊಸೈಟಿ ಆಫ್‌ ಕಾರ್ಡಿಯಾಲಜಿಯ (European Society of Cardiology) ಪ್ರಕಟಣೆಯಾದ ಯುರೋಪಿಯನ್‌ ಹಾರ್ಟ್‌ ಜರ್ನಲ್‌ (European Heart Journal) ಇತ್ತೀಚೆಗೆ ವರದಿ ಮಾಡಿತ್ತು. ಹೃದಯಾಘಾತ, ಹೃದಯ ಸ್ತಂಭನ, ಪಾರ್ಶ್ವವಾಯುಗೆ ಕೂಡ ಓಝೋನ್‌ ಸಾಂದ್ರತೆ ಕಾರಣವಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ನಿಮ್ಮ ಹೃದಯದ ಆರೋಗ್ಯ ನಿಮ್ಮ ಕೈಯಲ್ಲಿ, ಹೃದಯದ ಆರೋಗ್ಯಕ್ಕಿಲ್ಲ ವಯಸ್ಸಿನ ಮಿತಿ

Follow Us:
Download App:
  • android
  • ios