ತರಕಾರಿ ತಳ್ಳುಗಾಡಿ ಕಾಲಿನಿಂದ ಒದ್ದ ಪೊಲೀಸ್ ಸಸ್ಪೆಂಡ್
ತರಕಾರಿ ತಳ್ಳುಗಾಡಿಯನ್ನು ಕಾಲಿನಿಂದ ಒದ್ದ ಪೊಲೀಸ್ | ಸ್ಟೇಷನ್ ಹೌಸ್ ಆಫೀಸರ್ ಕೆಲಸದಿಂದ ಸಸ್ಪೆಂಡ್
ಪಂಜಾಬ್(ಮೇ.06): ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿನಾರ್ ಗುಪ್ತಾ ಅವರು ಫಾಗ್ವಾರ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ನವದೀಪ್ ಸಿಂಗ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ನಗರದ ಬೀದಿ ವ್ಯಾಪಾರಿಗಳ ತರಕಾರಿ ಗಾಡಿಯನ್ನು ಒದೆಯುವ ನವದೀಪ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಪುರ್ಥಾಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕನ್ವವರ್ಧೀಪ್ ಕೌರ್ ನವದೀಪ್ ಅವರು ಔಪಚಾರಿಕ ಅಮಾನತು ಆದೇಶಗಳನ್ನು ಹೊರಡಿಸಿದ್ದಾರೆ.
ವಿದೇಶಿ ವೈದ್ಯಕೀಯ ಸಲಕರಣೆ ಹಂಚಿಕೆ; ಪಾರದರ್ಶಕತೆ ಆರೋಪಕ್ಕೆ ಜರ್ಮನ್ ರಾಯಭಾರಿ ತಿರುಗೇಟು!
ಸರಾಯ್ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ತರಕಾರಿ ಮತ್ತು ಹಣ್ಣು ಮಾರಾಟಗಾರರ ಅಂಗಡಿಗಳು ಇದ್ದು, ಪೊಲೀಸರು ಕೋವಿಡ್ -19 ಮಾನದಂಡಗಳ ಉಲ್ಲಂಘನೆ ಬಗ್ಗೆ ಪರಿಶೀಲಿಸಲು ಹೋದಾಗ ಘಟನೆ ನಡೆದಿದೆ.
ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದನ್ನು ನೋಡಿ SHO ಕೋಪಗೊಂಡು ತಳ್ಳುಗಾಡಿ ಒದ್ದು ಉರುಳಿಸಿದ್ದಾರೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಪೊಲೀಸರ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona