Asianet Suvarna News Asianet Suvarna News

UP Election 2022 ಉತ್ತರ ಪ್ರದೇಶ ಚುನಾವಣೆಯಲ್ಲಿ ಯಾರ ಜೊತೆಗೆ ಮೈತ್ರಿ ಇಲ್ಲ, ಶಿವಸೇನೆ ಸ್ಪಷ್ಟನೆ!

  • ಉತ್ತರ ಪ್ರದೇಶ ಚುನಾವಣಾ ಅಖಾಡಕ್ಕೆ ಶಿವಸೇನೆ ಲಗ್ಗೆ
  • SP ಜೊತೆಗೆ ಮೈತ್ರಿ ಕುರಿತ ಪ್ರಶ್ನೆಗೆ ಶಿವಸೇನೆ ಸ್ಪಷ್ಟನೆ
  • ಉತ್ತರ ಪ್ರದೇಶದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ
  • ಜನರನ ಆಶೋತ್ತರಗಳಿಗೆ ಸ್ಪಂದಿಸಲು ಶಿವಸೇನೆ ಬದ್ಧ
Shiv Sena will not alliance with any Party for Uttar Pradesh Assembly elections 2022 confirms Sanjay Raut ckm
Author
Bengaluru, First Published Jan 13, 2022, 2:51 PM IST

ಮುಂಬೈ(ಜ.13): ಪಂಚ ರಾಜ್ಯಗಳ ಚುನಾವಣೆ(Five States Eelection 2022) ಘೋಷಣೆಯಾದ ಬಳಿಕ ಇದೀಗ ಭಾರತದ ಪ್ರಮುಖ ಪಕ್ಷಗಳು ಉತ್ತರ ಪ್ರದೇಶ(Uttar Pradesh Election) ಪ್ರವಾಸ ಹೆಚ್ಚಾಗುತ್ತಿದೆ. ಕೆಲ ಪಕ್ಷದ ನಾಯಕರು ಇದೀಗ ಉತ್ತರ ಪ್ರದೇಶಲ್ಲೇ ಬೀಡುಬಿಟ್ಟಿದ್ದಾರೆ. ಉತ್ತರ ಪ್ರದೇಶದ ಮೂಲಕ ದಿಲ್ಲಿ ಗದ್ದುಗೆಯಲ್ಲಿ ಅಧಿಕಾರ ಹಿಡಿಯಲು ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಶಿವಸೇನೆ(Shiv sena) ಸ್ಪರ್ಧಿಸಲಿದೆ ಎಂದು ಈಗಾಗಲೇ ನಾಯಕ ಸಂಜಯ್ ರಾವತ್ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಎದ್ದ ಮೈತ್ರಿ ಊಹಾಪೋಹಕ್ಕೆ ಸಂಜಯ್ ರಾವತ್ ತೆರೆಎಳೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಶಿವಸೇನೆ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ(not ally with any political party). ಸಮಾಜವಾದಿ ಪಕ್ಷದ ಜೊತೆಗ ನಮಮಗೆ ರಾಜಕೀಯವಾಗಿ, ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯವಿದೆ. ಆದರೆ ಉತ್ತರ ಪ್ರದೇಶದಲ್ಲಿ ಶಿವಸೇನೆ ಬದಲಾವಣೆ ಬಯಸುತ್ತಿದೆ. ಇದಕ್ಕಾಗಿ ಕಳೆದ ಕೆಲ ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಶಿವಸೇನೆ ಕೆಲಸ ಮಾಡುತ್ತಿದೆ. ಆದರೆ ಬಿಜೆಪಿಗೆ ಅಡೆತಡೆಯಾಗಬಾರದು ಅನ್ನೋ ಕಾರಣಕ್ಕೆ ಇಷ್ಟು ದಿನ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎಂದು ಶಿವಸೇನೆ ನಾಯಕ, ರಾಜ್ಯಸಭಾ ಸಂಸದ ಸಂಜಯ್ ರಾವತ್(Sanjay Raut) ಹೇಳಿದ್ದಾರೆ.

UP Election 2022 ಉತ್ತರ ಪ್ರದೇಶ ಚುನಾವಣಾ ಅಖಾಡಕ್ಕೆ ಶಿವಸೇನೆ, 50 ರಿಂದ 100 ಸ್ಥಾನಗಳಲ್ಲಿ ಸ್ಪರ್ಧೆ!

ಕಳೆದ ಕೆಲ ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಶಿವಸೇನೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿದೆ. ಇದೀಗ ಸಮಯ ಬಂದಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಶಿವಸೇನೆ ಕೂಡ ಉತ್ತರ ಪ್ರದೇಶದಲ್ಲಿ ಹೊಸ ಪಕ್ಷದ ಆಡಳಿತ ಬಯಸುತ್ತಿದೆ. ಇದು ಈ ಬಾರಿ ಸಾಧ್ಯವಾಗಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. 

ಇದೇ ವೇಳೆ ಯೋಗಿ ಆದಿತ್ಯನಾಥ್ ಅಯೋಧ್ಯೆಯಿಂದ ಸ್ಪರ್ಧಿಸುವ ಕುರಿತು ಸಂಜಯ್ ರಾವತ್ ಮಾತನಾಡಿದ್ದಾರೆ. ಯೋಗಿ ಆದಿತ್ಯನಾಥ್ ಎಲ್ಲಿಂದ ಬೇಕಾದರು ಸ್ಪರ್ಧಿಸಲು ಅರ್ಹರಿದ್ದಾರೆ. ಅವರ ಮೇಲೆ ನಮಗೆ ಗೌರವವಿದೆ. ನಾವು ಕೂಡ ಅಯೋಧ್ಯೆ ಹಾಗೂ ಮಥುರಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇವೆ. ನಾವು ಚುನಾವಣೆಗೆ ಸ್ಪರ್ಧಿಸುತ್ತೇವೆ. ಯಾವುದೇ ವ್ಯಕ್ತಿಯ ಜೊತೆಗಲ್ಲ. ನಮ್ಮ ಹೋರಾಟ ನಮ್ಮ ಸ್ಪರ್ಧೆ ಯುಪಿ ಚುನಾವಣೆ ಹೊರತು ವೈಯುಕ್ತಿವಲ್ಲ ಎಂದು ಸಂಜಯ್ ರಾವತ್ ಸ್ಪಷ್ಟಪಡಿಸಿದ್ದಾರೆ. 

"

UP Elections: ಇದು ಡಿಜಿಟಲ್ ಯುಗದ ಚುನಾವಣೆ, ಪ್ರಚಾರದ ವೈಖರಿಯೇ ಬದಲು!

ಸಂಜಯ್ ರಾವತ್ ಹೇಳಿಕೆ ಇದೀಗ ಉತ್ತರ ಪ್ರದೇಶದಲ್ಲಿ ಭಾರಿ ಸಂಚಲ ಸೃಷ್ಟಿಸಿದೆ. ಕಾರಣ ಉತ್ತರ ಪ್ರದೇಶ ಚುನಾವಣೆ ಗೆಲ್ಲಲು ಬಿಜೆಪಿ, ಸಮಾಜವಾದಿ ಸೇರಿದಂತೆ ಎಲ್ಲಾ ಪಕ್ಷಗಳು ಕಸರತ್ತು ನಡೆಸುತ್ತಿದೆ. ಇದರ ನಡುವೆ ಏಕಾಂಗಿಯಾಗಿ ಚುನಾವಣೆ ಅಖಾಡಕ್ಕಿಳಿಯಲು ಸಜ್ಜಾಗಿರುವ ಶಿವಸೇನೆ ಯುಪಿಯಲ್ಲಿ ಮೋಡಿ ಮಾಡುತ್ತಾ ಅನ್ನೋ ಚರ್ಚೆಗಳು ಆರಂಭಗೊಂಡಿದೆ. 

ಸಂಜಯ್ ರಾವತ್ ಜನವರಿ 12ರಂದು ಯುಪಿ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದರು. ಇದೀಗ ಮೈತ್ರಿ ಮಾತ್ರನ್ನು ತಳ್ಳಿಹಾಕಿದ್ದಾರೆ. ಈ ಬೆಳವಣಿಗೆ ಬಿಜೆಪಿ ಲೆಕ್ಕಾಚಾರವನ್ನು ಮತ್ತಷ್ಚು ಚುರುಕುಗೊಳಿಸಿದೆ. ಕಾರಣ ಶಿವಸೇನೆ ಹಿಂದುತ್ವ ಮತಗಳಿಕೆಗೆ ಮುಂದಾದರೆ ಬಿಜೆಪಿಗೆ ಹೊಡೆತ ಬೀಳಲಿದೆ ಅನ್ನೋ ಆತಂಕ ಎದುರಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆ ಮೈತ್ರಿ ಸರ್ಕಾರ ರಚಿಸಿರುವ ಶಿವಸೇನೆ ಹಿಂದುತ್ವ ವಿಚಾರ ಮುಂದಿಟ್ಟು ಮತ ಕೇಳಲು ಕಷ್ಟವಾಗಲಿದೆ. ಕಾರಣ ಈ ಹಿಂದಿನ ಎಲ್ಲಾ ಹೇಳಿಕೆಗೆಗಳು ಬಿಜೆಪಿ ವಿರೋಧಿಸಿ ಹಾಗೂ ಹಿಂದುತ್ವ ವಿರೋಧಿಸಿ ನೀಡಿದ ಹೇಳಿಕೆಗಳು ಶಿವಸೇನೆಗೆ ಮುಳವಾಗಲಿದೆ. ಈಗಾಗಲೇ ಶಿವಸೇನೆ ಉತ್ತರ ಪ್ರದೇಶ ಚುನಾವಣೆಯಲ್ಲಿ 50 ರಿಂದ 100 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದೆ. ಈಗಾಗಲೇ ಆಮ್ ಆದ್ಮಿ ಪಾರ್ಟಿ, ಅಸಾದುದ್ದೀನ್ ಓವೈಸಿಯ AIMIM ಪಾರ್ಟಿ ಕೂಡ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.

Follow Us:
Download App:
  • android
  • ios