Asianet Suvarna News Asianet Suvarna News

UP Election 2022 ಉತ್ತರ ಪ್ರದೇಶ ಚುನಾವಣಾ ಅಖಾಡಕ್ಕೆ ಶಿವಸೇನೆ, 50 ರಿಂದ 100 ಸ್ಥಾನಗಳಲ್ಲಿ ಸ್ಪರ್ಧೆ!

  • ರಂಗೇರಿದ ಉತ್ತರ ಪ್ರದೇಶ ಚುನಾಣವಾ ಕಣಕ್ಕೆ ಶಿವಸೇನೆ ಎಂಟ್ರಿ
  • ಯುಪಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಮಹಾರಾಷ್ಟ್ರದ ಶಿವಸೇನೆ ಪಕ್ಷ
  • ಫೆಬ್ರವರಿ 10 ರಿಂದ ಮಾರ್ಚ್ 7ರ ವರೆಗೆ 7 ಹಂತದಲ್ಲಿ ಯುಪಿ ಚುನಾವಣೆ
Shiv Sena plan to Contest 50 to 100 seats in Uttar pradesh Assemby Election 2022 ckm
Author
Bengaluru, First Published Jan 12, 2022, 2:55 PM IST

ಮುಂಬೈ(ಜ.12):  ಭಾರತದ ಚುನಾವಣಾ ಆಯೋಗ(election commission of india) ಪಂಚ ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. 5 ರಾಜ್ಯಗಳಲ್ಲಿ ಚುನಾವಣ ಕಣ ರಂಗೇರಿದೆ. ಇದರ ಪ್ರಮಾಣ ಉತ್ತರ ಪ್ರದೇಶದಲ್ಲಿ ತುಸು ಹೆಚ್ಚಾಗಿದೆ. ಯುಪಿ ಚುನಾವಣಾ ಅಖಾಡಕ್ಕೆ ಇದೀಗ ಶಿವಸೇನೆ(Shiv Sena) ಪಕ್ಷ ಎಂಟ್ರಿಕೊಟ್ಟಿದೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಪಕ್ಷ 50 ರಿಂದ 100 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಉತ್ತರ ಪ್ರದೇಶದ ಚುನಾವಣೆಯಲ್ಲಿ(Uttar pradesh Election 2022) ಸ್ಪರ್ಧಿಸುವ ಕುರಿತು ಶಿವಸೇನೆ ಪಕ್ಷದ ನಾಯಕ, ರಾಜ್ಯಸಭಾ ಸಂಸದ ಸಂಜಯ್ ರಾವತ್ ಸ್ಪಷ್ಟಪಡಿದ್ದಾರೆ. ಇದರ ಮೊದಲ ಹಂತವಾಗಿ ಸಂಜಯ್ ರಾವತ್ (Sanjay Raut) ನಾಳೆ(ಜ.13) ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ದೇಶದ ರಾಜಕಾರಣದಲ್ಲಿ ಉತ್ತರ ಪ್ರದೇಶ ಚುನಾವಣೆ ಅತೀ ಪ್ರಮುಖವಾಗಿದೆ. ಹೀಗಾಗಿ ಯುಪಿ ಚುನಾವಣೆ ಮೂಲಕ ದಿಲ್ಲಿ ಗದ್ದುಗೆಯಲ್ಲೂ ಅಧಿಪತ್ಯ ಸಾಧಿಸಲು ಶಿವಸೇನೆ ಹೊಂಚು ಹಾಕಿದೆ.

UP Elections: ಯುಪಿ ಚುನಾವಣಾ ಕಣದಿಂದ ಘಟಾನುಘಟಿ ನಾಯಕರು ಔಟ್!

ಮಾಧ್ಯಮ ಜೊತೆ ಮಾತನಾಡಿದ ಸಂಜಯ್ ರಾವತ್ ಪಂಚ ರಾಜ್ಯಗಳ ಚುನಾವಣೆಯಲ್ಲಿ(Five States Election) ಉತ್ತರ ಪ್ರದೇಶದಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ. ಎಷ್ಟು ಸ್ಥಾನದಲ್ಲಿ ಸ್ಪರ್ಧಿಸಲಿದೆ ಅನ್ನೋದನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಆದರೆ 50 ರಿಂದದ 100 ಸ್ಥಾನಗಳಲ್ಲಿ ಸ್ಪರ್ಧಿಸುವುದು ಖಚಿತ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣೆ ಗೆದ್ದರೆ ದಿಲ್ಲಿ(Delhi) ಗದ್ದುಗೆ ಸುಲಭವಾಗಿ ಗೆಲ್ಲಬಹುದು ಅನ್ನೋದು ರಾಜಕೀಯ(Political) ಮಾತು. ಇದೇ ಕಾರಣಕ್ಕೆ ಎಲ್ಲಾ ಪಕ್ಷಗಳು ಉತ್ತರ ಪ್ರದೇಶ ಅಖಾಡಕ್ಕಿಳಿಯುತ್ತಿದೆ. ಇತ್ತೀಚೆಗೆ ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷ ಕೂಡ ಉತ್ತರ ಪ್ರದೇಶದಲ್ಲಿ ಚುನಾಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸೆದೆ. ಇತ್ತ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಕೂಡ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಹೀಗಾಗಿ ಈ ಬಾರಿಯ ಉತ್ತರ ಪ್ರದೇಶದ ಚುನಾವಣೆ ಈ ಹಿಂದಿಗಿಂತಲೂ ಹೆಚ್ಚು ಪೈಪೋಟಿಯಿಂದ ಕೂಡಿದೆ.

UP Elections: ಇದು ಡಿಜಿಟಲ್ ಯುಗದ ಚುನಾವಣೆ, ಪ್ರಚಾರದ ವೈಖರಿಯೇ ಬದಲು!

ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದ ಬಿಜೆಪಿ(BJP) ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಮುಂದಾಗಿದ್ದರೆ, ಕಳೆದುಕೊಂಡ ಅಧಿಕಾರ ಮತ್ತೆ ಗಿಟ್ಟಿಸಿಕೊಳ್ಳಲು ಅಖಿಲೇಶ್ ಯಾದವ್ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸಮೀಕ್ಷೆಗಳು ಯೋಗಿ ಆದಿತ್ಯನಾಥ್ ಪರವಿದ್ದರೂ, ಅಖಿಲೇಶ್ ಯಾದವ್‌ರತ್ತ ಒಲವು ಹೆಚ್ಚಾಗುತ್ತಿದೆ. ಹೀಗಾಗಿ ಯುಪಿ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿರಲಿದೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022:
ಚುನಾವಣೆ ಆಯೋಗ ಇತ್ತೀಚೆಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಿದೆ. ಒಟ್ಟು 7 ಹಂತದಲ್ಲಿ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶ ಚುನಾವಣೆ ನಡೆಯಲಿದೆ. ಫೆಬ್ರವರಿ 10 ರಿಂದ ಉತ್ತರ ಪ್ರದೇಶದ ಚುನಾವಣೆ ಆರಂಭಗೊಳ್ಳಲಿದೆ. ಕೊನೆಯ ಹಂತದ ಚುನಾವಣೆ ಮಾರ್ಚ್ 7ರಂದು ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Five States Election: ರ‍್ಯಾಲಿ, ಪಾದಯಾತ್ರೆ ರೋಡ್‌ ಶೋ ನಡೆಸುವಂತಿಲ್ಲ, ಏನಿದ್ರೂ ಡಿಜಿಟಲ್ ಪ್ರಚಾರ!

ಉತ್ತರ ಪ್ರದೇಶದಲ್ಲಿ 403 ವಿಧಾನಸಭಾ ಕ್ಷೇತ್ರಗಳಿವೆ. ಯುಪಿ ಮ್ಯಾಜಿಕ್ ನಂಬರ್ 202. ಉತ್ತರ ಪ್ರದೇಶದಲ್ಲಿ  202 ಸ್ಥಾನ ಗೆದ್ದ ಪಕ್ಷ ಅಧಿಕಾರಕ್ಕೇರಲಿದೆ. 2017ರ ಮಾರ್ಚ್‌ನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿ ಮಾರ್ಚ್ 10, 2022ಕ್ಕೆ ಅಂತ್ಯಗೊಳ್ಳಲಿದೆ. 2017ರಲ್ಲಿ ಬಿಜೆಪಿ 312 ಸ್ಥಾನಗಳಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.  ಶೇಕಡಾ 39.67 ಮತಗಳನ್ನು ಪಡೆದಿತ್ತು. ಇನ್ನು ಸಮಾಜವಾದಿ ಪಾರ್ಟಿ 47 ಸ್ಥಾನ ಗೆದ್ದಿದ್ದರೆ, ಬಿಎಸ್‌ಪಿ 19 ಸ್ಥಾನ ಗೆದ್ದಿತ್ತು. ಇನ್ನು ಕಾಂಗ್ರೆಸ್ ಕೇವಲ 7 ಸ್ಥಾನ ಗೆದ್ದುಕೊಂಡು ತೀವ್ರ ಮುಖಭಂಗ ಅನುಭವಿಸಿತ್ತು.
 

Follow Us:
Download App:
  • android
  • ios