ಮುಂಬೈ(ನ.27): ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ಸರ್ಕಾರ ರಚನೆಗೆ ಸಜ್ಜಾಗಿರುವಂತೆಯೇ, ಶಿವಸೇನೆ ರಾಜಕೀಯವಾಗಿ ಅತ್ಯಂತ ಕ್ರಿಯಾಶೀಲವಾಗಿ ಹೊರಹೊಮ್ಮಿದೆ.

ಕ್ಷಮಿಸಿದ್ದೀನಿ ಬಾರಯ್ಯ: ಅಜಿತ್ ಬಾಂಧವ್ಯ ಏಕತೆ ಮೆರೆದ ಸುಪ್ರಿಯಾ!

ಶಿವಸೇನೆ ದೆಹಲಿಯ ಸಿಂಹಾಸನವನ್ನೂ ವಶಕ್ಕೆ ಪಡೆದರೆ ಅಚ್ಚರಿಪಡಬೇಕಿಲ್ಲ ಎಂದು ಪಕ್ಷದ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ನಾವು ಸರ್ಕಾರ ರಚಿಸುತ್ತೇವೆ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವು. ಅದರಂತೆ ಇದೀಗ ರಾಜ್ಯದಲ್ಲಿ ಸರ್ಕಾರ ರಚಿಸಲಾಗಿದ್ದು, ನಮ್ಮ ಸೂರ್ಯಯಾನ ಮಂತ್ರಾಲಯ(ಮಹಾರಾಷ್ಟ್ರ ವಿಧಾನಸಭೆ)ದ 6ನೇ ಮಹಡಿಗೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ರಾವುತ್ ನುಡಿದಿದ್ದಾರೆ.

ದೆಹಲಿ ಚಾಣಕ್ಯನ ಮಣಿಸಿದ ’ಮಹಾ’ ಚಾಣಾಕ್ಷ ಪವಾರ್‌!

ನಮ್ಮ ಸೂರ್ಯಯಾನ ಸೇನೆ ದೆಹಲಿಯಲ್ಲಿ ಬಂದಿಳಿದರೆ ಅಚ್ಚರಿಪಡಬೇಕಿಲ್ಲ ಎಂದು ರಾವುತ್ ಹೇಳಿದ್ದು, ಸೂರ್ಯಯಾನ ಎಂದರೆ ನಮ್ಮ ಪಕ್ದ ನಾಯಕ ಎಂದರ್ಥ ಎಂದು ಹೇಳಿದರು.