ಮುಂಬೈ(ನ.22): ಮತ್ತೆ ಬಿಜೆಪಿ ಜೊತೆಗಿನ ಮೈತ್ರಿಯ ಸಾಧ್ಯತೆ ತಳ್ಳಿ ಹಾಕಿರುವ ಶಿವಸೇನೆ, ಯಾವುದೇ ಕಾರಣಕ್ಕೂ ಮತ್ತೆ ಎನ್’ಡಿಎ ಮೈತ್ರಿಕೂಟ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವುತ್, ಇಂದ್ರ ದೇವನ ಸಿಂಹಾಸನ ಕೊಟ್ಟರೂ ಬಿಜೆಪಿ ಜೊತೆ ನಾವು ಮೈತ್ರಿ ಬೆಳೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಾರಾಂತ್ಯಕ್ಕೆ ರಚನೆಯಾಗಲಿದೆ ಹೊಸ ಸರ್ಕಾರ: ತ್ರಿಮೂರ್ತಿಗಳ ಕನಸು ಸಾಕಾರ?

ಎನ್ ಸಿಪಿ-ಕಾಂಗ್ರೆಸ್ ಜೊತೆಗಿನ ಮೈತ್ರಿಯ ಪರಿಣಾಮ ಶಿವಸೇನೆಗೆ ಮುಖ್ಯಮಂತ್ರಿ ಪಟ್ಟ ದೊರೆಯಲಿದ್ದು, ಮುಂದಿನ ಐದು ವರ್ಷಗಳ ಕಾಲ ಶಿವಸೇನೆ ಅಭ್ಯರ್ಥಿಯೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ರಾವುತ್ ಪುನರುಚ್ಛಿಸಿದರು.

ಉದ್ಧವ್‌ಗೆ 5 ವರ್ಷ ಸಿಎಂ ಪಟ್ಟ: ರಾಜಿ ಸೂತ್ರ ರೆಡಿ?

ಬಿಜೆಪಿ ಜೊತೆ ಮಾತುಕತೆ ನಡೆಸುವ ಸಮಯ ಮುಗಿದಿದ್ದು, ಇಂದ್ರಲೋಕದ ಸಿಂಹಾಸನವನ್ನೇ ನೀಡುವುದಾಗಿ ಹೇಳಿದರೂ ಮೈತ್ರಿ ಸಾಧ್ಯವಿಲ್ಲ ಎಂದು ರಾವುತ್ ಕಡ್ಡಿ ತುಂಡು ಮಾಡಿದಂತೆ ಹೇಳಿದರು. 

ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಸಿಎಂ ಆಗುವುದನ್ನು ಮಹಾರಾಷ್ಟ್ರದ ಜನತೆ ಬಯಸುತ್ತಿದ್ದು, ಅದರಂತೆ ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೖತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ರಾವುತ್ ಸ್ಪಷ್ಟಪಡಿಸಿದರು.