ಮುಂಬೈ(ನ.21): ಮಹಾರಾಷ್ಟ್ರದ ಮಹಾ ನಾಟಕಕ್ಕೆ ಅಂತಿಮ ತೆರೆ ಬೀಳುವ ಸಾಧ್ಯತೆ ಇದ್ದು, ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿಕೂಟ ಈ ವಾರಾಂತ್ಯದಲ್ಲಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಸಂಬಂಧ ಅಂತಿಮ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಶಿವಸೇನೆ ಜೊತೆಗೆ ಕೈಜೋಡಿಸಿ ಸರ್ಕಾರ ರಚಿಸಲು ನಿರ್ಧರಿಸಿದೆ ಎನ್ನಲಾಗಿದೆ.  

ಉದ್ಧವ್‌ಗೆ 5 ವರ್ಷ ಸಿಎಂ ಪಟ್ಟ: ರಾಜಿ ಸೂತ್ರ ರೆಡಿ?

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರ ರಚಿಸಲು ಸಾಧ್ಯ ಎಂದು ಹೇಳಿದ್ದಾರೆ.

ಇನ್ನು ಸರ್ಕಾರ ರಚನೆಯ ಕುರಿತು ಶಿವಸೇನೆ ಕೂಡ ಉತ್ಸುಕವಾಗಿದ್ದು, ಕಾಂಗ್ರೆಸ್-ಎನ್’ಸಿಪಿ ಅಂತಿಮ ಒಪ್ಪಿಗೆಗಾಗಿ ಕಾಯುತ್ತಿದೆ. ನಾಳೆ(ನ.22) ಮುಂಬೈನಲ್ಲಿ ಮೂರು ಪಕ್ಷಗಳ ನಾಯಕರು ಸಭೆ ಸೇರಿ ಅಂತಿಮ ನಿರ್ಧಾರ ಘೋಷಿಸಿದ್ದಾರೆ ಎನ್ನಲಾಗಿದೆ.

ಪುಣೆಯಲ್ಲಿ NCP ಕೋರ್‌ಕಮಿಟಿ ಸಭೆ, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಯಾವಾಗ?

ಡಿ.01ರೊಳಗಾಗಿ ಸರ್ಕಾರ ರಚನೆಯಾಗುವ ಸಂಭವವಿದ್ದು, ಇದಕ್ಕೆ ಪೂರಕವಾಗಿ ಮೂರೂ ಪಕ್ಷಗಳು ಸಿದ್ಧತೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: