Asianet Suvarna News Asianet Suvarna News

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕ್ಷಣಗಣನೆ?: ಕಾನೂನು ಹೋರಾಟಕ್ಕೆ ಸೈ ಎಂದ ಶಿವಸೇನೆ!

ಮಹಾರಾಷ್ಟ್ರದಲ್ಲಿ ಮುಂದುವರದ ಸರ್ಕಾರ ರಚನೆಯ ಹಗ್ಗ ಜಗ್ಗಾಟ| ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ| ಯಾವುದೇ ಮೈತ್ರಿಕೂಟ ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನೆಲೆ| ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿ ಕೇಂದ್ರಕ್ಕೆ ಪತ್ರ ಬರೆದ ರಾಜ್ಯಪಾಲ| ರಾಜ್ಯಪಾಲರ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಶಿವಸೇನೆ| ಸರ್ಕಾರ ರಚನೆಗೆ ಅವಕಾಶ ನೀಡದ್ದಕ್ಕೆ ರಾಜ್ಯಪಾಲರ ವಿರುದ್ಧ ಶಿವಸೇನೆ ಆಕ್ರೋಶ|

Shiv Sena On Legal fight After Maharashtra Governor Impose President Rule In Maharashtra
Author
Bengaluru, First Published Nov 12, 2019, 2:36 PM IST

ಮುಂಬೈ(ನ.12): ಮಹಾರಾಷ್ಟ್ರದಲ್ಲಿ ಯಾವುದೇ ಮೈತ್ರಿಕೂಟ ಸರ್ಕಾರ ರಚಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಶಿಫಾರಸು ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

"

ಶಿವಸೇನೆ-ಎನ್‌ಸಿಪಿ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ಹೇಳಲಾಗಿತ್ತಾದರೂ, ಎರಡೂ ಪಕ್ಷಗಳು ಇದುವರೆಗೂ ಯಾವುದೇ ನಿರ್ಣಯಕ್ಕೆ ಬರದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಿದ್ದಾರೆ ಎಂದು ಹೇಳಲಾಗಿದೆ.

ಮಹಾ ಹೈ ಡ್ರಾಮಾ : ಶಿವಸೇನೆ ಭಾರೀ ಕನಸಿಗೆ ಮುಖಭಂಗ

ಆದರೆ ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಖಂಡಿಸಿರುವ ಶಿವಸೇನೆ, ಸರ್ಕಾರ ರಚನೆಗೆ ಸಮಯಾವಕಾಶವನ್ನೂ ನೀಡದೇ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿರುವುದು ಅಸಾಂವಿಧಾನಿಕ ಎಂದು ಹರಿಹಾಯ್ದಿದೆ.

ರಾಜ್ಯಪಾಲರ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಶಿವಸೇನೆ ಸ್ಪಷ್ಟಪಡಿಸಿದ್ದು, ಸರ್ಕಾರ ರಚನೆಗೆ ಬೇಕಾದ ಬೆಂಬಲವನ್ನು ಗಳಿಸಲು ಶಕ್ತವಾಗಿರುವುದಾಗಿ ಹೇಳಿದೆ.

ಯಾವುದೇ ಮೈತ್ರಿಕೂಟ ನಿಗದಿತ ಗಡುವಿನಲ್ಲಿ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾದ ಕಾರಣ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿರುವುದಾಗಿ ರಾಜಭವನ ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರದಲ್ಲಿ ‘ಮೈತ್ರಿ’ಗೆ ಹೊಸ ಭಾಷ್ಯ; ಶಿವಸೇನೆಗೆ NCP-ಕಾಂಗ್ರೆಸ್ ಸಹಕಾರ?

ಒಟ್ಟಿನಲ್ಲಿ ಮಹಾರಾಷ್ಟ್ರದ ರಾಜಕೀಯ ಮತ್ತೊಂದು ವಿಪ್ಲವದತ್ತ ಹೊರಳುತ್ತಿದ್ದು, ಸರ್ಕಾರ ರಚನೆಯ ಹಗ್ಗ ಜಗ್ಗಾಟದಿಂದ ರಾಜ್ಯದ ಜನತೆ ರೋಸಿ ಹೋಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಸತ್ಯ.

Follow Us:
Download App:
  • android
  • ios