Asianet Suvarna News Asianet Suvarna News

ಕೇಟರಿಂಗ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಶಾಸಕ: ವಿಡಿಯೋ ವೈರಲ್

ಆಹಾರದ ಗುಣಮಟ್ಟದ ವಿಚಾರವಾಗಿ ಮಹಾರಾಷ್ಟ್ರದ ಶಿವಸೇನೆಯ ಶಾಸಕರೊಬ್ಬರು ಕೇಟರಿಂಗ್ ಮ್ಯಾನೇಜರ್‌ಗೆ ಕಪಾಳ ಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 

Shiv Sena MLA Santosh Bangar slaps catering Manager over food quality issues akb
Author
Bangalore, First Published Aug 16, 2022, 10:13 AM IST

ಆಹಾರದ ಗುಣಮಟ್ಟದ ವಿಚಾರವಾಗಿ ಮಹಾರಾಷ್ಟ್ರದ ಶಿವಸೇನೆಯ ಶಾಸಕರೊಬ್ಬರು ಕೇಟರಿಂಗ್ ಮ್ಯಾನೇಜರ್‌ಗೆ ಕಪಾಳ ಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕಳೆದ ತಿಂಗಳು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಯುವ ಕೆಲವೇ ಗಂಟೆಗಳ ಮೊದಲು ಸಿಎಂ ಏಕನಾಥ್ ಶಿಂಧೆ ನೇತೃತ್ವದ ಪಾಳಯಕ್ಕೆ ಬಂದಿದ್ದ ಶಿವಸೇನೆಯ ಬಂಡಾಯ ಶಾಸಕ ಸಂತೋಷ್ ಬಂಗಾರ್ ಅವರೇ ಮ್ಯಾನೇಜರ್‌ಗೆ ಹೊಡೆದ ಶಾಸಕ. ಕಳಪೆ ಗುಣಮಟ್ಟದ ಮಧ್ಯಾಹ್ನದ ಊಟ ನೀಡಲಾಗುತ್ತಿದೆ ಎಂದು ಆರೋಪದ ಹಿನ್ನೆಲೆಯಲ್ಲಿ ಖಾಸಗಿ ಕೇಟರಿಂಗ್ ಮ್ಯಾನೇಜರ್‌ಗೆ ನಿಂದಿಸಿ ಸಂತೋಷ್ ಬಂಗಾರ್‌ ಹಲ್ಲೆ ಮಾಡಿದ್ದಾರೆ. ನಿನ್ನೆ( ಆಗಸ್ಟ್15) ಅವರ ಕ್ಷೇತ್ರವಾದ ಹಿಂಗೋಲಿಯಲ್ಲಿ ಈ ಘಟನೆ ನಡೆದಿದೆ. 

ಬಂಗಾರ್ ಅವರು ಆಹಾರದ ಗುಣಮಟ್ಟವನ್ನು ಪ್ರಶ್ನಿಸುತ್ತಿರುವುದು ಮತ್ತು ನಂತರ ಆಹಾರ ಸೇವೆಯ ನೇತೃತ್ವ ವಹಿಸಿದ್ದ ವ್ಯವಸ್ಥಾಪಕರಿಗೆ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಂತರ ಮ್ಯಾನೇಜರ್ ಆ, ಆಹಾರ ವಿಲೇವಾರಿ ಆಗಬೇಕಾಗಿರುವ ಬೇಡವಾದ ಆಹಾರದ ಭಾಗವೆಂದು ಹೇಳಿಕೊಂಡರಾದರೂ ಶಾಸಕರೂ ಅವರ ಮಾತು ಕೇಳದೇ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಶಾ ಮಾತು ಉಳಿಸಿಕೊಂಡಿದ್ದರೆ ಅಘಾಡಿ ಹುಟ್ಟುತ್ತಿರಲಿಲ್ಲ: ಉದ್ಧವ್ ಠಾಕ್ರೆ 

ರಾಜ್ಯ ಸರ್ಕಾರದ ಮಧ್ಯಾಹ್ನದ ಬಿಸಿ ಊಟದ ಯೋಜನೆಯಡಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಆಹಾರವನ್ನು ವಿತರಿಸಲಾಗುತ್ತದೆ. ಕಾರ್ಮಿಕ ಇಲಾಖೆಯೂ ಈ ಆಹಾರದ ವಿತರಣೆಯ ಗುತ್ತಿಗೆಯನ್ನು ಖಾಸಗಿಯವರಿಗೆ ನೀಡಿದೆ. ಹಿಂಗೋಲಿ ನಗರದಾದ್ಯಂತ ಕಾರ್ಮಿಕರಿಗೆ ಆಹಾರವನ್ನು ವಿತರಿಸುವ ಮೊದಲು ಗುತ್ತಿಗೆದಾರರ ಆವರಣದಲ್ಲಿ ಈ ಆಹಾರವನ್ನು ತಯಾರಿಸಲಾಗುತ್ತದೆ.

ಕೂಲಿ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆಹಾರ ತಯಾರಿಸುವ ಆವರಣಕ್ಕೆ ಶಾಸಕ ಸಂತೊಷ್ ಬಂಗಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು  ತಿಳಿದು ಬಂದಿದೆ. ಸಂಬಂಧಿತ ಗುತ್ತಿಗೆದಾರರು ಕಾರ್ಮಿಕರಿಗೆ ಬಡಿಸುವ ಆಹಾರವು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ ಮತ್ತು ಸರ್ಕಾರವು ಸೂಚಿಸಿದ ಮೆನುವನ್ನು ಕಾರ್ಮಿಕರಿಗೆ ನೀಡುತ್ತಿಲ್ಲ ಎಂಬುದು ತನ್ನ ಗಮನಕ್ಕೆ ಬಂದಿದೆ ಎಂದು ಬಂಗಾರ್ ಹೇಳಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಇದಕ್ಕೆ ಕಾರಣರಾದವರನ್ನು ಅಮಾನತು ಮಾಡಿ ಎಂದು ಬಂಗಾರ್ ಹೇಳಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ.

ಒಂದು ದೇಶ, ಒಂದು ಭಾಷೆ ಪರ ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್ ಬ್ಯಾಟಿಂಗ್‌!

2019ರಲ್ಲಿ ಹಿಂಗೋಲಿ ವಿಧಾನಸಭಾ ಕ್ಷೇತ್ರದಿಂದ ಶಿವಸೇನಾ ಶಾಸಕರಾಗಿ ಅಯ್ಕೆಯಾದ ಸಂತೋಷ್ ಬಂಗಾರ್‌, ಆರಂಭದಲ್ಲಿ ಉದ್ಧವ್ ಠಾಕ್ರೆ ಬಣದಲ್ಲೇ ಇದ್ದರು. ಮಹಾರಾಷ್ಟ್ರದಲ್ಲಿ ವಾತಾವರಣ ಹದಗೆಟ್ಟಿದೆ ಏಕನಾಥ್ ಶಿಂಧೆ ಕ್ಯಾಂಪ್‌ನಲ್ಲಿರುವ ಎಲ್ಲಾ ಶಾಸಕರು ಖಂಡಿತವಾಗಿ ವಾಪಸ್ ಶಿವಸೇನಾಗೆ ಮರಳಬೇಕು ಹಾಗೂ ಅವರೆಲ್ಲರೂ ಪಕ್ಷದ ಮುಖ್ಯಸ್ಥರಾಗಿರುವ ಉದ್ಧವ್ ಠಾಕ್ರೆ ಕ್ಷಮಿಸಲಿದ್ದಾರೆ ಎಂದು ಹೇಳಿದ್ದರು. ಆದರೆ ನಂತರದಲ್ಲಿ ಅವರೇ ಉದ್ಧವ್ ಬಣ ಬಿಟ್ಟು ಏಕನಾಥ್ ಬಣ ಸೇರಿದ್ದರು.
 

Follow Us:
Download App:
  • android
  • ios