Asianet Suvarna News Asianet Suvarna News

ರೈತರೇ ನಮ್ಮ ಆದ್ಯತೆ ಎಂದ ಶಿವಸೇನೆ, ಮೋದಿ ಬುಲೆಟ್‌ ರೈಲು ಯೋಜನೆಗೆ ವಿಘ್ನ!

ಮೋದಿ ಬುಲೆಟ್‌ ರೈಲು ಯೋಜನೆಗೆ ಈಗ ಕುತ್ತು| ಅದು ನಮ್ಮ ಆದ್ಯತೆಯಲ್ಲ: ಶಿವಸೇನೆ

Shiv Sena Critique Indicates Trouble For PM Modi Bullet Train Project
Author
Bangalore, First Published Nov 28, 2019, 8:12 AM IST

ಮುಂಬೈ[ನ.28]: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶಿವಸೇನೆಯ ಉದ್ಧವ್‌ ಠಾಕ್ರೆ ಅವರು ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮುಂಬೈ- ಅಹಮದಾಬಾದ್‌ ಬುಲೆಟ್‌ ರೈಲು ಯೋಜನೆಗೆ ವಿಘ್ನ ಎದುರಾಗಿದೆ.

ಅವ್ರೂ ಬರ್ಲಿ: ಪ್ರಮಾಣವಚನಕ್ಕೆ ಮೋದಿ, ಶಾಗೂ ಆಮಂತ್ರಣ ಇರ್ಲಿ!

ನಮ್ಮ ಸರ್ಕಾರದ ಆದ್ಯತೆ ರೈತರೇ ಹೊರತು ಬುಲೆಟ್‌ ರೈಲು ಯೋಜನೆಯಲ್ಲ ಎಂದು ಶಿವಸೇನೆಯ ನಾಯಕ, ಮಾಜಿ ಸಚಿವ ದೀಪಕ್‌ ಕೇಸರ್ಕರ್‌ ಅವರು ತಿಳಿಸಿದ್ದಾರೆ. ಮುಂಬೈನಿಂದ ಅಹಮದಾಬಾದ್‌ಗೆ ಹೋಗಲು 3500 ರು. ತ್ಯಜಿಸಬೇಕು ಎಂದಾದಲ್ಲಿ, ವಿಮಾನದಲ್ಲಿ ಹೋಗುವ ಆಯ್ಕೆಯೂ ಇದೆ. ಹಾಗಂತ ನಾವು ಯಾವುದನ್ನೂ ವಿರೋಧಿಸುತ್ತಿಲ್ಲ. ನಮ್ಮ ಮೊದಲ ಆದ್ಯತೆ ಏನಿದ್ದರೂ ರೈತರು ಎಂದು ಅವರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಯೋಜನಾ ವೆಚ್ಚದಲ್ಲಿ ಶೇ.25ರಷ್ಟನ್ನು ಪಾವತಿಸಬೇಕಿರುವ ಮಹಾರಾಷ್ಟ್ರ ಸರ್ಕಾರ, ಈ ಮೊತ್ತದಲ್ಲಿ ಕಡಿತ ಮಾಡುವ ಇಲ್ಲವೇ, ಯೋಜನೆಗೆ ಹಣ ನೀಡದೇ ಇರುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

Follow Us:
Download App:
  • android
  • ios