ನವದೆಹಲಿ[ಡಿ.31]: ದೇಶದ ಶ್ರೀಮಂತ ದೇಗುಲ ಪೈಕಿ ಒಂದಾದ ಮಹಾರಾಷ್ಟ್ರದ ಅಹಮದ್‌ನಗರದಲ್ಲಿರುವ ಶಿರಡಿ ಸಾಯಿ ಬಾಬಾ ದೇಗುಲಕ್ಕೆ 2019ರಲ್ಲಿ ದಾಖಲೆಯ 287 ಕೋಟಿ ರು. ದೇಣಿಗೆ ಹರಿದು ಬಂದಿದೆ.

ಇದರಲ್ಲಿ 19 ಕೆ.ಜಿ. ಚಿನ್ನ ಮತ್ತು 392 ಕೆ.ಜಿ. ಬೆಳ್ಳಿ ಸೇರಿದೆ. ದೇಣಿಗೆ ಹಣದ ಪೈಕಿ 60 ಕೋಟಿ 84 ಲಕ್ಷ ರು. ನಗದು ರೂಪದಲ್ಲಿ ನೀಡಲಾಗಿದೆ. 23 ಕೋಟಿ 35 ಲಕ್ಷ ರು.ಗಳನ್ನು ಚೆಕ್‌ ಹಾಗೂ ಡಿ.ಡಿ. ಡಿಪಾಸಿಟ್‌ ಆಗಿ ನೀಡಲಾಗಿದೆ. 2.17 ಕೋಟಿ ರು.ಗಳನ್ನು ಮನಿ ಆರ್ಡರ್‌ ಮಾಡಲಾಗಿದೆ. ಡಿಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಮೂಲಕ 17 ಕೋಟಿ ರು. ಹರಿದುಬಂದಿದೆ.

ಈ ಮುನ್ನ 2018 ಡಿಸೆಂಬರ್‌ 22ರಿಂದ 2019 ಜ.1ರ ಅವಧಿಯಲ್ಲಿ 14.54 ಕೋಟಿ ರು. ದೇಣಿಗೆ ಹರಿದುಬಂದಿದ್ದು ದಾಖಲೆ ಎನಿಸಿಕೊಂಡಿತ್ತು.